CCL 2023: ಚಿನ್ನಸ್ವಾಮಿಯಲ್ಲಿ ಕರ್ನಾಟಕ vs ಚೆನ್ನೈ ಕಾಳಗ; ಆನ್‌ಲೈನ್‌ನಲ್ಲಿ ಟಿಕೆಟ್ ಸೋಲ್ಡ್‌ಔಟ್, ಇಲ್ಲಿ ಲಭ್ಯ!
ಸಿನಿ ರಸಿಕರು ಹಾಗೂ ಕ್ರೀಡಾಭಿಮಾನಿಗಳ ನೆಚ್ಚಿನ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಹತ್ತನೇ ಆವೃತ್ತಿ ಸದ್ಯ ಆರಂಭವಾಗಿದ್ದು, ಲೀಗ್ ಹಂತದ 16 ಪಂದ್ಯಗಳ ಪೈಕಿ ಅರ್ಧದಷ್ಟು ಅಂದರೆ ಎಂಟು ಪಂದ್ಯಗಳು ಮುಕ್ತಾಯಗೊಂಡಿವೆ. ಉಳಿದ ಲೀಗ್ ಹಂತದ ಪಂದ್ಯಗಳು ನಾಳೆಯಿಂದ ( ಮಾರ್ಚ್ 4 ) ಆರಂಭವಾಗಲಿದ್ದು, ನಾಳೆ ನಡೆಯಲಿರುವ ಎರಡು ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ.
ಮೊದಲ ಪಂದ್ಯ ಮಧ್ಯಾಹ್ನ 2.30ಕ್ಕೆ ಆರಂಭವಾದರೆ, ಎರಡನೇ ಪಂದ್ಯ ಸಂಜೆ ಏಳು ಗಂಟೆಗೆ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ದೆ ಶೇರ್ ಹಾಗೂ ತೆಲುಗು ವಾರಿಯರ್ಸ್ ತಂಡಗಳು ಮುಖಾಮುಖಿಯಾದರೆ, ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ತಂಡಗಳು ಕಣಕ್ಕೆ ಇಳಿಯಲಿವೆ.

ತೆಲುಗು ವಾರಿಯರ್ಸ್ ಇಲ್ಲಿಯವರೆಗೂ ಆಡಿರುವ ಎರಡೂ ಪಂದ್ಯಗಳಲ್ಲಿಯೂ ಜಯ ಸಾಧಿಸಿದ್ದು, ಪಂಜಾಬ್ ದೆ ಶೇರ್ ವಿರುದ್ಧದ ಈ ಪಂದ್ಯವನ್ನು ಗೆದ್ದರೆ ಸೆಮಿ ಫೈನಲ್ ಹಾದಿ ಸುಲಭವಾಗಲಿದೆ. ಅತ್ತ ಇಲ್ಲಿಯವರೆಗೂ ಆಡಿರುವ ಎರಡೂ ಪಂದ್ಯಗಳಲ್ಲಿಯೂ ಸೋಲನ್ನು ಅನುಭವಿಸಿರುವ ಪಂಜಾಬ್ ದೆ ಶೇರ್ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಇನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ಸಹ ಇಲ್ಲಿಯವರೆಗೂ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿದ್ದು, ಚೆನ್ನೈ ರೈನೊಸ್ ಆಡಿರುವ ಎರಡು ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯವನ್ನು ಗೆದ್ದಿದೆ.
ಈ ಮೂಲಕ ಚೆನ್ನೈ ರೈನೋಸ್ ವಿರುದ್ಧದ ಈ ಪಂದ್ಯವನ್ನು ಕರ್ನಾಟಕ ಬುಲ್ಡೋಜರ್ಸ್ ಗೆದ್ದರೆ ಸೆಮಿಫೈನಲ್ ಹಂತದ ಪ್ರವೇಶ ಸುಲಭವಾಗಲಿದ್ದು, ಚೆನ್ನೈ ರೈನೋಸ್ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇನ್ನು ಈ ಪಂದ್ಯದ ಟಿಕೆಟ್‌ಗಳನ್ನು ಟಿಕೆಟ್ ಜೀನಿ ಡಾಟ್ ಕಾಮ್ ವೆಬ್ ತಾಣದಲ್ಲಿ ಮಾರಾಟ ಮಾಡಲಾಗಿದ್ದು, ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿ ಪಂದ್ಯವನ್ನು ನೋಡಲು ಮುಂದಾದವರು ಟಿಕೆಟ್ ಸೋಲ್ಡ್ಔಟ್ ಆಗಿವೆ ಎಂಬ ಬರಹ ಕಂಡು ಬೇಸರಕ್ಕೊಳಗಾಗಿದ್ದರು.

ಆದರೆ ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ಖರೀದಿಸಲು ಲಭ್ಯವಿದೆ ಎಂದು ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ 18ನೇ ಗೇಟ್‌ನಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 99 ರೂಪಾಯಿಗಳಿಂದ ಶುರುವಾಗುವ ಟಿಕೆಟ್ 1499 ರೂಪಾಯಿಗಳವರೆಗೂ ಸಹ ಲಭ್ಯವಿದೆ.
ಲೀಗ್ ಹಂತದ 8 ಪಂದ್ಯಗಳು ಮುಕ್ತಾಯವಾದ ನಂತರ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಅಂಕಪಟ್ಟಿಯಲ್ಲಿ ತಂಡಗಳು ಈ ಕೆಳಕಂಡಂತೆ ಅಂಕಗಳನ್ನು ಗಳಿಸಿ ಸ್ಥಾನ ಪಡೆದುಕೊಂಡಿವೆ.
1. ಎರಡು ಪಂದ್ಯಗಳನ್ನಾಡಿ ಎರಡೂ ಪಂದ್ಯಗಳಲ್ಲಿಯೂ ಗೆದ್ದಿರುವ ತೆಲುಗು ವಾರಿಯರ್ಸ್ 4 ಅಂಕಗಳ ಜತೆಗೆ ಹೆಚ್ಚಿನ ನೆಟ್ ರನ್ ರೇಟ್ ಹೊಂದಿರುವ ಕಾರಣ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
2. ಇನ್ನು ನಮ್ಮ ಕರ್ನಾಟಕ ಬುಲ್ಡೋಜರ್ಸ್ ಸಹ ಎರಡು ಪಂದ್ಯಗಳನ್ನಾಡಿ ಆ ಎರಡೂ ಪಂದ್ಯಗಳನ್ನು ಗೆದ್ದಿದ್ದು 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
3. ಭೋಜ್‌ಪುರಿ ದಬಾಂಗ್ಸ್ ತಂಡ ಸಹ ಎರಡು ಪಂದ್ಯಗಳನ್ನಾಡಿ ಎರಡೂ ಪಂದ್ಯಗಳಲ್ಲಿಯೂ ಗೆದ್ದು 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
4. ಎರಡು ಪಂದ್ಯಗಳನ್ನಾಡಿ ಒಂದು ಪಂದ್ಯದಲ್ಲಿ ಗೆದ್ದು ಉಳಿದೊಂದು ಪಂದ್ಯದಲ್ಲಿ ಸೋತಿರುವ ಚೆನ್ನೈ ರೈನೊಸ್ ನಾಲ್ಕನೇ ಸ್ಥಾನದಲ್ಲಿದೆ.
5. ಎರಡು ಪಂದ್ಯಗಳನ್ನಾಡಿ ಒಂದು ಪಂದ್ಯದಲ್ಲಿ ಗೆದ್ದು ಉಳಿದೊಂದು ಪಂದ್ಯದಲ್ಲಿ ಸೋತಿರುವ ಮುಂಬೈ ಹೀರೊಸ್ ಐದನೇ ಸ್ಥಾನದಲ್ಲಿದೆ.
6. ಎರಡು ಪಂದ್ಯಗಳನ್ನಾಡಿ ಎರಡೂ ಪಂದ್ಯಗಳಲ್ಲೂ ಸೋತಿರುವ ಪಂಜಾಬ್ ದೆ ಶೇರ್ ತಂಡ ಆರನೇ ಸ್ಥಾನದಲ್ಲಿದೆ.
7. ಬೆಂಗಾಲ್ ಟೈಗರ್ಸ್ ತಂಡ ಸಹ ಎರಡು ಪಂದ್ಯಗಳನ್ನಾಡಿ ಎರಡರಲ್ಲಿಯೂ ಸೋತು ಏಳನೇ ಸ್ಥಾನದಲ್ಲಿದೆ.
8. ಕೇರಳ ಸ್ಟ್ರೈಕರ್ಸ್ ಕೂಡ ಎರಡು ಪಂದ್ಯಗಳನ್ನಾಡಿ ಎರಡೂ ಪಂದ್ಯಗಳಲ್ಲಿಯೂ ಸೋತು ಎಂಟನೇ ಸ್ಥಾನದಲ್ಲಿದೆ.


Click it and Unblock the Notifications











