ಜೂಜು ದಂಧೆ: ನಟಿ ನೇಹಾ ಶೆಟ್ಟಿ ತಂದೆ ವಿರುದ್ಧ ಚಾರ್ಚ್ ಶೀಟ್ ಸಲ್ಲಿಕೆ

By ಫಿಲ್ಮಿಬೀಟ್ ಡೆಸ್ಕ್

ಬೆಂಗಳೂರಿನ ಹಲವು ಕಡೆ ಜೂಜು ಅಡ್ಡೆ ನಿರ್ಮಿಸಿ ಗ್ಯಾಂಬ್ಲಿಂಗ್ ನಡೆಸುತ್ತಿದ್ದ ಆರೋಪದ ಮೇರೆಗೆ ಮುಂಗಾರು ಮಳೆ-2 ಸಿನಿಮಾ ಖ್ಯಾತಿಯ ನಟಿ ನೇಹಾ ಶೆಟ್ಟಿ ತಂದೆ, ಉದ್ಯಮಿ ಹರಿರಾಜ್ ಶೆಟ್ಟಿಯನ್ನು ಬಂಧಿಸಿದ ಸಿಸಿಬಿ ಅಧಿಕಾರಿಗಳು ಚಾರ್ಚ್ ಶೀಟ್ ಸಲ್ಲಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಗ್ಯಾಬ್ಲಿಂಗ್ ಉದ್ಯಮಿ ಹರಿರಾಜ್ ಶೆಟ್ಟಿ, ಮಹಿಳೆಯರು ಸೇರಿದಂತೆ ಒಟ್ಟು 42 ಮಂದಿ ಗ್ಯಾಂಬ್ಲರ್ ಗಳ ವಿರುದ್ಧ 250 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಇವರು ಪೂಲ್ ಮತ್ತು ರಿ ಕ್ರಿಯೇಷನ್ ಹೆಸರಿನಲ್ಲಿ ಕ್ಲಬ್ ನಿರ್ಮಿಸಿ ಅದರಲ್ಲಿ ಜೂಜು, ವಿಡಿಯೋ ಗೇಮ್ ಪಾರ್ಲಲ್, ಬ್ಯಾನ್ ಸ್ಕಿಲ್ ನಡೆಸುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಪೂಲ್ ಎಂ ಕ್ಲಬ್ ಹೆಸರಿನಲ್ಲಿ ಹರಿರಾಜ್ ಶೆಟ್ಟಿ ಜೂಜು ಅಡ್ಡೆ ನಡೆಸುತ್ತಿದ್ದರು. ವಿಷಯ ತಿಳಿದ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 42 ಜೂಜುಕೋರರು ಸಿಕ್ಕಿಬಿದ್ದಿದ್ದಾರೆ. ಜೊತೆ ಲಕ್ಷ ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರಲ್ಲಿ ಬೆಂಗಳೂರು, ಚಿಕ್ಕಬಳ್ಳಾಪುರ, ಬಳ್ಳಾರಿ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯದ ಜೂಜುಕೋರರು ಇದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಕಾನೂನು ಬಾಹಿರ ಕೃತ್ಯಕ್ಕೆ ಹರಿರಾಜ್ ಶೆಟ್ಟಿ ಮಹಿಳೆಯರನ್ನು ಕರೆದುಕೊಂಡು ಬರುತ್ತಿದ್ದ ಮಾಹಿತಿ ಬಹಿರಂಗವಾಗಿದೆ. ಬಂಧಿತ 42 ಮಂದಿಯಲ್ಲಿ 5 ಮಂದಿ ಮಹಿಳೆಯರಿದ್ದಾರೆ. ಇದರಲ್ಲಿ ಉದ್ಯಮಿಗಳ ಪತ್ನಿಯರು, ಸರ್ಕಾರಿ ಅಧಿಕಾರಿಗಳ ಪತ್ನಿಯರು ಮತ್ತು ಮತ್ತೋರ್ವ ಮಹಿಳೆ ರೌಡಿ ಶೀಟರ್ ತಾಯಿ ಎನ್ನಲಾಗಿದೆ.

 CCB Chargesheet against Actress Neha Shetty father Hariraj and 42 others

ಹರಿರಾಜ್ ಬೆಂಗಳೂರಿನಲ್ಲಿ ಸುಮಾರು 14ಕ್ಕೂ ಹೆಚ್ಚು ಕಡೆ ಜೂಜು ಅಡ್ಡಗಳನ್ನು ನಡೆಸುತ್ತಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿತ್ತು. ಜೂನ್ 5ರಂದು ಹರಿರಾಜ್ ಬಂಧಿಸಲಾಗಿತ್ತು. ಹರಿರಾಜ್ ವಿರುದ್ಧ ಈಗಾಗಲೇ 19 ಪ್ರಕರಣಗಳು ದಾಖಲಾಗಿದೆ.

