ಚಿತ್ರೋದ್ಯಮದಲ್ಲಿ ಡ್ರಗ್ಸ್ ಪ್ರಕರಣ: ರಾಗಿಣಿ ನಂತರ ಮತ್ತೊಬ್ಬ ನಟಿಗೆ ಸಿಸಿಬಿ ನೊಟೀಸ್?
ಚಿತ್ರೋಮದ್ಯಮದ ಕೆಲವರಿಗೆ ಮಾದಕ ವಸ್ತು ಮಾಫಿಯಾದೊಂದಿಗೆ ನಂಟಿದೆ ಎಂಬ ಬಗ್ಗೆ ಸಿಸಿಬಿ ತನಿಖೆ ನೆಡಸುತ್ತಿದ್ದು, ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ.
Recommended Video
ಎನ್‌ಸಿಬಿಯು ಅನಿಕಾ ಎಂಬಾಕೆ ಹಾಗೂ ಇನ್ನೂ ಇಬ್ಬರನ್ನು ವಶಕ್ಕೆ ಪಡೆದ ಬಳಿಕ, ಚಂದನವನದಲ್ಲಿಯೂ ಕೆಲವರಿಗೆ ಮಾದಕ ವಸ್ತುವಿನ ವ್ಯಸನವಿರುವ ಅಂಶ ಬೆಳಕಿಗೆ ಬಂತು. ಇಂದ್ರಜಿತ್ ಲಂಕೇಶ್ ಹಾಗೂ ಇನ್ನಿತರರು, ಚಂದನವನದ ಕೆಲವು ನಟ-ನಟಿಯರಿಗೆ ಮಾದಕ ವ್ಯಸನವಿದೆ ಎಂದು ಆರೋಪಿಸಿ, ಸಾಕ್ಷ್ಯ ಸಹ ನೀಡಲು ತಯಾರಾಗಿದ್ದೇವೆ ಎಂದ ನಂತರ ಪ್ರಕರಣ ದೊಡ್ಡ ತಿರುವನ್ನೇ ತೆಗೆದುಕೊಂಡಿತು.
ಸಿಸಿಬಿಯಿಂದ ಬಂಧಿಸಲ್ಪಟ್ಟ ರವಿಶಂಕರ್ ನೀಡಿದ ಮಾಹಿತಿ ಮೇರೆಗೆ ನಟಿ ರಾಗಿಣಿಗೆ ಸಿಸಿಬಿಯು ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ತಾವು ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ರಾಗಿಣಿ ಹೇಳಿದ್ದಾರೆ.

ನಟಿ ಸಂಜನಾ ಗಲ್ರಾನಿಗೆ ಸಿಸಿಬಿ ನೊಟೀಸ್?
ಹಲವು ಕನ್ನಡ ಹಾಗೂ ಇತರ ಭಾಷೆಗಳಲ್ಲಿಯೂ ನಟಿಸಿರುವ ಸಂಜನಾ ಗಲ್ರಾನಿ ಅವರಿಗೆ ಸಿಸಿಬಿ ನೊಟೀಸ್ ನೀಡುವ ದಟ್ಟ ಸಾಧ್ಯತೆ ಇದೆ. ಸಂಜನಾ ಗಲ್ರಾನಿ ಆಪ್ತರೊಬ್ಬರನ್ನು ಸಿಸಿಬಿ ಈಗಾಗಲೇ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಸಂಜನಾ ಆಪ್ತ ಸಿಸಿಬಿ ವಶದಲ್ಲಿ
ಸಂಜನಾ ಆಪ್ತ ರಾಕೇಶ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತ ಡ್ರಗ್ ಪೆಡ್ಲರ್ ಆಗಿದ್ದ ಎನ್ನುವ ಮಾಹಿತಿ ಇದೆ. ರಾಕೇಶ್ ನೀಡಿರುವ ಮಾಹಿತಿ ಮೇರೆಗೆ ಸಂಜನಾ ಗಲ್ರಾನಿಗೆ ನೊಟೀಸ್ ಹೋಗಲಿದೆ.

ಪ್ರಶಾಂತ್ ಸಂಬರಗಿ ವಿರುದ್ಧ ಸಂಜನಾ ಆರೋಪ
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜನಾ ಹೆಸರನ್ನು ಈಗಾಗಲೇ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸಂಜನಾ, ಆತನಿಗೆ ನನ್ನ ಹೆಸರು ಹೇಳುವ ಯೋಗ್ಯತೆ ಇಲ್ಲ ಎಂದಿದ್ದಾರೆ. ಅದರ ಜೊತೆಗೆ ಡ್ರಗ್ಸ್ ವಿಷಯದ ಬಗ್ಗೆ ನಾನೀಗ ಮಾತನಾಡುವುದಿಲ್ಲ ಎಂದೂ ಸಹ ಹೇಳಿದ್ದಾರೆ.


Click it and Unblock the Notifications











