twitter
    For Quick Alerts
    ALLOW NOTIFICATIONS  
    For Daily Alerts

    ಗಣರಾಜ್ಯೋತ್ಸವ ಮರೆತು 'ಕ್ರಾಂತಿ' ಉತ್ಸವ ಮಾಡಿ ಎಂದಿದ್ದ ರಚಿತಾ ರಾಮ್ ವಿರುದ್ಧ ಕೇಸ್!

    By ಫಿಲ್ಮಿಬೀಟ್ ಡೆಸ್ಕ್
    |

    ಎಲ್ಲೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಹವಾ ಜೋರಾಗಿದೆ. ಚಿತ್ರ ಗಣರಾಜ್ಯೋತ್ಸವದಂದು ( ಜನವರಿ 26 ) ತೆರೆಗೆ ಬರಲಿದ್ದು, ದಿನಗಣನೆ ಆರಂಭವಾಗಿದೆ. ಬಿಡುಗಡೆ ದಿನ ಸಮೀಪಿಸುತ್ತಿದ್ದಂತೆ ಚಿತ್ರದ ಟಿಕೆಟ್‌ಗಳನ್ನು ಖರೀದಿಸುವುದಕ್ಕಾಗಿ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದು, ಬುಕಿಂಗ್ ಯಾವಾಗ ಶುರುವಾಗಲಿದೆ ಎಂದು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

    ಇನ್ನು ದರ್ಶನ್ ಅವರ ಕುರಿತ ಯಾವುದೇ ಸುದ್ದಿಯನ್ನೂ ಮಾಧ್ಯಮಗಳು ಪ್ರಸಾರ ಮಾಡುವುದಿಲ್ಲ ಎಂದು ತೀರ್ಮಾನ ಮಾಡಿರುವ ಕಾರಣ ಸ್ವತಃ ದರ್ಶನ್ ಅವರ ಅಭಿಮಾನಿಗಳೇ ಕ್ರಾಂತಿ ಚಿತ್ರದ ಪ್ರಚಾರವನ್ನು ಮಾಡುತ್ತಾ ಬಂದಿದ್ದು, ತಾವೇ ಬ್ಯಾನರ್ ಹಾಗೂ ಫ್ಲೆಕ್ಸ್ ಕಟ್ಟಿ ಚಿತ್ರವನ್ನು ಗೆಲ್ಲಿಸಿ ತೋರಿಸುತ್ತೇವೆ ಎಂದು ತೊಡೆ ತಟ್ಟಿದ್ದಾರೆ. ಹೀಗೆ ವಿವಾದದ ಮೂಲಕವೇ ಆರಂಭಗೊಂಡ ಕ್ರಾಂತಿ ಚಿತ್ರದ ಪ್ರಚಾರದ ವೇಳೆ ಹಲವಾರು ಬಾರಿ ವಿವಾದಗಳು ಎದುರಾದವು ಹಾಗೂ ಆ ವಿವಾದಗಳನ್ನು ಚಿತ್ರತಂಡ ಎದುರಿಸಿ ಗೆದ್ದಿತ್ತು.

    ಸದ್ಯ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ನಟಿ ರಚಿತಾ ರಾಮ್ ನೀಡಿದ ಹೇಳಿಕೆಯೊಂದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೌದು, ಕ್ರಾಂತಿ ಚಿತ್ರದ ಪ್ರಚಾರ ಮಾಡುವ ವೇಳೆ ನಟಿ ರಚಿತಾ ರಾಮ್ ಇಷ್ಟು ವರ್ಷ ಜನವರಿ 26ಕ್ಕೆ ಗಣರಾಜ್ಯೋತ್ಸವ ಮಾಡ್ತಾ ಇದ್ವಿ, ಆದರೆ ಈ ವರ್ಷ ಕ್ರಾಂತಿ ಉತ್ಸವ ಮಾತ್ರ ಎಂದು ನೀಡಿದ್ದ ಹೇಳಿಕೆ ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ನಟಿ ರಚಿತಾ ರಾಮ್ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ರಚಿತಾ ಕೂಡ ಮಾತನಾಡಿ ಆ ರೀತಿ ಮಾತನಾಡಲು ಕಾರಣವೇನೆಂಬುದನ್ನು ತಿಳಿಸಿದ್ದರು. ಆದರೂ ರಚಿತಾ ಹೇಳಿಕ ವಿರುದ್ದ ಕಿಡಿಕಾರುವುದು ನಿಲ್ಲಲಿಲ್ಲ. ಈಗ ಈ ಕಿಡಿ ನಟಿಯ ವಿರುದ್ಧ ದೂರು ನೀಡುವವರೆಗೂ ಬಂದು ನಿಂತಿದೆ.

    ರಚಿತಾ ವಿರುದ್ಧ ಮದ್ದೂರಿನಲ್ಲಿ ದೂರು

    ರಚಿತಾ ವಿರುದ್ಧ ಮದ್ದೂರಿನಲ್ಲಿ ದೂರು

    ಕ್ರಾಂತಿ ಚಿತ್ರದ ಪ್ರಚಾರದ ವೇಳೆ ರಚಿರಾ ರಾಮ್ ಗಣರಾಜ್ಯೋತ್ಸವದ ಕುರಿತು ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ ಅವರು ಮಾತನಾಡಿದ್ದಾರೆ. ರಚಿರಾ ರಾಮ್ ನೀಡಿರುವ ಹೇಳಿಕೆ ದೇಶದ್ರೋಹದ ಹೇಳಿಕೆಯಾಗಿದೆ, ಇದರ ವಿರುದ್ಧ ಕ್ರಮ ಕೈಗೊಂಡು ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಶಿವಲಿಂಗಯ್ಯ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ಈ ವಿಷಯವಾಗಿ ಮಂಡ್ಯ ಜಿಲ್ಲೆಯ ಮದ್ದೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಶಿವಲಿಂಗಯ್ಯ ತಿಳಿಸಿದರು.

