twitter
    For Quick Alerts
    ALLOW NOTIFICATIONS  
    For Daily Alerts

    'ಜೋರು' ಎಂಬ ಪದಕ್ಕೆ ಇನ್ನೊಂದು ಹೆಸರು ಕೊಡ್ತೀರಾ.?

    By Harshitha
    |

    'ರಭಸ', 'ವೇಗ', 'ಚುರುಕು', 'ಬಿರುಸು'... ಹೀಗೆ 'ಜೋರು' ಎಂಬ ಪದಕ್ಕೆ ಅನೇಕ ಸಮಾನಾರ್ಥಕ ಪದಗಳಿವೆ.

    ಅರೇ.. ಇದೇನಪ್ಪಾ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಕನ್ನಡ ಪಾಠ ಯಾವಾಗಿಂದ ಶುರು ಆಯ್ತು ಅನ್ಕೊಂಡ್ರಾ.? ಅಷ್ಟಕ್ಕೂ, 'ಜೋರು' ಎಂಬ ಪದಕ್ಕೆ ಇನ್ನೊಂದು ಹೆಸರು ಕೊಡ್ತೀರಾ.? ಅಂತ ನಾವು ಕೇಳ್ತಿಲ್ಲ. ಬದಲಾಗಿ ರೋರಿಂಗ್ ಸ್ಟಾರ್ ಶ್ರೀಮುರಳಿ ಕೇಳ್ತಿದ್ದಾರೆ.

    ಅದ್ಯಾಕೆ ಅಂದ್ರೆ, 'ಜೋರು' ಎಂಬ ಪದಕ್ಕೆ ಇರುವ ಇನ್ನೊಂದು ಹೆಸರೇ ಶ್ರೀಮುರಳಿ ಅವರ ಮುಂದಿನ ಚಿತ್ರದ ಶೀರ್ಷಿಕೆ. ತಮ್ಮ ಮುಂದಿನ ಚಿತ್ರ ಟೈಟಲ್ ಏನಿರಬಹುದು ಅಂತ ಅಭಿಮಾನಿಗಳೇ ಗೆಸ್ ಮಾಡಲಿ ಎಂದು ಫೇಸ್ ಬುಕ್ ನಲ್ಲಿ ನಟ ಶ್ರೀಮುರಳಿ ಒಂದು ಪೋಸ್ಟ್ ಹಾಕಿದ್ದಾರೆ.

    ಚೇತನ್ ನಿರ್ದೇಶನದಲ್ಲಿ 'ಟ್ರೆಂಡ್' ಬದಲಿಸಿದ ಶ್ರೀಮುರಳಿ ಚೇತನ್ ನಿರ್ದೇಶನದಲ್ಲಿ 'ಟ್ರೆಂಡ್' ಬದಲಿಸಿದ ಶ್ರೀಮುರಳಿ

    Can you guess the title of Srimuralis upcoming film title.?

    ನಟ ಶ್ರೀಮುರಳಿ ಕೊಟ್ಟಿರುವ ಕ್ಲೂ ಮೇರೆಗೆ, ಅವರ ಮುಂದಿನ ಚಿತ್ರದ ಶೀರ್ಷಿಕೆ ಏನಿರಬಹುದು ಅಂತ ಹಲವರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಕೆಲವರು 'ರಭಸ' ಅಥವಾ 'ವೇಗಧೂತ' ಇರಬಹುದು ಅಂತ ಊಹೆ ಮಾಡ್ತಿದ್ದಾರೆ.

    ಹೊಸ ಚಿತ್ರಕ್ಕಾಗಿ ಹೊಸ ಅವತಾರ ಎತ್ತಿದ ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಸ ಚಿತ್ರಕ್ಕಾಗಿ ಹೊಸ ಅವತಾರ ಎತ್ತಿದ ರೋರಿಂಗ್ ಸ್ಟಾರ್ ಶ್ರೀಮುರಳಿ

    ಅಸಲಿಗೆ, ಶ್ರೀಮುರಳಿ ಮುಂಬರುವ ಚಿತ್ರದ ಟೈಟಲ್ ಏನು ಅಂತ ನಮಗೂ ಗೊತ್ತಿಲ್ಲ. ಆದಷ್ಟು ಬೇಗ ರಿವೀಲ್ ಮಾಡುವೆ ಅಂತಾರೆ ನಟ ಶ್ರೀಮುರಳಿ. ಅಂದ್ಹಾಗೆ, ಶ್ರೀಮುರಳಿ ಗೆ ಈ ಬಾರಿ ಆಕ್ಷನ್ ಕಟ್ ಹೇಳ್ತಿರೋದು 'ಬಹದ್ದೂರ್' ಚೇತನ್.

    'ಬಹದ್ದೂರ್', 'ಭರ್ಜರಿ' ಅಂತ ಹಿಟ್ ಸಿನಿಮಾಗಳನ್ನ ನೀಡಿರುವ ಚೇತನ್ ಇದೀಗ ಶ್ರೀಮುರಳಿ ಚಿತ್ರವನ್ನ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬಿಜಿಯಾಗಿದೆ.

    English summary
    Can you guess the title of Srimurali's upcoming film title.?
    Wednesday, June 13, 2018, 17:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X