For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾರ 'ಮಾರ್ಟಿನ್' ಚಿತ್ರದಿಂದ ಭರ್ಜರಿ ಅವಕಾಶ

  |

  ಆಕ್ಷನ್ ಪ್ರಿನ್ಸ್ ನಟಿಸುತ್ತಿರುವ ಮಾರ್ಟಿನ್ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಚಿತ್ರದ ಮುಹೂರ್ತ ನಡೆದಿದ್ದು, ಶೂಟಿಂಗ್ ಸಹ ಪ್ರಾರಂಭಿಸಿದೆ. ಎಪಿ ಅರ್ಜುನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಅದ್ಧೂರಿ ಸಿನಿಮಾ ನಂತರ ಈ ಕಾಂಬಿನೇಷನ್ ಮತ್ತೆ ಒಂದಾಗಿರುವುದು ಸಹಜವಾಗಿ ಕುತೂಹಲ ಹೆಚ್ಚಿಸಿದೆ.

  ಹುಡುಗಿಯರಿಗೆ ಭರ್ಜರಿ ಅವಕಾಶ ಕೊಟ್ಟ ಧ್ರುವ ಸರ್ಜಾ

  'ಮಾರ್ಟಿನ್' ಚಿತ್ರಕ್ಕೆ ನಾಯಕಿ ಯಾರು ಎನ್ನುವುದು ಪ್ರಶ್ನೆಯಾಗಿ ಕಾಡುತ್ತಿತ್ತು. ಯಾರಾದರೂ ಸ್ಟಾರ್ ನಟಿ ಧ್ರುವ ಸರ್ಜಾಗೆ ಜೋಡಿಯಾಗಬಹುದು ಎಂಬ ಲೆಕ್ಕಾಚಾರವೂ ಇತ್ತು. ಆದ್ರೀಗ, ಸರ್ಪ್ರೈಸ್ ಎನ್ನುವಂತೆ ಚಿತ್ರತಂಡ ಕಾಸ್ಟಿಂಗ್ ಕಾಲ್ ಮಾಡಿದೆ.

  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಅವತಾರಕ್ಕೆ ಅಭಿಮಾನಿಗಳು ಫಿದಾಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಅವತಾರಕ್ಕೆ ಅಭಿಮಾನಿಗಳು ಫಿದಾ

  ಮಾರ್ಟಿನ್ ಚಿತ್ರದ ನಾಯಕಿ ಪಾತ್ರಕ್ಕೆ ಕಲಾವಿದೆ ಬೇಕು ಎಂದು ಜಾಹೀರಾತು ನೀಡಿದೆ. ಧ್ರುವ ಸರ್ಜಾ ಜೊತೆ ಜೋಡಿಯಾಗಿ ನಟಿಸಲು ಆಸಕ್ತಿ ಹೊಂದಿರುವವರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಅದೃಷ್ಟ ಯಾರಿಗಾದರೂ ಒಲಿಯಬಹುದು.

  ಆಸಕ್ತರು martinmaovie1234@gmail.com ಗೆ ಫೋಟೋ ಮತ್ತು ಪ್ರೊಫೈಲ್ ಮೇಲ್ ಮಾಡಬಹುದು ಎಂದು ಚಿತ್ರತಂಡ ಹೇಳಿದೆ.

  ಧ್ರುವ ಸರ್ಜಾಗೆ ಪ್ರೇಮ್ ಆ್ಯಕ್ಷನ್ ಕಟ್; ಹೊಸ ಸಿನಿಮಾ ಅನೌನ್ಸ್ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಪ್ರೇಮ್ ಆ್ಯಕ್ಷನ್ ಕಟ್; ಹೊಸ ಸಿನಿಮಾ ಅನೌನ್ಸ್ ಮಾಡಿದ ಆ್ಯಕ್ಷನ್ ಪ್ರಿನ್ಸ್

  'ಮಾರ್ಟಿನ್' ಶೀರ್ಷಿಕೆ ಹೇಳುವಂತೆ ಇದು ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಕಾಲೇಜ್ ಲವ್ ಸ್ಟೋರಿ ಜೊತೆ ಆಕ್ಷನ್ ಮನರಂಜನೆ ನಿರೀಕ್ಷಿಸಬಹುದು ಎಂದು ಚಿತ್ರತಂಡ ಸುಳಿವು ಕೊಟ್ಟಿದೆ. 'ಗ್ಯಾಂಗ್‌ಸ್ಟರ್' ಪಾತ್ರದಲ್ಲಿ ಧ್ರುವ ನಟಿಸಲಿದ್ದಾರೆ ಎಂದು ಸ್ವತಃ ನಿರ್ದೇಶಕ ಎಪಿ ಅರ್ಜುನ್ ಮಾಹಿತಿ ನೀಡಿದರು. ಜೊತೆಗೆ ತಾಯಿಯ ಸೆಂಟಿಮೆಂಟ್ ಸಹ ಸಿನಿಮಾದಲ್ಲಿರಲಿದೆ.

  Casting Call From Dhruva Sarjas Martin

  ಅದಾಗಲೇ 'ಮಾರ್ಟಿನ್' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಧ್ರುವ ಸರ್ಜಾ ಜೊತೆ 'ದುಬಾರಿ' ಮಾಡಬೇಕಿದ್ದ ಉದಯ್ ಮೆಹ್ತಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸದ್ಯದ ಲೆಕ್ಕಾಚಾರದಲ್ಲಿ ಡಿಸೆಂಬರ್‌ ವೇಳೆ ಈ ಸಿನಿಮಾ ಮುಗಿಸುವ ಚಿಂತನೆಯಲ್ಲಿದೆ ಚಿತ್ರತಂಡ. ಇನ್ನು ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

  'ಮಾರ್ಟಿನ್' ಸಿನಿಮಾ ಜೊತೆ ಜೊತೆಗೆ ನಿರ್ದೇಶಕ ಜೋಗಿ ಪ್ರೇಮ್ ಜೊತೆ ಹೊಸ ಪ್ರಾಜೆಕ್ಟ್‌ವೊಂದು ಘೋಷಣೆ ಮಾಡಿದ್ದಾರೆ ಧ್ರುವ ಸರ್ಜಾ. ಆ ಕಡೆ ಜೋಗಿ ಪ್ರೇಮ್ 'ಏಕ್ ಲವ್ ಯಾ' ಬಿಡುಗಡೆಯ ತಯಾರಿಯಲ್ಲಿದ್ದಾರೆ. 'ಏಕ್ ಲವ್ ಯಾ' ರಿಲೀಸ್ ಆಗುತ್ತಿದ್ದಂತೆ ಧ್ರುವ ಸರ್ಜಾ ಜೊತೆ ಶೂಟಿಂಗ್ ಹೋಗಲು ಪ್ಲಾನ್ ಮಾಡಿದ್ದಾರೆ.

  English summary
  Casting Call From Dhruva Sarja's Martin

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X