For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣದ ಬಗ್ಗೆ ಸಿಸಿಬಿ ಅಧಿಕಾರಿಗಳು ಪ್ರಶ್ನೆ ಕೇಳಲಿಲ್ಲ: ಸೌಂದರ್ಯ ಜಗದೀಶ್

  |

  ಸಿಸಿಬಿ ವಿಚಾರಣೆ ಎದುರಿಸಿ ಹೊರಬಂದ ನಿರ್ಮಾಪಕ ಸೌಂದರ್ಯ ಜಗದೀಶ್ ಹಾಗೂ ಅವರ ಪತ್ನಿ ಮಾಧ್ಯಮಗಳೊಟ್ಟಿಗೆ ಮಾತನಾಡಿದರು.

  'ನಮ್ಮನ್ನು ಡ್ರಗ್ಸ್ ಪ್ರಕರಣದ ವಿಚಾರಣೆಗೆ ಕರೆದಿರಲಿಲ್ಲ, ಡ್ರಗ್ಸ್ ಪ್ರಕರಣದ ಬಗ್ಗೆ ನಮ್ಮನ್ನು ಪ್ರಶ್ನೆ ಮಾಡಿಲ್ಲ' ಎಂದರು ನಿರ್ಮಾಪಕ ದಂಪತಿ.

  ಡ್ರಗ್ಸ್ ಪ್ರಕರಣ: ಸಿಸಿಬಿ ವಿಚಾರಣೆಗೆ ಹಾಜರಾದ ನಿರ್ಮಾಪಕ ಸೌಂದರ್ಯ ಜಗದೀಶ್ಡ್ರಗ್ಸ್ ಪ್ರಕರಣ: ಸಿಸಿಬಿ ವಿಚಾರಣೆಗೆ ಹಾಜರಾದ ನಿರ್ಮಾಪಕ ಸೌಂದರ್ಯ ಜಗದೀಶ್

  ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನಿರ್ಮಾಪಕ ಸೌಂದರ್ಯ ಜಗದೀಶ್ ಹಾಗೂ ಅವರ ಪತ್ನಿ ರೇಖಾ ಅವರಿಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅಂತೆಯೇ ಇಬ್ಬರೂ ಸಹ ಇಂದು ಸಿಸಿಬಿ ಎದುರು ವಿಚಾರಣೆಗೆ ಹಾಜರಾಗಿದ್ದರು.

  ರಾಮ್‌ಲೀಲಾ ಸಿನಿಮಾದಲ್ಲಿ ಸಂಜನಾ ಗಲ್ರಾನಿ

  ರಾಮ್‌ಲೀಲಾ ಸಿನಿಮಾದಲ್ಲಿ ಸಂಜನಾ ಗಲ್ರಾನಿ

  'ನಾವು ರಾಮ್‌ಲೀಲಾ ಎಂಬ ಸಿನಿಮಾ ನಿರ್ಮಾಣ ಮಾಡಿದ್ದೆವು, ಅದರಲ್ಲಿ ಸಂಜನಾ ಗಲ್ರಾನಿ ನಟಿಸಿದ್ದರು. ಆ ಸಿನಿಮಾದ ಕುರಿತು ವಿಚಾರಣೆಗೆಂದು ಸಿಸಿಬಿ ಅಧಿಕಾರಿಗಳು ಕರೆದಿದ್ದರು. ಡ್ರಗ್ಸ್ ಪ್ರಕರಣದ ವಿಚಾರಣೆಗೆ ನಮ್ಮನ್ನು ಕರೆದಿರಲಿಲ್ಲ' ಎಂದರು ಸೌದರ್ಯ ಜಗದೀಶ್.

