'ಬಿಂದಾಸ್' ಹುಡುಗಿ ಹನ್ಸಿಕಾ ಮೇಲೆ ಕೇಸ್ ದಾಖಲು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ 'ಬಿಂದಾಸ್' ಸಿನಿಮಾದ ನಾಯಕಿ ಹನ್ಸಿಕಾ ಮೊಟ್ವಾನಿ, ಈ ಚಿತ್ರದ ಬಳಿಕ ಕನ್ನಡದ ಯಾವ ಚಿತ್ರದಲ್ಲಿಯೂ ಅಭಿನಯಿಸಿಲ್ಲ. ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು.
ಇದೀಗ, ಹನ್ಸಿಕಾ ತಮ್ಮ 50ನೇ ಸಿನಿಮಾ ಆರಂಭಿಸಿದ್ದಾರೆ. ಹನ್ಸಿಕಾ ಅಭಿನಯಿಸುತ್ತಿರುವ 50ನೇ ಚಿತ್ರ 'ಮಹಾ' ಪೋಸ್ಟರ್ ರಿಲೀಸ್ ಆಗಿದ್ದು, ಭಾರಿ ಸದ್ದು ಮಾಡ್ತಿದೆ.

ಇದು ಮಹಿಳಾ ಪ್ರಧಾನ ಸಿನಿಮಾವಾಗಿರುವುದರಿಂದ, ಚಿತ್ರದ ಪೋಸ್ಟರ್ ಹನ್ಸಿಕಾ ಅವರನ್ನೇ ಪ್ರಮುಖವನ್ನಾಗಿಸಿ ಮಾಡಲಾಗಿದೆ. ಹನ್ಸಿಕಾ 'ಮಹಾ' ಪೋಸ್ಟರ್ ಬಂತು ಎಂಬ ಖುಷಿಯಲ್ಲಿರುವಾಗಲೇ ಈಗ ಈ ಚಿತ್ರದ ಮೇಲೆ ಕೇಸ್ ದಾಖಲಾಗಿದೆ.
'ಮಹಾ' ಪೋಸ್ಟರ್ ನಲ್ಲಿ ನಟಿ ಹನ್ಸಿಕಾ ಸಾಧು ಗೆಟಪ್ ನಲ್ಲಿ ಕಾಣಿಸಿಕೊಂಡು, ಕೊರಳಲ್ಲಿ ರುದ್ರಾಕ್ಷಿ ಮಾಲೆ ಹಾಕಿ, ಭಂಗಿ ಸೇದುತ್ತಿರುವ ಲುಕ್ ನಲ್ಲಿದ್ದಾರೆ. ಇದು ಸಹಜವಾಗಿ ಕೆಲವರ ವಿರೋಧಕ್ಕೆ ಕಾರಣವಾಗಿದೆ.

ಜಾನಕಿ ರಾಮನ್ ಎಂಬ ವ್ಯಕ್ತಿ ಈಗ ಚಿತ್ರದ ನಿರ್ದೇಶಕ ಹಾಗೂ ನಟಿ ಹನ್ಸಿಕಾ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಜನರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತೆ ಪೋಸ್ಟರ್ ಮಾಡಲಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಚಿತ್ರತಂಡ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಯುಆರ್ ಜಮೀಲ್ ಎಂಬ ಯುವ ನಿರ್ದೇಶಕ 'ಮಹಾ' ಸಿನಿಮಾ ನಿರ್ದೇಶನ ಮಾಡ್ತಿದ್ದು, ಇದು ಮಹಿಳಾ ಪ್ರಧಾನ-ಆಕ್ಷನ್ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗ್ತಿದೆ.


Click it and Unblock the Notifications











