CCL 2026: ಇಂದು ಕರ್ನಾಟಕ ಬುಲ್ಡೋಜರ್ಸ್ ಎದುರಾಳಿ ಯಾರು? ಹೇಗಿದೆ ಬಲಾಬಲ?

ಸಿಸಿಎಲ್‌ 12ನೇ ಟೂರ್ನಿ ಕುತೂಹಲ ಮೂಡಿಸಿದೆ. ಸಿನಿಮಾ ತೆರೆಯರು ಕ್ರಿಕೆಟ್ ಮೈದಾನಕ್ಕೆ ಇಳಿದು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಕ್ರಿಕೆಟ್ ಆಡಿ ಎಂಜಾಯ್ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಆರ್ಭಟ ಜೋರಾಗಿದೆ. ಲೀಗ್ ಹಂತದ 2 ಪಂದ್ಯಗಳನ್ನು ಗೆದ್ದು ಈಗಾಗಲೇ ಸೆಮಿಫೈನಲ್ ಹಾದಿ ಖಚಿತಪಡಿಸಿಕೊಂಡಿದೆ.

ಲೀಗ್ ಹಂತದ ತನ್ನ ಮೂರನೇ ಪಂದ್ಯವನ್ನು ಇಂದು(ಜನವರಿ 25) ಆಡಲು ಕರ್ನಾಟಕ ಬುಲ್ಡೋಜರ್ಸ್ ಆಟಗಾರರು ಸಿದ್ಧತೆ ನಡೆಸಿದ್ದಾರೆ. ಕೋಯಂಬತ್ತೂರಿನ ಶ್ರೀ ರಾಮಕೃಷ್ಣ ಕಲಾ ಮತ್ತು ವಿಜ್ಞಾನ ಕಾಲೇಜು ಮೈದಾನದಲ್ಲಿ ಪಂದ್ಯ ನಡೆಯಲಿದೆ. 3ನೇ ಪಂದ್ಯದಲ್ಲಿ ಭೋಜ್‌ಪುರಿ ದಬಾಂಗ್ಸ್ ತಂಡವನ್ನು ಕಿಚ್ಚನ ಪಡೆ ಎದುರಿಸಲಿದೆ. ಮಧ್ಯಾಹ್ನ 2 ಗಂಟಗೆ ಪಂದ್ಯ ಆರಂಭವಾಗಲಿದೆ.

CCL 12 Karnataka Bulldozers Face Bhojpuri Dabangs Today as Semi-Final Race Heats Up

ಈಗಾಗಲೇ ಲೀಗ್ ಹಂತದಲ್ಲಿ 10 ಪಂದ್ಯಗಳು ಮುಕ್ತಾಯವಾಗಿದೆ. ಇಂದು 2ನೇ ಪಂದ್ಯದಲ್ಲಿ ಚೆನ್ನೈ ಕಿಂಗ್ಸ್ ಹಾಗೂ ಮುಂಬೈ ಹೀರೊಸ್ ತಂಡಗಳು ಸೆಣೆಸಲಿವೆ. ನಿನ್ನೆ ಭೋಜ್‌ಪುರಿ ದಬಾಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ದೆ ಶೇರ್ ತಂಡ 6 ವಿಕೆಟ್ ಗೆಲುವು ಸಾಧಿಸಿತ್ತು. ಮತ್ತೊಂದು ಪಂದ್ಯದಲ್ಲಿ ಚೆನ್ನೈ ಕಿಂಗ್ಸ್ ವಿರುದ್ಧ ಕೇರಳ ಸ್ಟೈಕರ್ಸ್ ತಂಡ ಗೆಲುವಿನ ನಗೆ ಬೀರಿತ್ತು.

ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ ಬೆಂಗಾಲ್ ಟೈಗರ್ಸ್ ತಂಡ ಮೊದಲ ಸ್ಥಾನದಲ್ಲಿದೆ. ಆಡಿದ 3 ಪಂದ್ಯಗಳನ್ನು ಗೆದ್ದು 6 ಅಂಕ ಗಿಟ್ಟಿಸಿದೆ. 2 ಪಂದ್ಯಗಳನ್ನು ಗೆದ್ದು ಕರ್ನಾಟಕ ಬುಲ್ಡೋಜರ್ಸ್ 4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. 3 ಪಂದ್ಯದಲ್ಲಿ 2 ಪಂದ್ಯ ಗೆದ್ದು ಕೇರಳ ಸ್ಟೈಕರ್ಸ್ 3ನೇ ಸ್ಥಾನ ಪಡೆದಿದ್ದು 3 ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದು ಒಳ್ಳೆ ನೆಟ್ ರನ್‌ರೇಟ್ ಕಾರಣಕ್ಕೆ ಪಂಜಾಬ್ ದೆ ಶೇರ್ 4ನೇ ಸ್ಥಾನದಲ್ಲಿದೆ. ಈ 4 ತಂಡಗಳು ಸೆಮಿಫೈನಲ್ ಹಂತ ಏರುವುದು ಬಹುತೇಕ ಖಚಿತವಾಗಿದೆ.

