ಶ್ರೀ ಮುರಳಿ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಬಂದಿದೆ ಟ್ರೈ ಮಾಡಿ
Recommended Video

'ಉಗ್ರಂ', 'ರಥಾವರ' ಹಾಗೂ 'ಮಫ್ತಿ' ಈ ಮೂರು ಸೂಪರ್ ಹಿಟ್ ಸಿನಿಮಾಗಳ ನಂತರ ಶ್ರೀ ಮುರಳಿ ಮರಳಿ ಬಂದಿದ್ದಾರೆ. ಮಾಸ್ ಅಂಶಗಳ ಸಿನಿಮಾಗಳ ನಂತರ ಕ್ಲಾಸ್ ಸಿನಿಮಾ ಮಾಡುವ ತಯಾರಿಯಲ್ಲಿ ಅವರು ಇದ್ದಾರೆ.
ನಿರ್ದೇಶಕ 'ಬಹದ್ದೂರ್' ಚೇತನ್ ಕುಮಾರ್ ಅವರ ಮುಂದಿನ ಸಿನಿಮಾದಲ್ಲಿ ಶ್ರೀ ಮುರಳಿ ನಟಿಸುತ್ತಿದ್ದಾರೆ. ಇನ್ನು ಹೆಸರಿಡದ ಈ ಚಿತ್ರದಲ್ಲಿ ಈಗ ನಟಿಸುವ ಅವಕಾಶ ಬಂದಿದೆ. ಈ ಸಿನಿಮಾದ ಕೆಲವು ಪ್ರಮುಖ ಪಾತ್ರಗಳಿಗಾಗಿ ಚಿತ್ರತಂಡ ಕಲಾವಿದರ ಹುಡುಕಾಟದಲ್ಲಿದೆ.
16 ರಿಂದ 60 ವರ್ಷ ಪುರುಷ ಮತ್ತು ಮಹಿಳೆ ಯಾರು ಬೇಕಾದರೂ ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಅದಕ್ಕೂ ಮುಂಚೆ ಸಿನಿಮಾದಲ್ಲಿ ನಟಿಸುವ ಕನಸು ಇದ್ದವರು ತಮ್ಮ ಫೋಟೋವನ್ನು [email protected] ಗೆ ಅಥವಾ 7892897545 ವಾಟ್ಸ್ ಅಪ್ ಸಂಖ್ಯೆಗೆ ಕಳುಹಿಸಬಹುದಾಗಿದೆ.

ಅಂದಹಾಗೆ, 'ಬಹದ್ದೂರ್', 'ಭರ್ಜರಿ' ಸಿನಿಮಾದ ನಂತರ ಚೇತನ್ ಕುಮಾರ್ ಈ ಸಿನಿಮಾದ ಮೂಲಕ ಹ್ಯಾಟ್ರಿಕ್ ಬಾರಿಸುವ ತವಕದಲ್ಲಿ ಇದ್ದಾರೆ. ಶ್ರೀ ಮುರಳಿ ಕೂಡ ತಮ್ಮ ಯಶಸ್ಸಿನ ಪಯಣವನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗುವ ಸಂಕಲ್ಪ ಮಾಡಿದ್ದಾರೆ. ಉಳಿದಂತೆ, ಸಿನಿಮಾದ ನಾಯಕಿಯಾಗಿ ಶ್ರೀ ಲೀಲಾ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











