ಎಸ್. ಎಂ ಕೃಷ್ಣ ಹಾಗೂ ಅಣ್ಣಾವ್ರ ಮಧ್ಯೆ ನಿಂತಿರುವ ನಟಿ ಯಾರು? ಕಥೆಯೇನು?
ನಟಸಾರ್ವಭೌಮ ರಾಜ್‌ಕುಮಾರ್ ಅವರ 96ನೇ ಹುಟ್ಟುಹಬ್ಬವನ್ನು ಬಹಳ ಸಗಡರದಿಂದ ಆಚರಿಸಲಾಯಿತು. ಶಿವಣ್ಣ ದಂಪತಿ, ರಾಘಣ್ಣ ದಂಪತಿ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಪುಣ್ಯಭೂಮಿಗೆ ಭೇಟಿ ನೀಡಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಸಾಕಷ್ಟು ಅಭಿಮಾನಿಗಳು ಇಂದು ರಾಜ್‌ಕುಮಾರ್ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಹಾಗೂ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟನಿಗೆ ನುಡಿನಮನ ಸಲ್ಲಿಸಿದ್ದಾರೆ. 1929ರ ಏಪ್ರಿಲ್ 24ರಂದು ದೊಡ್ಡ ಗಾಜನೂರಿನಲ್ಲಿ ಮುತ್ತುರಾಜ್ ಹುಟ್ಟಿ ಬೆಳೆದವರು. 1954ರಲ್ಲಿ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದರು.

ತಮ್ಮ ಸಿನಿಮಾಗಳು, ಕನ್ನಡ ಪ್ರೀತಿ ಅಭಿಮಾನ, ಆದರ್ಶ ವ್ಯಕ್ತಿತ್ವದಿಂದ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಎಷ್ಟು ಜನ ಅಣ್ಣಾವ್ರನ್ನು ಫೋಟೊ, ಸಿನಿಮಾಗಳಲ್ಲಿ ಮಾತ್ರ ನೋಡಿದ್ದಾರೆ. ಕೆಲವರಿಗೆ ಮಾತ್ರ ವರನಟನನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಅವರೊಟ್ಟಿಗೆ ಕಾಲ ಕಳೆಯುವ, ಒಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಭಾಗ್ಯ ಧಕ್ಕಿತ್ತು. ಇವತ್ತಿನ ಕಾಲದ ಸಾಕಷ್ಟು ನಟ, ನಟಿಯರು ಕೂಡ ಅಣ್ಣಾವ್ರರನ್ನು ಹತ್ತಿರದಿಂದ ನೋಡಲು ಸಾಧ್ಯವಾಗಲಿಲ್ಲ.
ಅಂದಹಾಗೆ ನಟಸಾರ್ವಭೌಮನನ್ನು ನೋಡಿದ ಅನುಭವವನ್ನು ನಟಿ ಮೇಘನಾ ಗಾಂವ್ಕರ್ ಹಂಚಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅಣ್ಣಾವ್ರ ಜೊತೆ ನಿಂತಿದ್ದ ಫೋಟೊವೊಂದನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಣ್ಣಾವ್ರು ಹಾಗೂ ಮಾಜಿ ಸಿಎಂ ಎಸ್. ಕೃಷ್ಣ ನಡುವೆ ಆಕೆ ನೀಂತಿದ್ದರು. 19 ವರ್ಷಗಳಿಗೂ ಮುನ್ನ ಕ್ಲಿಕ್ಕಿಸಿರುವ ಫೋಟೊ ಅದು. ಹಾಗಾಗಿ ಮೊದಲ ನೋಟಕ್ಕೆ ಫೋಟೊದಲ್ಲಿ ಇರುವ ನಟಿ ಯಾರು ಎಂದು ಕೆಲವರಿಗೆ ಗೊತ್ತಾಗುವುದಿಲ್ಲ. ಈ ಫೋಟೊ ಹಿಂದಿನ ಕಥೆಯನ್ನು ಆಕೆ ವಿವರಿಸಿದ್ದಾರೆ.
