ಸೂರಿ ಕಾರು ಚಾಲಕ 'ಕೆಂಡಸಂಪಿಗೆ' ಹೀರೋ ಆದ ಕಥೆ

By Harshitha

ಚಿತ್ರರಂಗಕ್ಕೆ ಕಾಲಿಟ್ಟ ಏಳು ವರ್ಷಗಳಲ್ಲಿ ನಿರ್ದೇಶಕ ದುನಿಯಾ ಸೂರಿ ಆರು ಸಿನಿಮಾಗಳನ್ನ ಮಾಡಿದ್ದಾರೆ. ಅದರಲ್ಲಿ ಐದು 'ಸ್ಟಾರ್' ಸಿನಿಮಾಗಳು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳಿರುವ ಸೂರಿ ರಾಜ್ಯಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ.

ಇವಿಷ್ಟೇ ಅಲ್ಲದೇ, ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಳ್ಳುವುದಕ್ಕೆ ತಿಣುಕಾಡುತ್ತಿದ್ದ ದುನಿಯಾ ವಿಜಿ ಮತ್ತು ಶ್ರೀನಗರ ಕಿಟ್ಟಿಗೆ 'ಸೆಲೆಬ್ರಿಟಿ' ಪಟ್ಟವನ್ನ ತಂದುಕೊಟ್ಟ ಖ್ಯಾತಿ ಕೂಡ ದುನಿಯಾ ಸೂರಿ ಅವರಿಗೇ ಸಲ್ಲಬೇಕು. ಇಂತಿಪ್ಪ ದುನಿಯಾ ಸೂರಿ ಇದೀಗ 'ಕೆಂಡಸಂಪಿಗೆ-ಪಾರ್ಟ್ 2 ಗಿಣಿಮರಿ ಕೇಸ್' ಸಿನಿಮಾ ರೆಡಿ ಮಾಡಿರುವ ವಿಷಯ ನಿಮಗೆ ಗೊತ್ತಿದೆ.

Duniya Soori's Kendasampige

ಆದ್ರೆ, 'ಕೆಂಡಸಂಪಿಗೆ' ಹೀರೋ ವೃತ್ತಾಂತದ ಬಗ್ಗೆ ನಿಮಗೆ ಗೊತ್ತಿರಲಿಕ್ಕಿಲ್ಲ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ನಲ್ಲಿ ಮುಗ್ಧ ಹುಡುಗನಂತೆ ಕಾಣುವ ಯುವ ಪ್ರತಿಭೆಯ ಹೆಸರು ಸಂತೋಷ್ ರೇವಾ. 'ಕಡ್ಡಿಪುಡಿ' ಚಿತ್ರವನ್ನ ನೀವು ಕಣ್ಣು ಮಿಟುಕಿಸದೆ ನೋಡಿದರೆ ಈ ಹುಡುಗನನ್ನ ಪರಿಚಯ ನಿಮಗೆ ಇರುತ್ತೆ.

'ಕಡ್ಡಿಪುಡಿ' ಚಿತ್ರದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಂಡಿದ್ದ ಸಂತೋಷ್ ರೇವಾ ಇದೀಗ 'ಕೆಂಡಸಂಪಿಗೆ' ಚಿತ್ರದ ಫುಲ್ ಫ್ಲೇಡ್ಜ್ಡ್ ಹೀರೋ. ಇಷ್ಟಕ್ಕೆ ನಿಮಗೆ ಆಶ್ಚರ್ಯ ಅನಿಸಿದರೆ, ನೀವು ಬಾಯಿ ಮೇಲೆ ಬೆರಳಿಡುವ ಮತ್ತೊಂದು ಸಂಗತಿ ಹೇಳ್ತೀವಿ ಕೇಳಿ.

Duniya Soori's Kendasampige

ಅಸಲಿಗೆ ಈ ಸಂತೋಷ್ ರೇವಾ ದುನಿಯಾ ಸೂರಿಯ ಕಾರು ಚಾಲಕ! ಕಳೆದ ಕೆಲ ವರ್ಷಗಳಿಂದ ಸೂರಿ ಬಳಿ ಕೆಲಸ ಮಾಡುತ್ತಿರುವ ಸಂತೋಷ್ ಗೆ ನಿರ್ದೇಶಕನಾಗುವ ಆಸೆ ಇತ್ತು. ಮೊದಲು ಯೋಗರಾಜ್ ಭಟ್ಟರ ಗರಡಿಯಲ್ಲಿ ಸಹಾಯಕನಾಗಿ ಕ್ಲಾಪ್ ಬೋರ್ಡ್ ಹಿಡಿಯುತ್ತಿದ್ದ ಸಂತೋಷ್, ನಂತ್ರ ಸೂರಿ ಅಡ್ಡಕ್ಕೆ ಬಂದರು.

