ಹೆಣ್ಮಕ್ಕಳನ್ನ ಮಂಚಕ್ಕೆ ಕರೆಯುವವರಿಗೆ ಚಪ್ಪಲಿ ತಗೊಂಡು ಹೊಡೆಯಿರಿ ಎಂದ ಜಗ್ಗೇಶ್!

By Harshitha

''ಚಿತ್ರರಂಗದಲ್ಲಿ ದೊಡ್ಡ ನಟಿಯಾಗಿ ಬೆಳೆಯಬೇಕು ಅಂದ್ರೆ ತೆರೆಮೇಲಿನ ಪರ್ಫಾಮೆನ್ಸ್ ಮಾತ್ರ ಸಾಕಾಗುವುದಿಲ್ಲ.... ತೆರೆಯ ಹಿಂದೆ, ಬೆಡ್ ರೂಮಿನಲ್ಲಿನ ಪರ್ಫಾಮೆನ್ಸ್ ಬಹಳ ಮುಖ್ಯ. ಸ್ವಲ್ಪ ಕಾಂಪ್ರೊಮೈಸ್ ಮಾಡಿಕೊಂಡ್ರೆ ಅಂದುಕೊಂಡಿದ್ದೆಲ್ಲ ಸುಲಭ'' ಎಂದು ಹೇಳಿ ಅಮಾಯಕ ಹುಡುಗಿಯರನ್ನ ನಂಬಿಸಿ ಮಂಚಕ್ಕೆ ಕರೆಯುವ ಕಾಮ ಪಿಶಾಚಿಗಳು ಎಲ್ಲಾ ಚಿತ್ರರಂಗದಲ್ಲಿಯೂ ಇದ್ದಾರೆ.

Recommended Video

Jaggesh became husband at 19, father at 23 and grand father at 52

''ಪ್ರತಿಭೆಗೆ ಮಣೆ ಹಾಕದ ಈ ಕಾಮುಕರಿಗೆ ಚಪ್ಪಲಿ ತಗೊಂಡು ಹೊಡೆಯಿರಿ'' ಎಂದು ನಟ ಜಗ್ಗೇಶ್ ಗುಡುಗಿದ್ದಾರೆ.

''ಸಿನಿಮಾ ಮಾಡುವ ಹೆಸರಿನಲ್ಲಿ ಲೈಂಗಿಕ ವಾಂಛೆ ತೀರಿಸಿಕೊಳ್ಳುವ ನಕಲಿ ಸಿನಿಮಾ ಮೇಕರ್ ಗಳಿಂದ ಇಡೀ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತಿದೆ. ಅಂಥವರ ಗುರುತು ಸಿಕ್ಕರೆ ಖಂಡಿತ ಶಿಸ್ತು ಕ್ರಮ ಕೈಗೊಳ್ಳುತ್ತೇನೆ'' ಎಂದು ನಟ ಜಗ್ಗೇಶ್ 'ಕಾಸ್ಟಿಂಗ್ ಕೌಚ್' ವಿರುದ್ಧ ಕಿಡಿಕಾರಿದ್ದಾರೆ. ಮುಂದೆ ಓದಿರಿ...

