ನಿಮ್ಮನೆ ಪುಟ್ಟ ಲಕ್ಷ್ಮಿ ಸುದೀಪ್ ಜೊತೆಗೆ ನಟಿಸಬಹುದು
ಪುಟ್ಟ ಮಕ್ಕಳು ರಿಯಾಲಿಟಿ ಶೋಗಳಲ್ಲಿ ಭಾಗಿಯಾವುದನ್ನು, ಸಿನಿಮಾ ಮಾಡುವುದನ್ನು ನೋಡಿ ನಮ್ಮ ಮನೆ ಮಕ್ಕಳು ಈ ರೀತಿ ಮಾಡಬೇಕು ಎನ್ನುವ ಆಸೆ ಕೆಲವು ಪೋಷಕರಿಗೆ ಇರುತ್ತದೆ. ಅಂತವರಿಗೆ ಇಲ್ಲೊಂದು ಒಳ್ಳೆಯ ಅವಕಾಶ ಹುಡುಕಿಕೊಂಡು ಬಂದಿದೆ.
ಕಿಚ್ಚ ಸುದೀಪ್ ನಟನೆಯ ಹೊಸ ಸಿನಿಮಾದ ಒಂದು ಪಾತ್ರಕ್ಕೆ ಪುಟ್ಟ ಹುಡುಗಿಯ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ. ಇದಕ್ಕಾಗಿ ಸಣ್ಣದೊಂದು ಆಡಿಷನ್ ನಡೆಸುತ್ತಿದ್ದು, ಆಯ್ಕೆ ಆದ ಮಗು ಸುದೀಪ್ ಜೊತೆಗೆ ತೆರೆ ಹಂಚಿಕೊಳ್ಳಬಹುದಾಗಿದೆ.
3 ವರ್ಷದಿಂದ 7 ವರ್ಷ ಒಳಗಿನ ಪುಟ್ಟ ಹುಡುಗಿ ಸಿನಿಮಾದಲ್ಲಿ ನಟಿಸಬಹುದಾಗಿದೆ. ನಿಮ್ಮ ಮನೆಯಲ್ಲಿ ಈ ವಯಸ್ಸಿನ ಪುಟ್ಟ ಹುಡುಗಿ ಇದ್ದರೆ ಆಕೆಯ ಫೋಟೋ ಹಾಗೂ ವಿವರಗಳನ್ನು [email protected] ಮೇಲ್ ಐಡಿಗೆ ಕಳುಹಿಸಬಹುದಾಗಿದೆ.

ಈ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೂರನೇ ಸಿನಿಮಾವಾಗಿದೆ. ಮೊದಲ ಎರಡು ಚಿತ್ರದಲ್ಲಿ ಸಹೋದರನಿಗೆ ಆಕ್ಷನ್ ಕಟ್ ಹೇಳಿದ್ದ, ಅವರು ಮೊದಲ ಬಾರಿಗೆ ಸ್ಟಾರ್ ಹೀರೋಗೆ ಸಿನಿಮಾ ಮಾಡುತ್ತಿದ್ದಾರೆ.

ಸುದೀಪ್ ಹಾಗೂ ಅನೂಪ್ ಭಂಡಾರಿ ಸಿನಿಮಾ 'ಬಿಲ್ಲಾ ರಂಗ ಭಾಷ' ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ.


Click it and Unblock the Notifications











