ಡಾರ್ಲಿಂಗ್ ಕೃಷ್ಣ ಜೊತೆ ನಟಿಸುವ ಆಸೆ ಇದೆಯಾ? ಇಲ್ಲಿದೆ ನೋಡಿ ಅವಕಾಶ

ಡಾರ್ಲಿಂಗ್ ಕೃಷ್ಣ ಅಭಿನಯದ ಮತ್ತು ನಿರ್ದೇಶನದ 'ಲವ್ ಮಾಕ್ ಟೇಲ್' ಸಿನಿಮಾ ಸಕ್ಸಸ್ ನ ನಂತರ ಈಗ ಲವ್ ಮಾಕ್ ಟೇಲ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಪಾರ್ಟ್-2 ಚಿತ್ರದ ಕಥೆ ಮುಗಿಸಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಸ್ಕ್ರಿಪ್ಟ್ ಪೂಜೆ ಕೂಡ ಮಾಡಿ ಮುಗಿಸಿದ್ದಾರೆ.

Recommended Video

Actor Srimurali is spending time with his daughter | Ateeva Sri Murali | Filmibeat Kannada

ಚಿತ್ರೀಕರಣಕ್ಕೆ ಹೊರಡಲು ತುದಿಗಾಲಿನಲ್ಲಿ ನಿಂತಿರುವ ತಂಡ ಈಗ ಕಲಾವಿದರ ಆಯ್ಕೆಯಲ್ಲಿ ತೊಡಗಿಕೊಂಡಿದ್ದಾರೆ. ಕಲಾವಿದರು ಬೇಕಾಗಿದ್ದಾರೆ ಎಂದು ಸಿನಿಮಾತಂಡ ಅನೌನ್ಸ್ ಮಾಡಿದೆ. ಮಹಿಳಾ ಕಲಾವಿದೆ ಬೇಕು ಎಂದು ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

"ಲವ್ ಮಾಕ್ ಟೇಲ್-2 ಸಿನಿಮಾಗೆ ಮಹಿಳಾ ಕಲಾವಿದೆ ಬೇಕು. 22 ರಿಂದ 30 ವರ್ಷ ವಯಸ್ಸಿನವರು ಬೇಕಾಗಿದ್ದಾರೆ. ಫೋಟೋ ಮತ್ತು ನಿಮ್ಮ ಪರಿಚಯದ ವಿಡಿಯೋವನ್ನುಮೇಲ್ ಮಾಡಿ" ಎಂದು ಡಾರ್ಲಿಂಗ್ ಕೃಷ್ಣ ಪೋಸ್ಟ್ ಮಾಡಿದ್ದಾರೆ.

 Casting Call For Darling Krishna Starrer Love Mocktail-2

ಲವ್ ಮಾಕ್ ಟೇಲ್-2 ಸಿನಿಮಾದಲ್ಲಿ ಮತ್ತು ಡಾರ್ಲಿಂಗ್ ಕೃಷ್ಣ ಜೊತೆ ಅಭಿನಯಿಸುವ ಆಸೆ ಇರುವವರು ಆಡಿಷನ್ ನಲ್ಲಿ ಭಾಗಿಯಾಗಬಹುದು. ಮೊದಲ ಭಾಗ ಸೂಪರ್ ಹಿಟ್ ಆದ ಪರಿಣಾಮ ಪಾರ್ಟ್-2ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಅದರಲ್ಲೂ ಡಾರ್ಲಿಂಗ್ ಕೃಷ್ಣ ಎಲ್ಲರ ಮನಗೆದ್ದಿದ್ದಾರೆ. ಹಾಗಾಗಿ ಕೃಷ್ಣ ಜೊತೆ ನಟಿಸಲು ಹುಡುಗಿಯರು ಈಗ ತುದಿಗಾಲಿನಲ್ಲಿ ನಿಂಚಿದ್ದಾರೆ.

ಪಾರ್ಟ್-1ರಲ್ಲಿ ಇದ್ದ ಕಲಾವಿದರು ಪಾರ್ಟ್-2 ನಲ್ಲಿಯೂ ಮುಂದುವರೆಯಲಿದೆ. ಆದರೆ ಯಾರೆಲ್ಲ ಇರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಜೊತೆಗೆ ಹೊಸ ಪ್ರತಿಭೆಗಳು ಸಹ ಸಿನಿಮಾದಲ್ಲಿ ಇರಲಿದ್ದಾರೆ. ಪಾರ್ಟ್-2 ಹೇಗಿರಲಿದೆ ಎನ್ನುವ ಕಾತರಿಂದ ಪ್ರೇಕ್ಷಕರು ಕಾಯುತ್ತಿದ್ದಾರೆ.

More from Filmibeat

English summary
Casting Call for Darling Krishna starrer Love Mocktail-2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X