For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ವಿವೇಕ್ ಒಬೆರಾಯ್ ಪತ್ನಿಗೆ ಸಿಸಿಬಿಯಿಂದ ನೋಟಿಸ್

  |

  ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರ ಪತ್ನಿ ಪ್ರಿಯಾಂಕಾಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸ್ ನೋಟಿಸ್ ನೀಡಿದ್ದಾರೆ.

  ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಆದಿತ್ಯ ಆಳ್ವಾ ಅವರನ್ನು ಹುಡುಕುತ್ತಿರುವ ಪೊಲೀಸರು, ನಿನ್ನೆಯಷ್ಟೇ ಮುಂಬೈನಲ್ಲಿರುವ ವಿವೇಕ್ ಒಬೇರಾಯ್ ಮನೆ ಮೇಲೆ ದಾಳಿ ನಡೆಸಿ ಶೋಧ ಮಾಡಿದ್ದರು.

  ನಟ ವಿವೇಕ್ ಒಬೆರಾಯ್ ಮನೆ ಮೇಲೆ ಬೆಂಗಳೂರು ಪೊಲೀಸರು ದಾಳಿನಟ ವಿವೇಕ್ ಒಬೆರಾಯ್ ಮನೆ ಮೇಲೆ ಬೆಂಗಳೂರು ಪೊಲೀಸರು ದಾಳಿ

  ಇದರ ಬೆನ್ನಲ್ಲೆ ವಿವೇಕ್ ಒಬೇರಾಯ್ ಅವರ ಪತ್ನಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕಾ ಮತ್ತು ಆರೋಪಿ ಆದಿತ್ಯಾ ಆಳ್ವಾ ಸಹೋದರ-ಸಹೋದರಿ. ಹೀಗಾಗಿ, ಆದಿತ್ಯ ಆಳ್ವಾ ಕುರಿತು ಮಾಹಿತಿ ಪಡೆಯಲು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.

  ಕರ್ನಾಟಕದ ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವಾ ಅವರ ಮಗಳನ್ನು ವಿವೇಕ್ ಒಬೆರಾಯ್ ವಿವಾಹವಾಗಿದ್ದಾರೆ. ವಿವೇಕ್ ಒಬೆರಾಯ್ ಪತ್ನಿಯ ಸಹೋದರ ಆದಿತ್ಯ ಆಳ್ವಾ ಕಾಟನ್‌ಪೇಟೆ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಬೇಕಾಗಿದ್ದಾರೆ.

  ನಮ್ಮ ಜನ ಏನು ಅಂತ ಅವತ್ತು ಪ್ರೂವ್ ಮಾಡಿದ್ರು | Filmibeat Kannada

  ಮುಂಬೈನಲ್ಲಿ ವಿವೇಕ್ ಒಬೆರಾಯ್ ನಿವಾಸದಲ್ಲಿ ಆದಿತ್ಯ ಆಳ್ವಾ ಅಡಗಿರಬಹುದು ಬಗ್ಗೆ ಮಾಹಿತಿ ಹಿನ್ನೆಲೆ ನ್ಯಾಯಾಲಯದ ಅನುಮತಿ ಪಡೆದು ಸಿಸಿಬಿ ದಾಳಿ ಮಾಡಿದ್ದರು.

  English summary
  City Crime Branch Bengaluru serves notice to Priyanka Alva Oberoi over links with brother Adithya Alva in connection with Sandalwood drug case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X