»   » ನಟಿ ಪಾರ್ವತಿ ಮೆಲ್ಟನ್ ಮೇಲೆ ಕೇಸು ದಾಖಲು

ನಟಿ ಪಾರ್ವತಿ ಮೆಲ್ಟನ್ ಮೇಲೆ ಕೇಸು ದಾಖಲು

By: ರವಿಕಿಶೋರ್
Subscribe to Filmibeat Kannada
ಇನ್ನೂ ತೆರೆಕಾಣದ ಉಪೇಂದ್ರ ಅಭಿನಯದ 'ಭೀಮೂಸ್ ಬ್ಯಾಂಗ್ ಬ್ಯಾಂಗ್' ಚಿತ್ರದಲ್ಲಿ ಅಭಿನಯಿಸಿರುವ ಪಾರ್ವತಿ ಮೆಲ್ಟನ್ ಮೇಲೆ ಎಮ್ಮಿಗನೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ತೆಲುಗಿನ ಯಮಹೋ ಯಮ ಚಿತ್ರದಲ್ಲಿ ಅಶ್ಲೀಲವಾಗಿ ಅಭಿನಯಿಸಿದ್ದಾರೆಂಬ ಆರೋಪ ಅವರ ಮೇಲಿದೆ.

ಈ ಚಿತ್ರಕ್ಕೆ ಸಂಬಂಧಿಸಿದಂತೆ ಅಶ್ಲೀಲ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 292, 34ರಡಿ ಕೇಸು ನಮೂದಿಸಿಕೊಂಡಿದ್ದಾರೆ.

ಈ ಹಿಂದೆ ಇದೇ ರೀತಿ ಅಸಭ್ಯವಾಗಿ ವಸ್ತ್ರಧಾರಣೆ ಮಾಡಿಕೊಂಡಿದ್ದಾರೆ ಎಂದು ತಾರೆ ಪ್ರಿಯಾಮಣಿ ಹಾಗೂ ಅನುಷ್ಕಾ ಶೆಟ್ಟಿ ವಿರುದ್ಧವೂ ಇದೇ ರೀತಿ ವಿವಾದ ಎದುರಾಗಿತ್ತು. ಈಗ ಪಾರ್ವತಿ ಮೆಲ್ಟನ್ ಮೇಲೆ ಕೇಸು ದಾಖಲಾಗಿದೆ.

ಪೋಸ್ಟರ್ ಗಳಲ್ಲಿನ ಇವರ ಅಸಭ್ಯ ವಸ್ತ್ರಧಾರಣೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಇದೂ ಒಂದು ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸದ್ಯಕ್ಕೆ ಪಾರ್ವತಿ ಮೆಲ್ಟನ್ ಮುಂಬೈನಲ್ಲೇ ವಾಸಿಸುತ್ತಿದ್ದಾರೆ. ಈಕೆಯ ತಾಯಿ ಭಾರತೀಯ ಮೂಲದವರಾದರೆ ತಂದೆ ಜರ್ಮನ್ ದೇಶದವರು. ಹುಟ್ಟಿದ್ದು ಕ್ಯಾಲಿಫೋರ್ನಿಯಾದಲ್ಲಿ. ಭರತನಾಟ್ಯ ಕಲಾವಿದೆಯೂ ಆಗಿರುವ ಈಕೆ ಹಿಂದುಧರ್ಮವನ್ನು ಪಾಲಿಸುತ್ತಿದ್ದಾರೆ.

English summary
A police case was filed on the actresses Parvathi Melton in the Police Station Emmiganur for wearing skimpy costumes in her film 'Yamoho Yamaha'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada