twitter
    For Quick Alerts
    ALLOW NOTIFICATIONS  
    For Daily Alerts

    ಆಯಮ್ಮನ (ಜಯಲಲಿತಾ) ಹೆದರಿಸುವ ಗಂಡಸು ಕರ್ನಾಟಕದಲ್ಲಿ ಹುಟ್ಟಿಲ್ವಾ?

    By Harshitha
    |

    ''ಆಯಮ್ಮನ (ಜಯಲಲಿತಾ) ಹೆದರಿಸುವ ಗಂಡಸು ಹುಟ್ಟಿಲ್ವಾ ನಮ್ಮ ಕರ್ನಾಟಕದಲ್ಲಿ? ರಾಜಕೀಯದಲ್ಲಿ ಇರುವ ಎಲ್ಲಾ ಗಂಡಸರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಇವತ್ತು'' - ಹೀಗಂತ ಹೇಳಿದವರು ಮತ್ಯಾರೂ ಅಲ್ಲ, ನಟಿ ಹಾಗೂ ರಾಜಕಾರಣಿ ತಾರಾ.

    ಇಂದು ನಡೆಯುತ್ತಿರುವ 'ಕರ್ನಾಟಕ ಬಂದ್'ಗೆ ಬೆಂಬಲ ನೀಡುತ್ತಾ, ಕಾವೇರಿ ನೀರಿನ ವಿಚಾರವಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಾಥ್ ನೀಡುತ್ತಾ, ಕನ್ನಡ ಚಿತ್ರೋದ್ಯಮ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ (ಶಿವಾನಂದ ಸರ್ಕಲ್) ಬಳಿ ಕಪ್ಪು ಪಟ್ಟಿ ಧರಿಸಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ.

    ಈ ವೇಳೆ ಮೈಕ್ ಹಿಡಿದು ಮಾತನಾಡಿದ ತಾರಾ, ಕಾವೇರಿ ವಿಚಾರವಾಗಿ ಆಗಾಗ ಕಾಲು ಕೆರೆದುಕೊಂಡು ಬರುವ ತಮಿಳುನಾಡಿನ 'ಅಮ್ಮ' ಜಯಲಲಿತಾ ವಿರುದ್ಧ ಕೆಂಡಕಾರಿದರು. ಜಯಲಲಿತಾ ಬಗ್ಗೆ ನಟಿ ತಾರಾ ಮಾಡಿದ ಕಾಮೆಂಟ್ಸ್ ಇಲ್ಲಿದೆ. ಓವರ್ ಟು ತಾರಾ.....

    ಜಯಲಲಿತಾ ಹುಟ್ಟಿದ್ದು ಮಂಡ್ಯದಲ್ಲಿ....

    ಜಯಲಲಿತಾ ಹುಟ್ಟಿದ್ದು ಮಂಡ್ಯದಲ್ಲಿ....

    ''ಅದೇ ಚಿತ್ರರಂಗದಿಂದ ಬಂದು ಮಂಡ್ಯದಲ್ಲೇ ಹುಟ್ಟಿದ ಜಯಲಲಿತಾ, ಅವರ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕೆ, ಅವರು ಅಧಿಕಾರಕ್ಕೆ ಬಂದಾಗೆಲ್ಲಾ ಕಾವೇರಿ ವಿವಾದ ಶುರು ಮಾಡ್ತಾರೆ. ಕಾವೇರಿ ಜಲ ಸಮಿತಿ ಇದೆ. ಏನೇ ಸಮಸ್ಯೆ ಇದ್ದರೂ ಆ ಜಲ ಸಮಿತಿಗೆ ಹೋಗಬೇಕು. ಅದು ಬಿಟ್ಟು ಡೈರೆಕ್ಟ್ ಆಗಿ ಸುಪ್ರೀಂ ಕೋರ್ಟ್ ಗೆ ಹೋಗ್ತಾರೆ. ಅವರು ರಾಜಕೀಯ ಮಾಡ್ತಿದ್ದಾರೆ ಅಷ್ಟೇ'' - ತಾರಾ [ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]

    ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗ್ಬೇಕು

    ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗ್ಬೇಕು

    ''ನಾರಿಮನ್ ಅಂತಹ ವಕೀಲರು....ಬಹಳ ದೊಡ್ಡ ವಕೀಲರು.! ಆದ್ರೆ ಯಾಕೆ ಸ್ವಾಮಿ ಇವತ್ತಿನವರೆಗೂ ಒಂದು ಕೇಸ್ ಕೂಡ ಗೆಲ್ಲಲು ಆಗುತ್ತಿಲ್ಲ.? ಕನ್ನಡದ ವಕೀಲರು ಯಾರೂ ಇಲ್ವಾ? ಸಮರ್ಥ ನ್ಯಾಯಾಧೀಶರು, ವಕೀಲರು ನಮ್ಮಲ್ಲೂ ಇದ್ದಾರೆ. ಅವರನ್ನ ಬಿಟ್ಟು ನಾರಿಮನ್ ಯಾಕೆ? 10 ಸಾವಿರ ಕ್ಯೂಸೆಕ್ಸ್ ನೀರನ್ನ ಕೊಡಬಹುದು ಅಂತ ಹೇಗೆ ಹೇಳಿದರು? ಇಂತಹ ವಕೀಲರಿಗೆ ಕೋಟ್ಯಾಂತರ ರೂಪಾಯಿ ಫೀಸ್ ಕಟ್ತೀವಲ್ಲಾ, ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗಿ ಅವಮಾನದಿಂದ ತಲೆ ತಗ್ಗಿಸಬೇಕು'' - ತಾರಾ [ಶಾಶ್ವತ ನೀರಾವರಿಗಾಗಿ ಹೋರಾಟ: ಕೋಲಾರದಲ್ಲಿ ತಾರೆಯರು ಹೇಳಿದ್ದೇನು.?]

