'ಉಪಾಧ್ಯಕ್ಷ'ರಿಗೆ ಜೋಡಿಯಾಗುವ ಸುವರ್ಣ ಅವಕಾಶ

ಹಾಸ್ಯ ನಟ ಚಿಕ್ಕಣ್ಣ ಪೂರ್ಣ ಪ್ರಮಾಣದಲ್ಲಿ ನಾಯಕನಟನಾಗಿ ಅಭಿನಯಿಸುತ್ತಿರುವ ಚಿತ್ರ ಉಪಾಧ್ಯಕ್ಷ. ಇತ್ತೀಚಿಗಷ್ಟೆ ಈ ಚಿತ್ರದ ಹೆಸರು ಅಧಿಕೃತವಾಗಿ ಘೋಷಣೆಯಾಗಿತ್ತು.

ಉಪಾಧ್ಯಕ್ಷ ಚಿತ್ರದಲ್ಲಿ ಚಿಕ್ಕಣ್ಣಗೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಸಹಜವಾಗಿ ಕಾಡುತ್ತಿತ್ತು. ಈಗಾಗಲೇ ಇಂಡಸ್ಟ್ರಿಯಲ್ಲಿರುವ ನಟಿ ಹೀರೋಯಿನ್ ಆಗ್ತಾರಾ ಅಥವಾ ಹೊಸಬರನ್ನು ಪರಿಚಯ ಮಾಡ್ತಾರಾ ಎಂಬ ಚರ್ಚೆ ಜೋರಾಗಿತ್ತು.

ಈಗ ಚಿತ್ರತಂಡ ಉಪಾಧ್ಯಕ್ಷರ ಜೋಡಿಗಾಗಿ ಹುಡುಕಾಟ ಆರಂಭಿಸಿದೆ. ಚಿಕ್ಕಣ್ಣನ ಜೊತೆ ನಟಿಸಲು ಹೊಸಬರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಇದಕ್ಕಾಗಿ ಕಾಸ್ಟಿಂಗ್ ಕಾಲ್ ಮಾಡಲಾಗಿದೆ.

Casting Call for Female Lead for Chikkanas Upadhyaksha Movie

ಉಪಾಧ್ಯಕ್ಷ ಚಿತ್ರಕ್ಕೆ ನಾಯಕಿಯಾಗಲು ಆಸಕ್ತಿ ಹೊಂದಿರುವವರು ಇತ್ತೀಚಿಗಿನ ಭಾವಚಿತ್ರ ಮತ್ತು ನಟನೆಯ ವಿಡಿಯೋ ತುಣುಕುಗಳನ್ನು ಅಧಿಕೃತ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.

ಅಂದ್ಹಾಗೆ, ಈ ಚಿತ್ರವನ್ನು ಚಂದ್ರ ಮೋಹನ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ 'ಬಾಂಬೆ ಮಿಠಾಯಿ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಹೆಬ್ಬುಲಿ, ರಾಬರ್ಟ್, ಮದಗಜ ಅಂತಹ ಚಿತ್ರಗಳನ್ನು ನಿರ್ಮಿಸಿರುವ ಉಮಾಪತಿ ಶ್ರೀನಿವಾಸ್ ಅವರ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗುತ್ತಿದೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

Recommended Video

ಈ ಹೆಸರು ಇಟ್ಟಾಗ್ಲೇ ಸಿನಿಮಾ ಗೆದ್ದಾಯ್ತು | Mahesh Kumar | Chikkanna | Upadyaksha | Filmibeat Kannada

More from Filmibeat

English summary
Casting Call for Female Lead for Chikkanna Adhyaksha Movie. the Movie will produced by Umapathy srinivas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X