ತಮಿಳು ಪತ್ರಿಕೆಗೆ ಫೋಸು ನೀಡಿರುವ ಕನ್ನಡದ ನಟಿಯನ್ನು ಗುರುತಿಸಬಲ್ಲಿರಾ?
ಚಿತ್ರದಲ್ಲಿ ಕಾಣುತ್ತಿರುವ ತಮಿಳು ಸಾಪ್ತಾಹಿಕ ಪತ್ರಿಕೆಯ ಮುಖಪುಟ್ಟದಲ್ಲಿ ಕಾಣುತ್ತಿರುವ ಮುದ್ದು ಮುಖದ ಚಿನ್ನಾರಿ ಈಗ ದಕ್ಷಿಣ ಭಾರತದ ಹೆಸರಾಂತ ಸಿನಿಮಾ ನಟಿ.
Recommended Video
ಕಪ್ಪು ಬಿಳುಪಿನ ಚಿತ್ರ ನೋಡಿ ಯಾರೊ ಹಳೆಯ ನಟಿಯೆಂದು ನೀವು ಊಹಿಸಿದ್ದಲ್ಲಿ ನಿಮ್ಮ ಊಹೆ ಸುಳ್ಳಾಗಲಿದೆ. ಏಕೆಂದರೆ ಈ ಮುದ್ದು ಮುಖದ ಪೋರಿ ಹೊಸ ನಟಿ. ಇವರು ನಟಿಸಿರುವ 10 ಸಿನಿಮಾಗಳು ಈವರೆಗೆ ಬಿಡುಗಡೆ ಆಗಿವೆ. ಮೂರು ಸಿನಿಮಾಗಳು ಬಿಡುಗಡೆ ಆಗಲಿವೆ.
ಕನ್ನಡದ ಈ ನಟಿ ಕನ್ನಡದಲ್ಲಿ ಸಾಕಷ್ಟು ಹೆಸರು ಮಾಡಿದವರು. ಬಹುತೇಕ ಸಿನಿಪ್ರಿಯರಿಗೆ ಈಕೆಯ ಹೆಸರು ಗೊತ್ತು. ಕನ್ನಡದಲ್ಲಿ ಮೊದಲ ಸಿನಿಮಾ ಮಾಡಿರುವ ಈ ಮುದ್ದು ಮುಖದ ನಟಿ ಈ ವರೆಗೆ ನಾಲ್ಕು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಐದನೇಯ ಸಿನಿಮಾ ಬಿಡುಗಡೆಗೆ ತಯಾರಾಗಿದೆ.

ಯಾರೆಂದು ಊಹಿಸಲಾಗಲಿಲ್ಲವೆ?
ಯಾರೆಂದು ಊಹಿಸಲಾಗಲಿಲ್ಲವೇ. ಅವರೇ ಕನ್ನಡದ ಕ್ಯೂಟ್ ನಟಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಹೌದು, ಚಿತ್ರದಲ್ಲಿ ಗುಂಡ-ಗುಂಡಗೆ ಮುದ್ದಾಗಿ ಕಾಣುತ್ತಿರುವ ಇವರು ರಶ್ಮಿಕಾ ಮಂದಣ್ಣ. ಆಗಿನ ರಶ್ಮಿಕಾ ಗೂ ಈಗಿನ ರಶ್ಮಿಕಾಗೂ ಸಾಕಷ್ಟು ವ್ಯತ್ಯಾಸ ಇದೆ ಅಲ್ಲವೆ?

2001 ರಲ್ಲಿ ತೆಗೆದ ಚಿತ್ರ ಇದು
ತಮಿಳು ಮಾಸ ಪತ್ರಿಕೆಯೊಂದಕ್ಕೆ 2001 ರಲ್ಲಿ ಈ ಚಿತ್ರ ತೆಗೆಯಲಾಗಿತ್ತಂತೆ. ಈ ಸಂಚಿಕೆಯನ್ನು ರಶ್ಮಿಕಾ ಅವರ ತಾಯಿ ಜೋಪಾನವಾಗಿ ಎತ್ತಿಟ್ಟಿದ್ದರಂತೆ. ಅದರ ಚಿತ್ರವನ್ನು ಅವರು ಈಗ ಹಂಚಿಕೊಂಡಿದ್ದಾರೆ. 'ನಿಮ್ಮೆಲ್ಲರ ಪ್ರೀತಿ ಗಳಿಸಬೇಕೆಂಬುದು ವಿಧಿ ಲಿಖಿತ ಆಗಿರಬಹುದು' ಎಂದಿದ್ದಾರೆ ರಶ್ಮಿಕಾ.

ನನ್ನ ಜೀವನದ ಬಗ್ಗೆ ಸಂತೋಷವಿದೆ: ರಶ್ಮಿಕಾ
ನನ್ನ ಜೀವನ ಎಲ್ಲಿಂದಲೋ ಪ್ರಾರಂಭವಾಗಿ ಇಲ್ಲಿಯವರೆಗೆ ಬಂದಿರುವುದಕ್ಕೆ ನನಗೆ ಸಂತೋಷವಿದೆ. ನನ್ನ ಜೀವನದ ಬಗ್ಗೆ ತೃಪ್ತಿಯೂ ಇದೆ. ನಾನು ಕೆಲಸ ಮಾಡಿದ, ಮಾಡುತ್ತಿರುವ, ಮಾಡಲಿರುವ ಎಲ್ಲಾ ವ್ಯಕ್ತಿಗಳನ್ನೂ ನಾನು ಪ್ರೀತಿಸುತ್ತೇನೆ. ಏನೇ ಹೋರಾಟ ಮಾಡಿಯಾದರೂ ಗುರಿಯನ್ನು ತಲುಪುತ್ತೇನೆ ಎಂದು ಭಾವುಕರಾಗಿ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ ರಶ್ಮಿಕಾ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ರಶ್ಮಿಕಾ ಮಂದಣ್ಣ ಅವರು ತಮ್ಮ ಹಲವು ಹಳೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಸಿನಿಮಾಕ್ಕೆ ಬರುವ ಮುನ್ನ ಫ್ಯಾಷನ್ ಶೋ ನಲ್ಲಿ ಗೆದ್ದ ಚಿತ್ರವನ್ನು ಹಂಚಿಕೊಂಡು, 'ಸಿನಿಮಾಕ್ಕೆ ಬರಲು ಕಾರಣವಾದ ಚಿತ್ರ' ಎಂದು ಒಕ್ಕಣೆ ಬರೆದುಕೊಂಡಿದ್ದರು.


Click it and Unblock the Notifications











