CCL 2023: ಕರ್ನಾಟಕ ಬುಲ್ಡೋಜರ್ಸ್ vs ಚೆನ್ನೈ ರೈನೋಸ್ ನೇರಪ್ರಸಾರ, ಸಂಭಾವ್ಯ ಆಡುವ ಬಳಗ
ಸಿನಿ ರಸಿಕರು ಹಾಗೂ ಕ್ರೀಡಾ ಪ್ರಿಯರ ನೆಚ್ಚಿನ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಹತ್ತನೇ ಆವೃತ್ತಿ ಸದ್ಯ ಜರುಗುತ್ತಿದೆ. ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಕಣಕ್ಕೆ ಇಳಿದಿವೆ. ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಪ್ರದೀಪ್ ಮುನ್ನಡೆಸುತ್ತಿದ್ದಾರೆ.
ಇನ್ನುಳಿದಂತೆ ತೆಲುಗು ಟೈಟಾನ್ಸ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೊಸ್ ಹಾಗೂ ಪಂಜಾಬ್ ದೆ ಶೇರ್ ತಂಡಗಳು ತಮ್ಮ ತಮ್ಮ ಭಾಷೆಯ ಚಿತ್ರರಂಗಗಳನ್ನು ಪ್ರತಿನಿಧಿಸಿವೆ. ಇನ್ನು ಲೀಗ್ ಹಂತದಲ್ಲಿ ಎಲ್ಲಾ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡುತ್ತಿದ್ದು, ಹೆಚ್ಚು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಳ್ಳಲಿರುವ ತಂಡಗಳು ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಡಲಿವೆ.

ಸದ್ಯ ಟೂರ್ನಿಯ ಲೀಗ್ ಹಂತದ 16 ಪಂದ್ಯಗಳ ಪೈಕಿ 8 ಪಂದ್ಯಗಳು ಮಾತ್ರ ಮುಗಿದಿದ್ದು, ಉಳಿದ ಪಂದ್ಯಗಳು ಜರುಗಬೇಕಿದೆ. ತುಸು ದೊಡ್ಡ ಬ್ರೇಕ್ ಬಳಿಕ ಟೂರ್ನಿಯ ಲೀಗ್ ಹಂತದ ಉಳಿದ ಪಂದ್ಯಗಳು ಇಂದಿನಿಂದ ( ಮಾರ್ಚ್ 4 ) ಶುರುವಾಗುತ್ತಿವೆ. ಇಂದು ಎರಡು ಪಂದ್ಯಗಳು ಜರುಗಲಿದ್ದು, ಎರಡೂ ಪಂದ್ಯಗಳೂ ಸಹ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಲಿವೆ.
ಮಧ್ಯಾಹ್ನ 2.30ಕ್ಕೆ ಆರಂಭವಾಗಿರುವ ಮೊದಲ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ಹಾಗೂ ಪಂಜಾಬ್ ದೆ ಶೇರ್ ಸೆಣಸಾಟ ನಡೆಸುತ್ತಿದ್ದು, ಸಂಜೆ 7 ಗಂಟೆಗೆ ಶುರುವಾಗಲಿರುವ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೊಸ್ ತಂಡಗಳು ಮುಖಾಮುಖಿಯಾಗಲಿವೆ. ತೆಲುಗು ವಾರಿಯರ್ಸ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ ಎಲ್ಲಾ ಎರಡು ಪಂದ್ಯಗಳಲ್ಲಿ ಗೆದ್ದಿದ್ದು, ಪಂಜಾಬ್ ದೆ ಶೇರ್ ಆಡಿರುವ ಎರಡೂ ಪಂದ್ಯಗಳಲ್ಲಿಯೂ ಸೋತಿದೆ.
ಹೀಗಾಗಿ ಪಂಜಾಬ್ ದೆ ಶೇರ್ ತಂಡ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಇನ್ನು ತೆಲುಗು ವಾರಿಯರ್ಸ್ ಈ ಪಂದ್ಯದಲ್ಲಿ ಗೆದ್ದರೆ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತ. ಇನ್ನು ಕರ್ನಾಟಕ ಬುಲ್ಡೋಜರ್ಸ್ ಸಹ ಇಲ್ಲಿಯವರೆಗೂ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಎರಡೂ ಪಂದ್ಯಗಳಲ್ಲಿ ಗೆದ್ದಿದೆ. ಈ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಗೆದ್ದರೆ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಅತ್ತ ಎರಡು ಪಂದ್ಯಗಳನ್ನಾಡಿ ಒಂದರಲ್ಲಿ ಗೆದ್ದು ಇನ್ನೊಂದರಲ್ಲಿ ಸೋತಿರುವ ಚೆನ್ನೈ ರೈನೋಸ್‌ಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಹೀಗೆ ಪ್ರಾಮುಖ್ಯತೆ ಪಡೆದುಕೊಂಡಿರುವ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ನಡುವಿನ ಈ ಪಂದ್ಯದ ನೇರ ಪ್ರಸಾರ ಯಾವ ಚಾನೆಲ್‌ನಲ್ಲಿ ಲಭ್ಯ, ಯಾವ ಆಟಗಾರರು ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಈ ಪಂದ್ಯದ ನೇರ ಪ್ರಸಾರ ಜೀ ಫೈವ್ ಓಟಿಟಿಯಲ್ಲಿ ಲಭ್ಯವಿದೆ ಹಾಗೂ ಜೀ ಪಿಚ್ಚರ್‌ನಲ್ಲಿ ಕನ್ನಡ, ಜೀ ದಿರೈನಲ್ಲಿ ತಮಿಳು, ಪಿಟಿಸಿ ಚಾನೆಲ್‌ನಲ್ಲಿ ಪಂಜಾಬಿ, ಜೀ ಸಿನಿಮಾಲು ಚಾನೆಲ್‌ನಲ್ಲಿ ತೆಲುಗು, ಆಂಡ್ ಪಿಕ್ಚರ್ಸ್ ಚಾನೆಲ್‌ನಲ್ಲಿ ಇಂಗ್ಲಿಷ್ ಕಾಮೆಂಟರಿಗಳಲ್ಲಿ ಈ ಪಂದ್ಯದ ನೇರಪ್ರಸಾರ ಲಭ್ಯವಿರಲಿದೆ.
ಕರ್ನಾಟಕ ಬುಲ್ಡೋಜರ್ಸ್ ಸಂಭಾವ್ಯ ಆಡುವ 11ರ ಬಳಗ: ಕಿಚ್ಚ ಸುದೀಪ್, ಪ್ರದೀಪ್ ಬೋಗಾದಿ (ನಾಯಕ), ಕೃಷ್ಣ, ಜಯರಾಂ ಕಾರ್ತಿಕ್, ರಾಜೀವ್ ಹನು, ನಿರೂಪ್ ಭಂಡಾರಿ, ಗಣೇಶ್, ಚಂದನ್ ಕುಮಾರ್, ಪೆಟ್ರೋಲ್ ಪ್ರಸನ್ನ, ಅರುಣ್, ಕರಣ್
ಚೆನ್ನೈ ರೈನೋಸ್ ಸಂಭಾವ್ಯ ಆಡುವ 11ರ ಬಳಗ: ಆರ್ಯ (ನಾಯಕ), ವಿಕ್ರಾಂತ್, ಅಶೋಕ್ ಸೆಲ್ವನ್, ಶಾಂತನು, ಪೃಥ್ವಿ, ವಿಷ್ಣು ವಿಶಾಲ್, ರಮಣ, ಶಿವ, ಭರತ್, ದಸರಾತಿ, ಕಲೈ ಅರಸನ್


Click it and Unblock the Notifications











