For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿಗರ ಪ್ರಯೋಗಾತ್ಮಕ ಚಿತ್ರ 'ಕ್ಯಾಂಡಿ ಫ್ಲಿಪ್' ನೆಟ್ ಫ್ಲಿಕ್ಸ್ ನಲ್ಲಿ ಲಭ್ಯ

  |

  ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಲ್ಕಿ ಕೊಯೆಚ್ಲಿನ್ ಹಾಗೂ ಗುಲ್ಶನ್ ದೇವಯ್ಯ ಅಭಿನಯದ 'ಕ್ಯಾಂಡಿ ಫ್ಲಿಪ್' - ಹಿಂದಿ ಹಾಗೂ ಇಂಗ್ಲೀಷ್ ಭಾಷೆಯ ಸಿನಿಮಾ ಈಗ ನೆಟ್ ಫ್ಲಿಕ್ಸ್ ಅಲ್ಲಿ ಲಭ್ಯವಿದೆ.

  ಶಾಃ ನವಾಜ್.ಎನ್.ಕೆ ನಿರ್ದೇಶನದ ಚಿತ್ರವಿದು. ಗೋವಾ ಸುತ್ತ ಮುತ್ತ ಚಿತ್ರೀಕರಣಗೊಂಡ ಮಾದಕವಾದ ಡ್ರಗ್ಸ್ ಬಗ್ಗೆ ತಯಾರಿಸಲಾದ ಈ ಚಿತ್ರ ದೇಶ ವಿದೇಶಗಳಿಗೂ ಸಹ ಕಾಡುವ ಸಮಸ್ಯೆ ಕುರಿತಾದದ್ದು.

  ಬೆಂಗಳೂರಿನವರಾದ ಸುರೇಂದ್ರ.ಕೆ.ಹೆಗ್ಡೆ ಹಾಗೂ ಬಾಲಸುಬ್ರಮಣ್ಯಂ.ಟಿ.ಸಿ '23 ಎಂಟರ್ಟೈನ್ಮೆಂಟ್' ಅಡಿಯಲ್ಲಿ ನಿರ್ಮಾಣ ಮಾಡಿರುವ ಸಿನಿಮಾದಲ್ಲಿ ಪ್ರಶಾಂತ್ ಪ್ರಕಾಶ್, ಪ್ರಕಾಶ್ ರಾಜ್ ಹಾಗೂ ವಲೇರಿಯ ಮುಖ ಭೂಮಿಕೆಯಲ್ಲಿ ಇದ್ದಾರೆ.

  ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಕ್ಯಾಂಡಿ ಫ್ಲಿಪ್' ವೀಕ್ಷಣೆ ಮಾಡಲು ನೆಟ್ ಫ್ಲಿಕ್ಸ್ ಸರಿಯಾದ ಮಾರ್ಗ ಎನ್ನುತ್ತಾರೆ ನಿರ್ಮಾಪಕ ಸುರೇಂದ್ರ ಹೆಗ್ಡೆ.

  ಈಗಿನ ಕಾಲದಲ್ಲಿ ವಿಶ್ವದಾದ್ಯಂತ ಯುವಕರಲ್ಲಿ ಡ್ರಗ್ಸ್ ಸೇವನೆ ಜಾಸ್ತಿ ಆಗುತ್ತಿದೆ. ಯುವಕರು ಇಂತಹ ಡ್ರಗ್ಸ್ ಸೇವನೆಯಿಂದ ಜೀವನದಲ್ಲಿ ಆಗುವ ದುಷ್ಪರಿಣಾಮದ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ. ಈ ವಿಚಾರದ ಬಗ್ಗೆ ತಿಳುವಳಿಕೆ ಮೂಡಿಸುವುದು ಮುಖ್ಯ ಅಂತಾರೆ ನಟಿ ಕಲ್ಕಿ. ನರೆನ್ ಚಂದವರ್ಕರ್ ಹಿನ್ನಲೆ ಸಂಗೀತ, ನಾಗರಾಜ್ ರತಿನಮ್ ಛಾಯಾಗ್ರಹಣ, ಅನಾದಿ ಆತಲೇ ಸಂಕಲನ 'ಕ್ಯಾಂಡಿ ಫ್ಲಿಪ್' ಸಿನಿಮಾಕ್ಕಿದೆ.

  English summary
  Kalki Koechlin and Gulshan Devaiah starrer Candy Filp movie is available in Netflix.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X