ಪುನೀತ್ ರಾಜ್ ಕುಮಾರ್ ಜೊತೆ ನಟಿಸಲು ಇಲ್ಲಿದೆ ಸುವರ್ಣಾವಕಾಶ
ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಎಷ್ಟೋ ಜನರ ಕನಸಾಗಿರುತ್ತದೆ. ಎಷ್ಟೋ ಪ್ರತಿಭಾವಂತರು ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅಂತವರಿಗಾಗಿ ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ನಟಿಸುವ ಅವಕಾಶವೊಂದು ಬಂದಿದೆ.
Recommended Video
ಪುನೀತ್ ನಟನೆಯ ಮುಂದಿನ ಸಿನಿಮಾ 'ಜೇಮ್ಸ್' ಆಡಿಷನ್ ನಡೆಯುತ್ತಿದೆ. ಇಲ್ಲಿ ಬಾಲ ಕಲಾವಿದರಿಗೂ ಅವಕಾಶ ನೀಡಲಾಗುತ್ತಿದೆ. 5 ರಿಂದ 12 ವರ್ಷ ಒಳಗಿನ ಮಕ್ಕಳು ಇದರಲ್ಲಿ ಭಾಗಿಯಾಗಬಹುದಾಗಿದೆ.
ಜೊತೆಗೆ 16 ರಿಂದ 45 ವಯಸ್ಸಿನ ಆಸಕ್ತರು ಕೂಡ ಈ ಆಡಿಷನ್ ನಲ್ಲಿ ಸ್ಪರ್ಧಿಸಬಹುದು. ಪುರುಷ ಹಾಗೂ ಮಹಿಳಾ ಅಭ್ಯರ್ಥಿ ಇಬ್ಬರಿಗೂ ಆಡಿಷನ್ ನಲ್ಲಿ ಅವಕಾಶ ಇದೆ. ಇದರಲ್ಲಿ ಭಾಗವಹಿಸಲು ಇಚ್ಚಿಸುವವರು ನಿಮ್ಮ ನಟನೆಯ 1 ನಿಮಿಷದ ವಿಡಿಯೋಯನ್ನು ಕಳಿಸಬೇಕಾಗಿದೆ.

ವಿಡಿಯೋ ಜೊತೆಗೆ 4 ಫೋಟೋಗಳು (Left and Right and full length photo) ಅಗತ್ಯವಿದೆ. ಫೋಟೋ ಹಾಗೂ ವಿಡಿಯೋವನ್ನು [email protected] ಹಾಗೂ 8660859361 ಗೆ ಕಳಿಸಬೇಕಾಗಿದೆ

ಟಿಕ್ ಟಾಕ್, ಡಬ್ ಸ್ಮಾಶ್ ವಿಡಿಯೋಗಳು ಹಾಗೂ ಸೆಲ್ಫಿ ಫೋಟೋಗಳನ್ನು ಕಳಿಹಿಸಬೇಡಿ ಎಂದು ಚಿತ್ರತಂಡ ತಿಳಿಸಿದೆ. 'ಜೇಮ್ಸ್' ಚೇತನ್ ಕುಮಾರ್ ನಿರ್ದೇಶನದ ಚಿತ್ರವಾಗಿದ್ದು, ಕಿಶೋರ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ.


Click it and Unblock the Notifications