"ನಾನು ಚಿಕ್ಕವನಿದ್ದಾಗ ಅವರನ್ನು ಒಮ್ಮೆ ಭೇಟಿಯಾಗಿದ್ದೆ ಎಂದು ಭಾವಿಸುತ್ತೇನೆ, ಇನ್ನೊಮ್ಮೆ ಈ ಸಂದರ್ಭ. ಆ ವರ್ಷದ ಅತ್ಯುತ್ತಮ ಕನ್ನಡಿಗ ಪ್ರಶಸ್ತಿಯನ್ನು ಮತ್ತೊಬ್ಬ ದಂತಕಥೆ ನೀಡುವ ವ್ಯಕ್ತಿಗೆ ಪ್ರದಾನ ಮಾಡುತ್ತಿದ್ದ ಕ್ಷಣ. ನಾನು ಆಗ ಶಾಲೆ ಮುಗಿಸಿದ್ದೆ. ಪಾಕೆಟ್ ಮನಿಗಾಗಿ ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದೆ. ಆದ್ದರಿಂದ ಚಾನೆಲ್ ನನ್ನನ್ನು ಕಾರ್ಯಕ್ರಮಕ್ಕೆ ಬರಲು ಕೇಳಿತು. ಕಾರ್ಯಕ್ರಮದ ನೃತ್ಯ ಸಂಯೋಜನೆ ಮಾಡುತ್ತಿದ್ದ ಬಿ. ಜಯಶ್ರೀ ಅಮ್ಮ 23 ಕೆಜಿ ಭಾರದ ಪ್ರಶಸ್ ಫಲಕವನ್ನು ಹೊತ್ತುಕೊಂಡು ವೇದಿಕೆಯ ಮೇಲೆ ಹೋಗುತ್ತೇನೆಯೇ ಎಂದು ಕೇಳಿದರು. ನಾನು ಹೌದು ಎಂದು ಹೇಳಿದೆ. ಈ ಹಿಂತಿರುಗಿ ನೋಡಿದಾಗ ಸಂತೋಷವಾಗುತ್ತಿದೆ, ಅಣ್ಣಾವ್ರ ಜೊತೆ ಸ್ವಲ್ಪ ಮಟ್ಟಿಗೆ ವೇದಿಕೆಯನ್ನು ಹಂಚಿಕೊಳ್ಳಲು ನನಗೆ ಅವಕಾಶ ಸಿಕ್ಕಿದ್ದು ಖುಷಿ ಆಗುತ್ತದೆ" ಎಂದು ಮೇಘನಾ ರಾಜ್ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಅಂದು ಅಣ್ಣಾವ್ರು ತಮ್ಮನ್ನು ಮಾತನಾಡಿಸಿದ್ದರ ಬಗ್ಗೆಯೂ ಮೇಘನಾ ತಿಳಿಸಿದ್ದಾರೆ. "ವೇದಿಕೆ ಏರಿದ ಕ್ಷಣ, ಇಡೀ ಪತ್ರಿಕಾ/ಮಾಧ್ಯಮವು ಈ ದಂತಕಥೆಗಳ ನಡುವೆ ನಿಂತು ನಿರಂತರವಾಗಿ ಫೋಟೊಗಳನ್ನು ಕ್ಲಿಕ್ಕಿಸುವುದನ್ನು ನಾನು ನೋಡಿದೆ. ಇದು ನನ್ನ ಮೊದಲ ಮಾಧ್ಯಮ ಅನುಭವ. ಪ್ರಶಸ್ತಿ ಪದಕ ತುಂಬಾ ಭಾರವಾಗಿತ್ತು. ಅದನ್ನು ನೋಡಿ "ಇದು ತುಂಬಾ ಭಾರವಾಗಿದೆಯೇ?" ಎಂದು ಅಣ್ಣಾವ್ರು ಕೇಳಿದ್ದರು. ನಾನು ಹೌದು ಎಂದು ಮುಗುಳ್ನಕ್ಕೆ. ಸ್ವಲ್ಪ ಸಮಯದ ನಂತರ, ಭಾಷಣ ಪ್ರಾರಂಭವಾದಾಗ, ಆ 23 ಕೆಜಿ ಪ್ರಶಸ್ತಿಯನ್ನು ಹಿಡಿಯಲು ಸಾಧ್ಯವಾಗದೇ ಸದ್ದಿಲ್ಲದೇ ವೇದಿಕೆಯಿಂದ ಹೊರಬಂದೆ ಮತ್ತು ಅಷ್ಟೇ" ಎಂದು ತಿಳಿಸಿದ್ದಾರೆ.
"ಮರುದಿನ ಬೆಳಿಗ್ಗೆ, ನಾನು ಪ್ರತಿ ಸುದ್ದಿ ಪತ್ರಿಕೆ ಮತ್ತು ಪ್ರತಿ ಸುದ್ದಿ ಚಾನೆಲ್‌ನ ಮುಖಪುಟದಲ್ಲಿ ನಾನು ಈ ದಂತಕಥೆಗಳ ಜೊತೆ ಇದ್ದೆ. ನಾನು ದೊಡ್ಡದಾಗಿ ಏನೂ ಮಾಡಲಿಲ್ಲ. ಆದರೆ ನಾನು ಧನ್ಯಳಾಗಿದ್ದೇನೆ ಎನಿಸಿತ್ತು. ಅದು ಈ ಅಮೂಲ್ಯ ಫೋಟೊ ಕಥೆ" ಎಂದು ಮೇಘನಾ ಗಾಂವ್ಕರ್ ಬರೆದುಕೊಂಡಿದ್ದಾರೆ. 2010ರಲ್ಲಿ 'ನಮ್ ಏರಿಯಾಲ್ ಒಂದ್ ದಿನ' ಚಿತ್ರದ ಮೂಲಕ ನಾಯಕಿಯಾಗಿ ಮೇಘನಾ ಚಿತ್ರರಂಗಕ್ಕೆ ಬಂದಿದ್ದರು.


Click it and Unblock the Notifications