'ಅಣ್ಣಾ ಬಾಂಡ್' ಮತ್ತು 'ಕಡ್ಡಿಪುಡಿ' ಚಿತ್ರಗಳಲ್ಲಿ ಸೂರಿಗೆ ಅಸೋಸಿಯೇಟ್ ಆಗಿದ್ದ ಸಂತೋಷ್, ಸೂರಿ ಹೋದ ಕಡೆಯೆಲ್ಲಾ ಅವರ ಕಾರು ಓಡಿಸುವ ಚಾಕರಿ ಕೂಡ ಮಾಡುತ್ತಾರೆ. ಹಾಗೆ, 'ಕೆಂಡಸಂಪಿಗೆ' ನಾಯಕ-ನಾಯಕಿಯನ್ನ ತಲಾಶ್ ಮಾಡುತ್ತಿರುವಾಗ ಎಲ್ಲಾ ಆಂಗಲ್ ನಿಂದಲೂ ಪಾತ್ರಕ್ಕೆ ಸಂತೋಷ್ ಸೂಕ್ತ ಅಂತ ಅನಿಸಿದ್ದೇ ತಡ, ಸಂತೋಷ್ ನಾಯಕನಾಗಬೇಕು ಅಂತ ಸೂರಿ ಹೇಳಿ ಬಿಟ್ಟರಂತೆ. [ದುನಿಯಾ ಸೂರಿ 'ಕೆಂಡಸಂಪಿಗೆ'ಯಲ್ಲಿ ಅಂಥದ್ದೇನಿದೆ..?]

Duniya Soori's Kendasampige

ಗುರುಗಳ ಅಪ್ಪಣೆಯಂತೆ ಈಗ ಬಣ್ಣ ಹಚ್ಚಿರುವ ಸಂತೋಷ್, ತಮ್ಮ ಹೆಸರನ್ನ ವಿಕ್ಕಿ ಅಂತ ಕೂಡ ಬದಲಾಯಿಸಿಕೊಂಡಿದ್ದಾರೆ. ಇನ್ನೂ ನಾಯಕಿ ಶ್ವೇತಾ ಕಾಮತ್ ಮಂಗಳೂರಿನ ರೇಡಿಯೋ ಒಂದರ ಜಾಕಿ. ಆಕೆ ಕೂಡ 'ಕೆಂಡಸಂಪಿಗೆ'ಗಾಗಿ ಮಾನ್ವಿತಾ ಹರೀಶ್ ಅಂತ ಹೊಸ ನಾಮಕರಣ ಮಾಡಿಕೊಂಡಿದ್ದಾರೆ.

ಅಂತೂ ಹೊಸ ಮುಖಗಳನ್ನಿಟ್ಟುಕೊಂಡು ದುನಿಯಾ ಸೂರಿ ಹೊಸ ಪ್ರಯೋಗ ಮಾಡಿದ್ದಾರೆ. ಅದೃಷ್ಟ ಕೈಹಿಡಿದರೆ ಸೂರಿ ಮರಳಿ ಟ್ರ್ಯಾಕ್ ಗೆ ಬರುವುದರಲ್ಲಿ ಅನುಮಾನವೇ ಇಲ್ಲ. ಕಾರು ಚಾಲಕ ಮುಂದಕ್ಕೆ ಭರವಸೆ ಹೀರೋ ಆಗಿ ಬೆಳೆದರೆ ಅಚ್ಚರಿ ಇಲ್ಲ. (ಏಜೆನ್ಸೀಸ್)

More from Filmibeat

English summary
Santhosh Reva and Shwetha Kamath are making debut in Sandalwood through Duniya Soori's 'Kendasampige'. As per the sources, Hero Santhosh Reva was a Car Driver for Duniya Soori. While the director was in hunt for suitable talents, Soori gave opportunity to Santhosh Rev believing his potentials.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X