  ಡ್ರಗ್ಸ್ ಪ್ರಕರಣ: ಬಿಗ್‌ಬಾಸ್ ಸ್ಪರ್ಧಿ ಆಡಂ ಪಾಷಾ ಬಂಧನಡ್ರಗ್ಸ್ ಪ್ರಕರಣ: ಬಿಗ್‌ಬಾಸ್ ಸ್ಪರ್ಧಿ ಆಡಂ ಪಾಷಾ ಬಂಧನ

  'ಸಂಜನಾ ಗೆ ಸಂಭಾವನೆ ಚೆಕ್‌ನಲ್ಲಿ ಕೊಟ್ರಾ ನಗದು ರೂಪದಲ್ಲಾ'

  'ಸಂಜನಾ ಗೆ ಸಂಭಾವನೆ ಚೆಕ್‌ನಲ್ಲಿ ಕೊಟ್ರಾ ನಗದು ರೂಪದಲ್ಲಾ'

  ರಾಮ್‌ಲೀಲಾ ಸಿನಿಮಾದಲ್ಲಿ ನಟಿಸಿದ್ದ ಸಂಜನಾ ಗಲ್ರಾನಿಗೆ ಎಷ್ಟು ಹಣ ಸಂಭಾವನೆಯಾಗಿ ಕೊಟ್ಟಿರಿ? ಸಂಭಾವನೆಯನ್ನು ಚೆಕ್‌ನಲ್ಲಿ ಕೊಟ್ಟಿದ್ರಾ ಅಥವಾ ನಗದು ರೂಪದಲ್ಲಿ ಕೊಟ್ಟಿದ್ದಿರಾ ಎಂದು ಪ್ರಶ್ನೆ ಮಾಡಿದರು. ಸಿಸಿಬಿ ಅವರ ಬಹುತೇಕ ಪ್ರಶ್ನೆಗಳು ಸಿನಿಮಾದ ಸುತ್ತವೇ ಇತ್ತು ಎಂದಿದ್ದಾರೆ ದಂಪತಿ.

  'ನಮಗೆ ಡ್ರಗ್ಸ್ ಪ್ರಕರಣದೊಂದಿಗೆ ಸಂಬಂಧವಿಲ್ಲ'

  'ನಮಗೆ ಡ್ರಗ್ಸ್ ಪ್ರಕರಣದೊಂದಿಗೆ ಸಂಬಂಧವಿಲ್ಲ'

  ಸಿಸಿಬಿ ಅವರು ಕೇಳಿದ ಎಲ್ಲಾ ಪ್ರಶ್ನೆಗೂ ನಾವು ಸೂಕ್ತವಾದ ಉತ್ತರ ನೀಡಿದ್ದೇವೆ, ನಮಗೆ ಡ್ರಗ್ಸ್ ಪ್ರಕರಣದೊಂದಿಗೆ ಯಾವುದೇ ನಂಟು ಇಲ್ಲ. ಮತ್ತೆ ವಿಚಾರಣೆಗೆ ಬರುವಂತೆ ಸಿಸಿಬಿ ಅವರು ಹೇಳಿಲ್ಲ, ಒಂದೊಮ್ಮೆ ಮತ್ತೆ ಕರೆದರೆ ಬರುತ್ತೇವೆ ಎಂದು ದಂಪತಿ ಹೇಳಿದ್ದಾರೆ.

  ಸೇಲ್ಸ್ ಮೆನ್ ಆಗಿ ಜಂಟಲ್ ಮೆನ್ ಚಿತ್ರದಲ್ಲಿ ಪ್ರಜ್ವಲ್ ಮಿಂಚಿದ್ದು ಹೀಗೆ | Filmibeat Kannada
  ರಾಗಿಣಿ-ಸಂಜನಾ ಬಂಧನ

  ರಾಗಿಣಿ-ಸಂಜನಾ ಬಂಧನ

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಹಾಗೂ ಇನ್ನೂ ಹಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದಿಗಂತ್ ನಟಿ ಐಂದ್ರಿತಾ ರೈ, ನಟ ಯೋಗಿ, ನಿರೂಪಕ ಅಕುಲ್ ಬಾಲಾಜಿ, ನಿರೂಪಕಿ ಅನುಶ್ರೀ ಇನ್ನೂ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

  English summary
  Producer Soundarya Jagadeesh and his wife attended CCB inquiry today. They told CCB did not ask questions about on going drug case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X