    ರಚಿತಾ ನೀಡಿದ್ದ ಹೇಳಿಕೆ ಏನು?

    ರಚಿತಾ ನೀಡಿದ್ದ ಹೇಳಿಕೆ ಏನು?

    ದರ್ಶನ್ ಹಾಗೂ ರಚಿತಾ ರಾಮ್ ನಟನೆಯ ಕ್ರಾಂತಿ ಚಿತ್ರ ಇದೇ ಗಣರಾಜ್ಯೋತ್ಸವದ ದಿನದಂದು ಬಿಡುಗಡೆಯಾಗುತ್ತಿದೆ. ಈ ದಿನ ಬಿಡುಗಡೆಯಾಗುತ್ತಿರುವ ಕಾರಣ ಚಿತ್ರದ ಬಿಡುಗಡೆ ಕುರಿತು ಮಾತನಾಡಿದ ರಚಿತಾ " ಇಷ್ಟು ವರ್ಷ ಜನವರಿ 26 ಅಂತಂದ್ರೆ ರಿಪಬ್ಲಿಕ್ ಡೇ. ಆದರೆ ಈ ವರ್ಷ ಗಣರಾಜ್ಯೋತ್ಸವ ಅನ್ನೋದನ್ನು ಮರೆತುಬಿಡಿ, ಬರೀ ಕ್ರಾಂತಿ ಉತ್ಸವ ಅಷ್ಟೇ" ಎಂದು ಕ್ರಾಂತಿ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು.

    ಹೇಳಿಕೆಗೆ ಕಾರಣ ತಿಳಿಸಿದ್ದ ರಚಿತಾ

    ಹೇಳಿಕೆಗೆ ಕಾರಣ ತಿಳಿಸಿದ್ದ ರಚಿತಾ

    ಇನ್ನು ಈ ಹೇಳಿಕೆ ವಿರುದ್ಧ ನೆಟ್ಟಿಗರು ಕಿಡಿಕಾರಿದರು. ಓರ್ವ ಸ್ಟಾರ್ ನಟಿಯಾಗಿ ಯಾವ ರೀತಿ ಮಾತನಾಡಬೇಕು ಎಂದು ತಿಳಿದಿಲ್ವ ಎಂದು ಆಕ್ರೋಶ ಹೊರಹಾಕಿದ್ದರು. ಇಷ್ಟೆಲ್ಲಾ ವ್ಯಕ್ತವಾದರೂ ಹೇಳಿಕೆ ಬಗ್ಗೆ ಎಲ್ಲೂ ಮಾತನಾಡದೇ ಇದ್ದ ರಚಿತಾ ರಾಮ್ ಯುಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿ "ಎಕ್ಸೈಟ್‌ಮೆಂಟ್‌ನಲ್ಲಿ ಮಾತನಾಡುವಾಗ ವಾಕ್ಯ ಮಾಡಿ ಮಾತನಾಡುವಾಗ ಕೆಲವೊಮ್ಮೆ ಗೊತ್ತಿಲ್ಲದೇ ಮರೀತಿವಿ. ಇಲ್ಲ ತಪ್ಪಾಗುತ್ತದೆ. ಮೊದಲ ದಿನಗಳಿಂದಲೂ ಸಾಕಷ್ಟು ಪೆಟ್ಟು ಬಿದ್ದಿತ್ತು. ಇಡೀ ತಂಡ ಒಟ್ಟಿಗೆ ಸೇರಿದ್ದೆವು. ಮಲ್ಟಿಫ್ಲೆಕ್ಸ್‌ನಲ್ಲಿ ಸಿನಿಮಾ ಸಾಂಗ್ಸ್, ಟ್ರೈಲರ್ ಎಲ್ಲಾ ನೋಡಿದ್ವಿ. ಸುಮ್ನೆ ಕೆಲಸ ಮಾಡ್ಕೊಂಡು, ಎರಡ್ಮೂರು ಸಂದರ್ಶನ ಕೊಟ್ಟು ನಾನು ಸುಮ್ಮನಾಗ್ತಿಲ್ಲ. ನಾನು ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಇದು ನನಗೆ ಬಹಳ ದೊಡ್ಡ ಸಿನಿಮಾ. ಕ್ಯಾಮೆರಾ ಮುಂದೆ ಹಿಂದೆ ಏನೆಲ್ಲಾ ಆಗಿದೆ ಎನ್ನುವುದನ್ನು ನೋಡಿದ್ದೇನೆ. ಯಾರಿಗೆಲ್ಲಾ ನೋವಾಯ್ತು, ಟಾರ್ಗೆಟ್ ಆಗ್ತಿದ್ದಾರೆ? ಎಲ್ಲಾ ನೋಡಿದ್ದೀನಿ, ಕೇಳಿದ್ದೀನಿ. ಎನ್ನುವುದು ಗೊತ್ತು." ಎಂದು ಹೇಳಿಕೆ ನೀಡಿದ್ದರು.

    English summary
    Case filed Against Actress Rachita Ram in Maddur Police Station as she gave controversial statement against republic day.
    Saturday, January 21, 2023, 11:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X