ಇವತ್ತಿನ ಎರಡೂ ಪಂದ್ಯಗಳು ಅಷ್ಟೇನು ಮಹತ್ವ ಪಡೆದಿಲ್ಲ. ಮುಂಬೈ ಹೀರೊಸ್ ಹಾಗೂ ಚೆನ್ನೈ ಕಿಂಗ್ಸ್ ತಲಾ ಎರಡೂ ಪಂದ್ಯ ಆಡಿ ಸೋತಿವೆ. ಭೋಜ್‌ಪುರಿ ದಬಾಂಗ್ಸ್ 2 ಪಂದ್ಯದಲ್ಲಿ ಒಂದರಲ್ಲಿ ಗೆದ್ದಿದೆ. ಇವತ್ತು ಕರ್ನಾಟಕ ಬುಲ್ಡೋಜರ್ಸ್ ವಿರುದ್ಧ ಗೆದ್ದರೆ ಸೆಮಿಫೈನಲ್ ಪ್ರವೇಶಿಸಿಬಹುದು. ಸೋತರೆ ಪಂಜಾಬ್ ಸೆಮಿಫೈನಲ್ ಕನಸು ನನಸಾಗಬಹುದು.

ಸಿಸಿಎಲ್‌ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಈವರೆಗೆ 2 ಬಾರಿ ಟ್ರೋಫಿ ಗೆದ್ದಿದೆ. ಆದರೆ ಇತ್ತೀಚೆಗೆ ಅದು ಸಾಧ್ಯವಾಗುತ್ತಿಲ್ಲ. ಕಳೆದ ಸೀಸನ್‌ನಲ್ಲಿ ಪ್ರಬಲ ತಂಡ ಎಂದೇ ಗುರ್ತಿಸಿಕೊಂಡಿದ್ದ ಸುದೀಪ್ ಪಡೆ ನಿರಾಸೆ ಅನುಭವಿಸಿತ್ತು. ಆದರೆ ಈ ಬಾರಿ 2 ಪಂದ್ಯ ಗೆದ್ದು ಬೀಗಿದೆ. ತೆಲುಗು ವಾರಿಯರ್ಸ್ ಹಾಗೂ ಪಂಜಾಬ್ ದೆ ಶೇರ್ ರೀತಿಯ ಘಟಾನುಘಟಿ ತಂಡಗಳನ್ನು ಸೋಲಿಸಿ ಮನೆಗೆ ಕಳುಹಿಸಿದೆ.

ಇನ್ನು ಭೋಜ್‌ಪುರಿ ದಬಾಂಗ್ಸ್ ಪರ ನಾಯಕ ಮನೋಜ್ ತಿವಾರಿ ಒಳ್ಳೆ ಫಾರ್ಮ್‌ನಲ್ಲಿದ್ದಾರೆ. ಇನ್ನುಳಿದಂತೆ ನೀಲ್, ದಿನೇಶ್ ಲಾಲ್ ಯಾದವ್ ಹಾಗೂ ಖೇಸರಿ ಲಾಲ್ ಯಾದವ್ ತಂಡಕ್ಕೆ ಆಸರೆ ಆಗಲಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ಬ್ಯಾಟಿಂಗ್ ಕ್ರಮಾಂಕ ಚೆನ್ನಾಗಿದೆ. ರಾಜೀವ್, ಪ್ರದೀಪ್ ಆರಂಭಿಕ ಆಟಗಾರರಾಗಿ ತಂಡಕ್ಕೆ ಬಲ ತುಂಬುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ತಂಡದ ಸ್ಟಾರ್ ಆಟಗಾರ. ಕಳೆದ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ವಿರುದ್ಧ ರಾಜೀವ್ ಶತಕ ಸಿಡಿಸಿ ಸಂಭ್ರಮಿಸಿದ್ದರು.

ವಯಸ್ಸು 50 ದಾಟಿದ್ರು ಕಿಚ್ಚ ಮೈದಾನದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಯುವಕರನ್ನು ನಾಚಿಸುವಂತೆ ತಂಡ ಮುನ್ನಡೆಸುತ್ತಿದ್ದಾರೆ. ಕೀಪರ್ ಆಗಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಇನ್ನು ತಂಡವನ್ನು ಹುರಿದುಂಬಿಸುವಲ್ಲಿ ಸದಾ ಮುಂದೆ ನಿಲ್ಲುತ್ತಾರೆ. ಜಿಯೋ ಹಾಟ್‌ಸ್ಟರ್‌ನಲ್ಲಿ ಸಿಸಿಎಲ್ ಪಂದ್ಯಗಳನ್ನು ಲೈವ್ ವೀಕ್ಷಿಸಬಹುದು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X