    ಮೆಟ್ಟೂರು ಡ್ಯಾಮ್ ನೆಟ್ಟಗಿಲ್ಲ!

    ಮೆಟ್ಟೂರು ಡ್ಯಾಮ್ ನೆಟ್ಟಗಿಲ್ಲ!

    ''ಅಕ್ಟೋಬರ್ ನಲ್ಲಿ ಬೆಳೆಯುವ ಬೆಳೆಗೆ ಈಗಲೇ ಬೇಕಂತೆ ನೀರು ಆ ಯಮ್ಮನಿಗೆ. ನೀರನ್ನ ಸ್ಟಾಕ್ ಮಾಡಿ ಇಟ್ಟುಕೊಳ್ಳುವುದಕ್ಕೆ ಆ ಡ್ಯಾಮ್ ನೆಟ್ಟಗಿಲ್ಲ. ಮೆಟ್ಟೂರ್ ಡ್ಯಾಮ್ ಆಗಲೇ ಕಿತ್ತು ಹೋಗ್ತಿದೆ. 12 ಟಿ.ಎಂ.ಸಿ ನೀರು ಆಗಲೇ ಹರಿದು ಹೋಗ್ತಿದೆ ಸಮುದ್ರಕ್ಕೆ'' - ತಾರಾ [ಬಂಗಾರಪ್ಪನಂತೆ ಸಿದ್ಧರಾಮಯ್ಯ ನಿರ್ಧರಿಸಿದ್ರೆ 'ಗಂಡಸು' ಆಗ್ತಿದ್ರು ಎಂದ ಶಿವಣ್ಣ]

    ಡ್ಯಾಮ್ ಕಟ್ಟಮ್ಮ ತಾಯಿ ಮೊದಲು!

    ಡ್ಯಾಮ್ ಕಟ್ಟಮ್ಮ ತಾಯಿ ಮೊದಲು!

    ''ಮೆಟ್ಟೂರ್ ಡ್ಯಾಮ್ ಕಟ್ಟಮ್ಮ ತಾಯಿ ಮೊದಲು. ಆಮೇಲೆ ನೀರು ಕೇಳು. ರಾಜಕೀಯ ಮಾಡೋಕೆ ಕಾವೇರಿ ನೀರೇ ಬೇಕಿತ್ತಾ ತಾಯಿ ನಿನಗೆ.? ನಿನ್ನ ನಾವು ಕಳುಹಿಸಿರುವುದು ಈ ಭೂಮಿ ಇಂದ. ನಮ್ಮ ಕರ್ನಾಟಕದಿಂದ ಕಳುಹಿಸಿರುವುದು ತಾಯಿ ನಿನ್ನನ್ನ.! ಅದನ್ನ ನೀವು ಯೋಚನೆ ಮಾಡಿ ಮೊದಲು'' - ತಾರಾ

    ಆಯಮ್ಮನ ಹೆದರಿಸುವ ಗಂಡಸು ಹುಟ್ಟಿಲ್ವಾ?

    ಆಯಮ್ಮನ ಹೆದರಿಸುವ ಗಂಡಸು ಹುಟ್ಟಿಲ್ವಾ?

    ''ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ಅಲ್ಲಿ ಹೋಗಿ ಚೀಫ್ ಮಿನಿಸ್ಟರ್ ಆಗ್ಬಿಟ್ರೆ, ಕಾವೇರಿ ನೀರು ಬಿಡಿ ಅಂತ ಫಸ್ಟ್ ಬಂದುಬಿಡ್ತಿಯಲ್ಲಾ ತಾಯಿ ನೀನು. ಆಯಮ್ಮನ್ನ ಹೆದರಿಸುವ ಗಂಡಸು ಹುಟ್ಟಿಲ್ವಾ ನಮ್ಮ ಕರ್ನಾಟಕದಲ್ಲಿ? ರಾಜಕೀಯದಲ್ಲಿ ಇರುವ ಎಲ್ಲಾ ಗಂಡಸರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಇವತ್ತು'' - ತಾರಾ

    ಜಯಲಲಿತಾ ಹೇಗೆ ಗೆಲ್ಲುತ್ತಿದ್ದಾರೆ?

    ಜಯಲಲಿತಾ ಹೇಗೆ ಗೆಲ್ಲುತ್ತಿದ್ದಾರೆ?

    ''ಯಾಕೆ ಜಯಲಲಿತಾ ಗೆಲ್ಲುತ್ತಾರೆ ಕೋರ್ಟ್ ನಲ್ಲಿ.? ಯಾಕೆ ಅಂತಹ ವಾದವನ್ನು ನಾವು ಮಂಡಿಸಿಲ್ಲ.? ಸುಪ್ರೀಂ ಕೋರ್ಟ್ ನಲ್ಲಿ ಜಯಲಲಿತಾ 10 ಪಾಯಿಂಟ್ ಗಳನ್ನ ಹಾಕಿದ್ದಾಳೆ. ಅದನ್ನೆಲ್ಲಾ ತರಿಸಿಕೊಂಡು ಓದ್ಕೊಳ್ಳಿ ನೀವೇ....ಆಮೇಲೆ ನಾವು ಏನು ವಾದ ಮಾಡ್ಬೇಕು ಅಂತ ಯೋಚನೆ ಮಾಡಿ'' - ತಾರಾ

    English summary
    Kannada Actress, Politician Tara lashed out against Tamil Nadu 'Amma' Jayalalitha during the protest organized at Shivananda Circle, Bengaluru by KFCC to support Karnataka Farmers in Cauvery water Sharing Dispute.
    Friday, September 9, 2016, 18:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X