twitter
    For Quick Alerts
    ALLOW NOTIFICATIONS  
    For Daily Alerts

    ಡ್ರಗ್ಸ್ ಪ್ರಕರಣ: ಸಂಜನಾ-ರಾಗಿಣಿ ವಿರುದ್ಧ ತಿಂಗಳ ಅಂತ್ಯಕ್ಕೆ ಚಾರ್ಜ್‌ಶೀಟ್

    |

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದಷ್ಟೆ, ಸಂಜನಾ-ರಾಗಿಣಿ ಹಾಗೂ ಇತರ ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಇದರಿಂದಾಗಿ ಇನ್ನೂ ಹಲವುದಿನಗಳು ಇಬ್ಬರೂ ನಟಿಯರು ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ.

    ಡ್ರಗ್ಸ್ ಪ್ರಕರಣದ ತನಿಖೆಯನ್ನು ಕಳೆದ ಎರಡು ತಿಂಗಳಿನಿಂದಲೂ ನಡೆಸುತ್ತಿರುವ ಸಿಸಿಬಿಯು ಇದೇ ತಿಂಗಳಾಂತ್ಯಕ್ಕೆ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದೆ.

    ಸಂಜನಾ-ರಾಗಿಣಿಯನ್ನು ಬಿಡುಗಡೆ ಮಾಡದಿದ್ದರೆ ಬಾಂಬ್ ಇಡುವುದಾಗಿ ಬೆದರಿಕೆಸಂಜನಾ-ರಾಗಿಣಿಯನ್ನು ಬಿಡುಗಡೆ ಮಾಡದಿದ್ದರೆ ಬಾಂಬ್ ಇಡುವುದಾಗಿ ಬೆದರಿಕೆ

    180 ದಿನಗಳ ಒಳಗಾಗಿ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಬೇಕಾಗಿದ್ದು, ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಸಿಸಿಬಿ ಅಧಿಕಾರಿಗಳು ಇದೇ ನವೆಂಬರ್ ತಿಂಗಳ ಅಂತ್ಯಕ್ಕೆ ಚಾರ್ಜ್ ಶೀಟ್ ಅನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

    ಅನಿಕಾ ಬಂಧನದ ನಂತರ ತನಿಖೆ ಚುರುಕು

    ಅನಿಕಾ ಬಂಧನದ ನಂತರ ತನಿಖೆ ಚುರುಕು

    ಸೆಪ್ಟೆಂಬರ್ 4ರಂದು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಸಿಪಿ ಗೌತಮ್ ಅವರು ನೀಡಿದ ದೂರಿನ ಆಧಾರದಲ್ಲಿ ಕಳೆದ ಎರಡು ತಿಂಗಳಿನಿಂದ ಸಿಸಿಬಿ ತನಿಖೆ ನಡೆಸಿದೆ. ಎನ್‌ಸಿಬಿಯು ಬೆಂಗಳೂರಿನ ಕಲ್ಯಾಣ ನಗರದಲ್ಲಿ ವಾಸವಿದ್ದ ಅನಿಕಾ ಅನ್ನು ಬಂಧಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಸಿಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದರು.

    ನಟ-ನಟಿಯರ ಹೇಳಿಕೆಗಳು ದಾಖಲು

    ನಟ-ನಟಿಯರ ಹೇಳಿಕೆಗಳು ದಾಖಲು

    ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಯೋಗಿ, ದಿಗಂತ್, ಐಂದ್ರಿತಾ ರೈ, ಅಕುಲ್ ಬಾಲಾಜಿ, ನಿರ್ಮಾಪಕ ಸೌಂದರ್ಯ, ಕಿರುತೆರೆ ನಟರು, ಉದ್ಯಮಿಗಳನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಆ ಮಾಹಿತಿಯೂ ಸಹ ಚಾರ್ಜ್‌ ಶೀಟ್‌ನಲ್ಲಿ ದಾಖಲಾಗಲಿದೆ.

    Recommended Video

    ಆತ್ಮೀಯ ಗೆಳೆಯನಿಗೆ ವಿಶ್ ಮಾಡಿದ D Boss | Filmibeat Kannada
    ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಜಾಮೀನು?

    ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಜಾಮೀನು?

    ಚಾರ್ಜ್‌ ಶೀಟ್ ಸಲ್ಲಿಕೆಯಾದ ನಂತರ ಆರೋಪಿಗಳಿಗೆ ಜಾಮೀನಿನ ಆಸೆ ಮತ್ತೆ ಚಿಗುರೊಡೆಯುವ ಸಾಧ್ಯತೆ ಇದೆ. ಚಾರ್ಜ್‌ ಶೀಟ್‌ ನಲ್ಲಿ ನಟಿಯರು ಹಾಗೂ ಇತರ ಆರೋಪಿಗಳ ಅಪರಾಧ ಗಂಭೀರ ಸ್ವರಪದ್ದೂ ಎನಿಸದೇ ಇದ್ದಲ್ಲಿ, ಅಥವಾ ತನಿಖೆ ಭಾಗಷಃ ಮುಗಿದಿದೆ ಎನಿಸಿದಲ್ಲಿ ಆರೋಪಿಗಳಿಗೆ ಜಾಮೀನು ದೊರಕುವ ಸಾಧ್ಯತೆ ಇದೆ. ಹಲವು ಪ್ರಕರಣಗಳಲ್ಲಿ ಜಾರ್ಜ್‌ ಶೀಟ್ ಸಲ್ಲಿಕೆ ನಂತರ ಜಾಮೀನು ದೊರಕುವ ಅವಕಾಶ ತುಸು ಹೆಚ್ಚಾಗುತ್ತದೆ.

    English summary
    In Sandalwood drug case CCB will submit charge sheet against all accused in the end of November.
    Thursday, November 5, 2020, 16:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X