2011ರಿಂದ 2023: ಎಲ್ಲಾ ಸಿಸಿಎಲ್ ಸೀಸನ್‌ನಲ್ಲಿ ಚಾಂಪಿಯನ್ ಹಾಗೂ ರನ್ನರ್ ಅಪ್ ಆದ ತಂಡಗಳ ಪಟ್ಟಿ
ಸಿನಿ ರಸಿಕರು ಹಾಗೂ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಒಂಬತ್ತನೇ ಆವೃತ್ತಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ಶುರುವಾಗಿ ನಿನ್ನೆ ( ಮಾರ್ಚ್ 25 ) ಮುಕ್ತಾಯಗೊಂಡಿದೆ. ನಿನ್ನೆ ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ತೆಲುಗು ವಾರಿಯರ್ಸ್ ಹಾಗೂ ಭೋಜ್‌ಪುರಿ ದಬಾಂಗ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ಟೂರ್ನಿಗೆ ತೆರೆ ಬಿದ್ದಿದೆ.
ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಹಾಗೂ ಎರಡನೇ ಇನ್ನಿಂಗ್ಸ್ ಎರಡರಲ್ಲಿಯೂ ಭೋಜ್‌ಪುರಿ ದಬಾಂಗ್ಸ್ ಮೇಲೆ ಸವಾರಿ ಮಾಡಿದ ತೆಲುಗು ವಾರಿಯರ್ಸ್ ತಂಡ 9 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿದೆ. ಈ ಮೂಲಕ ತೆಲುಗು ವಾರಿಯರ್ಸ್ ನಾಲ್ಕನೇ ಬಾರಿಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಅತ್ತ ತನ್ನ ಚೊಚ್ಚಲ ಟ್ರೋಫಿ ಗೆಲ್ಲುವ ಕನಸನ್ನು ಹೊಂದಿದ್ದ ಭೋಜ್‌ಪುರಿ ದಬಾಂಗ್ಸ್ ಹೀನಾಯವಾಗಿ ಸೋತು ಬರಿಗೈನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.

ಇನ್ನು ನಮ್ಮ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಗ್ರೂಪ್ ಹಂತದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ವಿರುದ್ಧ ಸೋಲುವ ಮೂಲಕ ಟೂರ್ನಿಯಲ್ಲಿ ಮೊದಲ ಸೋಲನ್ನು ಕಂಡು ಟೂರ್ನಿಯಿಂದ ಹೊರಬಿತ್ತು.
ಕಳೆದ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಮುಂಬೈ ಹೀರೋಸ್ ಸಹ ಸೆಮಿಫೈನಲ್ ಹಂತದಲ್ಲಿ ಹೊರಬಿತ್ತು. ಭೋಜ್‌ಪುರಿ ದಬಾಂಗ್ಸ್ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಮುಂಬೈ ಹೀರೊಸ್ ಸೆಮಿಫೈನಲ್‌ಗೆ ತನ್ನ ಓಟವನ್ನು ಅಂತ್ಯಗೊಳಿಸಿತ್ತು.
ಉಳಿದಂತೆ ಚೆನ್ನೈ ರೈನೊಸ್, ಬೆಂಗಾಲ್ ಟೈಗರ್ಸ್, ಕೇರಳ ಸ್ಟ್ರೈಕರ್ಸ್ ಹಾಗೂ ಪಂಜಾಬ್ ದೆ ಶೇರ್ ತಂಡಗಳು ಗ್ರೂಪ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದವು. ಹೀಗೆ ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ತಂಡಗಳು ಮೇಲಿನ ರೀತಿ ಸ್ಥಾನಗಳನ್ನು ಪಡೆದುಕೊಂಡಿವೆ. ಹಾಗಾದರೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿ ಆರಂಭವಾದಾಗಿನಿಂದ ಹಿಡಿದು ಇಲ್ಲಿಯವರೆಗೂ ನಡೆದಿರುವ ಎಲ್ಲಾ ಆವೃತ್ತಿಗಳಲ್ಲಿಯೂ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ ತಂಡಗಳು ಯಾವುವು ಹಾಗೂ ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಅಪ್ ಎನಿಸಿಕೊಂಡ ತಂಡಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

2011 - ಚೆನ್ನೈ ರೈನೊಸ್ ಚಾಂಪಿಯನ್ ಹಾಗೂ ಕರ್ನಾಟಕ ಬುಲ್ಡೋಜರ್ಸ್ ರನ್ನರ್ ಅಪ್
2012 - ಚೆನ್ನೈ ರೈನೊಸ್ ಚಾಂಪಿಯನ್ ಹಾಗೂ ಕರ್ನಾಟಕ ಬುಲ್ಡೋಜರ್ಸ್ ರನ್ನರ್ ಅಪ್
2013 - ಕರ್ನಾಟಕ ಬುಲ್ಡೋಜರ್ಸ್ ಚಾಂಪಿಯನ್ ಹಾಗೂ ತೆಲುಗು ವಾರಿಯರ್ಸ್ ರನ್ನರ್ ಅಪ್
2014 - ಕರ್ನಾಟಕ ಬುಲ್ಡೋಜರ್ಸ್ ಚಾಂಪಿಯನ್ ಹಾಗೂ ಕೇರಳ ಸ್ಟ್ರೈಕರ್ಸ್ ರನ್ನರ್ ಅಪ್
2015 - ತೆಲುಗು ವಾರಿಯರ್ಸ್ ಚಾಂಪಿಯನ್ ಹಾಗೂ ಚೆನ್ನೈ ರೈನೊಸ್ ರನ್ನರ್ ಅಪ್
2016 - ತೆಲುಗು ವಾರಿಯರ್ಸ್ ಚಾಂಪಿಯನ್ ಹಾಗೂ ಕರ್ನಾಟಕ ಬುಲ್ಡೋಜರ್ಸ್ ರನ್ನರ್ ಅಪ್
2017 - ತೆಲುಗು ವಾರಿಯರ್ಸ್ ಚಾಂಪಿಯನ್ ಹಾಗೂ ಕೇರಳ ಸ್ಟ್ರೈಕರ್ಸ್ ರನ್ನರ್ ಅಪ್
2019 - ಮುಂಬೈ ಹೀರೊಸ್ ಚಾಂಪಿಯನ್ ಹಾಗೂ ಕರ್ನಾಟಕ ಬುಲ್ಡೋಜರ್ಸ್ ರನ್ನರ್ ಅಪ್
2023 - ತೆಲುಗು ವಾರಿಯರ್ಸ್ ಚಾಂಪಿಯನ್ ಹಾಗೂ ಭೋಜ್‌ಪುರಿ ದಬಾಂಗ್ಸ್ ರನ್ನರ್ ಅಪ್


Click it and Unblock the Notifications