ಹರಿರಾಜ್ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸುತ್ತಿರುವುದು ಹೊಸದೇನಲ್ಲ. ಅನೇಕ ಬಾರಿ ದಾಳಿ ನಡೆದಿದೆ. ಪ್ರಕರಣ ಕ್ಲೋಸ್ ಆಗುತ್ತಿದ್ದಂತೆ ಮತ್ತೆ ದಂಧೆಯಲ್ಲಿ ಮುಳುಗುತ್ತಿದ್ದರು. ಪೊಲೀಸರ ವಿರುದ್ಧವೇ ಸಿಟ್ಟಿಗೆದಿದ್ದ ಹರಿರಾಜ್ ಪೊಲೀಸರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು ಎನ್ನುವ ಆರೋಪ ಕೂಡ ಇದೆ. ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ. ಈ ಮೊದಲು ಗೂಂಡಾ ಕಾಯ್ದೆಯಡಿ ಹರಿರಾಜ್‌ನನ್ನು ಬಂಧಿಸಲಾಗಿತ್ತು. ಆದರೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಕೋರ್ಟ್ ನಲ್ಲಿ ಸ್ಟೇ ಪಡೆದು ಜೈಲಿನಿಂದ ಹೊರಬಂದಿದ್ದರು.

ಬಳಿಕ ಗೂಂಡ ಕಾಯ್ದೆ ತಡೆ ತೆರವಿಗೆ ಸಿಸಿಬಿ ಮನವಿ ಮಾಡಿತ್ತು. ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದ ಬಳಿಕ ಹರಿರಾಜ್ ನನ್ನು ಜೂನ್ ತಿಂಗಳಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ನಗರದ ಕುಖ್ಯಾತ ಜೂಜುಕೋರ ಎನ್ನುವ ಆರೋಪ ಕೂಡ ಹರಿರಾಜ್ ವಿರುದ್ಧ ಕೇಳಿಬಂದಿದೆ. ಇದೀಗ ಹರಿರಾಜ್ ಜೊತೆ 42 ಮಂದಿಯನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಹರಿರಾಜ್ ಪುತ್ರಿ ನೇಹಾ ಶೆಟ್ಟಿ 2016ರಲ್ಲಿ ಬಂದ ಮುಂಗಾರು ಮಳೆ-2 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಮುಂಗಾರು ಮಳೆ-2 ಸಿನಿಮಾಗೆ ನಿರ್ದೇಶಕ ಶಶಾಂಕ್ ಆಕ್ಷನ್ ಕಟ್ ಹೇಳಿದ್ದರು. ಗಣೇಶ್ ನಟನೆಯ ಸೂಪರ್ ಹಿಟ್ ಮುಂಗಾರು ಮಳೆ ಸಿನಿಮಾದ ಟೈಟಲ್ ಮೂಲಕವೇ ಸಿನಿಮಾ ಭಾರಿ ನಿರೀಕ್ಷೆಯನ್ನು ಮೂಡಿಸಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನು ಮುಟ್ಟುವಲ್ಲಿ ಮುಂಗಾರು ಮಳೆ-2 ವಿಫಲವಾಗಿದ್ದರು, ತಕ್ಕಮಟ್ಟಿಗೆ ಸಕ್ಸಸ್ ಕಂಡಿತ್ತು.

ಕನ್ನಡದಲ್ಲಿ ಮೊದಲ ಸಿನಿಮಾ ಹಿಟ್ ಆಗುತ್ತಿದ್ದಂತೆ ನೇಹಾ ಶೆಟ್ಟಿ ತೆಲುಗು ಸಿನಿಮಾರಂಗದ ಕಡೆ ಮುಖ ಮಾಡಿದರು. ತೆಲುಗಿನಲ್ಲಿ ಮೆಹಬೂಬ ಮತ್ತು ಗಲ್ಲಿ ರೌಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಇನ್ನು ಎರಡು ಸಿನಿಮಾಗಳು ನೇಹಾ ಕೈಯಲ್ಲಿವೆ. ಸದ್ಯ ನೇಹಾ ತೆಲುಗು ಸಿನಿಮಾರಂಗದಲ್ಲೇ ಬ್ಯುಸಿಯಾಗಿದ್ದಾರೆ. ಮುಂಗಾರು ಮಳೆ-2 ಬಳಿಕ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.

More from Filmibeat

English summary
CCB Chargesheet against Actress Neha Shetty father Hariraj Shetty and 42 people for playing gambling.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X