'ಕಾಸ್ಟಿಂಗ್ ಕೌಚ್' ವಿರುದ್ಧ ಜಗ್ಗೇಶ್ ಕೆಂಡಾಮಂಡಲ

'ಕಾಸ್ಟಿಂಗ್ ಕೌಚ್' ವಿರುದ್ಧ ಜಗ್ಗೇಶ್ ಕೆಂಡಾಮಂಡಲ

ಸಿನಿಮಾದಲ್ಲಿ ಚಾನ್ಸ್ ಕೊಡಿಸುವ ನೆಪದಲ್ಲಿ ಹೆಣ್ಮಕ್ಕಳನ್ನ ಮಂಚಕ್ಕೆ ಕರೆಯುವ ಸಂಸ್ಕೃತಿ ವಿರುದ್ಧ ನಟ ಜಗ್ಗೇಶ್ ಕೆಂಡಾಮಂಡಲರಾಗಿದ್ದಾರೆ. 'ಕಾಸ್ಟಿಂಗ್ ಕೌಚ್' ವಿರುದ್ಧ ನಟ ಜಗ್ಗೇಶ್ ತಮ್ಮ ಅಭಿಪ್ರಾಯವನ್ನ ಖಾಸಗಿ ವಾಹಿನಿ ಜೊತೆ ಮಾತನಾಡುತ್ತ ಹೊರಹಾಕಿರುವುದು ಹೀಗೆ....

ಚಪ್ಪಲಿ ತಗೊಂಡು ಹೊಡೆಯಿರಿ....

ಚಪ್ಪಲಿ ತಗೊಂಡು ಹೊಡೆಯಿರಿ....

''ಅಂಥವರಿಗೆ ಚಪ್ಪಲಿ ತಗೊಂಡು ಹೊಡೆಯಿರಿ... ತುಂಬಾ ಸೀರಿಯಸ್ ಆಗಿ ಈ ಮಾತನ್ನ ಹೇಳುತ್ತಿದ್ದೇನೆ. ನನಗೆ ನಿಜವಾಗಲೂ ಬಹಳ ಅಸಹ್ಯ ಆಗುತ್ತೆ. ಇದರಿಂದ ನಮ್ಮ ಉದ್ಯಮಕ್ಕೆ ಕೆಟ್ಟ ಹೆಸರು ಬರುತ್ತಿದೆ'' - ಜಗ್ಗೇಶ್, ನಟ

ಮುಖದ ಮೇಲೆ ಹೊಡೆಯುತ್ತೇನೆ

ಮುಖದ ಮೇಲೆ ಹೊಡೆಯುತ್ತೇನೆ

''ಹೆಣ್ಮಕ್ಕಳನ್ನ ಮಂಚಕ್ಕೆ ಕರೆದು ಪಾರ್ಟ್ ಕೊಡುವ ನಾಯಿಗಳು ಯಾರಾದರೂ ಇದ್ದರೆ, ದಯವಿಟ್ಟು ನನಗೆ ಹೇಳಿ... ನಾನೇ ಬಂದು ಮುಖದ ಮೇಲೆ ಹೊಡೆಯುತ್ತೇನೆ'' - ಜಗ್ಗೇಶ್, ನಟ

ವೃತ್ತಿಪರತೆ ಇಲ್ಲದೇ ಇರುವವರ ಕೆಲಸ ಇದು

ವೃತ್ತಿಪರತೆ ಇಲ್ಲದೇ ಇರುವವರ ಕೆಲಸ ಇದು

''ವೃತ್ತಿಪರತೆ ಹಾಗೂ ಮರ್ಯಾದೆ ಇಲ್ಲದೇ ಇರುವವರು ಮಾತ್ರ ಇದನ್ನೆಲ್ಲ ಮಾಡುವುದು. ಎಲ್ಲೆಲ್ಲಿಂದಲೋ ಬಂದು ಯಾರದ್ದೋ ದುಡ್ಡು ಇಟ್ಟುಕೊಂಡು ಇವತ್ತು ಇಂಡಸ್ಟ್ರಿಯ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದಾರೆ. ಅಂಥವರು ಯಾರಾದರೂ ಇದ್ದರೆ ದಯವಿಟ್ಟು ನಮ್ಮ ಗಮನಕ್ಕೆ ತನ್ನಿ, ಸೀರಿಯಸ್ ಆಕ್ಷನ್ ನ ನಾವು ತೆಗೆದುಕೊಳ್ಳುತ್ತೇವೆ'' ಎಂದಿದ್ದಾರೆ ನಟ ಜಗ್ಗೇಶ್

More from Filmibeat

English summary
Kannada Actor Jaggesh has reacted about 'Casting Couch' in Film Industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X