ಪ್ರದೀಪ್ ಅಜೇಯ ಅರ್ಧಶತಕ; ಸೆಮಿಫೈನಲ್ ಮೊದಲ ಇನ್ನಿಂಗ್ಸ್‌ನಲ್ಲಿ ತೆಲುಗು ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

ಸದ್ಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಹತ್ತನೇ ಆವೃತ್ತಿ ಜರುಗುತ್ತಿದ್ದು, ಲೀಗ್ ಹಂತ ಮುಕ್ತಾಯವಾಗಿ ಸೆಮಿಫೈನಲ್ ಸುತ್ತಿನ ಪಂದ್ಯಗಳು ಆರಂಭಗೊಂಡಿವೆ. ಇಂದು ( ಮಾರ್ಚ್ 24 ) ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಮಿಫೈನಲ್ ಸುತ್ತಿನ ಪಂದ್ಯಗಳು ಜರುಗಿವೆ. ಮೊದಲ ಪಂದ್ಯದಲ್ಲಿ ಮುಂಬೈ ಹೀರೊಸ್ ವಿರುದ್ಧ ಭೋಜ್‌ಪುರಿ ದಬಾಂಗ್ಸ್ ತಂಡ ಆರು ವಿಕೆಟ್‌ಗಳ ರೋಚಕ ಜಯವನ್ನು ಸಾಧಿಸಿ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದು, ಈ ತಂಡಕ್ಕೆ ಫೈನಲ್ ಪಂದ್ಯದಲ್ಲಿ ಯಾವ ತಂಡ ಎದುರಾಳಿಯಾಗಲಿದೆ ಎಂಬುದು ಈಗ ನಡೆಯುತ್ತಿರುವ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ಫಲಿತಾಂಶದಿಂದ ತಿಳಿದು ಬರಲಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ತೆಲುಗು ವಾರಿಯರ್ಸ್ ತಂಡದ ನಾಯಕ ಅಖಿಲ್ ಅಕ್ಕನೇನಿ ಫೀಲ್ಡಿಂಗ್ ಆಯ್ದುಕೊಂಡು ತಮ್ಮ ಎದುರಾಳಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ಪ್ರದೀಪ್ ಬೋಗಾದಿ ಅವರ ಅಬ್ಬರದ ಅಜೇಯ ಅರ್ಧಶತಕದ ನೆರವಿನಿಂದ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 99 ರನ್ ಕಲೆಹಾಕಿತು.

CCL 2023: Karnataka Bulldozers lead by 4 runs against Telugu Warriors in Semifinal first innings

ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ಡಾರ್ಲಿಂಗ್ ಕೃಷ್ಣ 33, ಚಂದನ್ ಕುಮಾರ್ 5, ರಾಜೀವ್ ಹನು 4, ಕರಣ್ ಆರ್ಯನ್ ಡಕ್ ಔಟ್, ಅರುಣ್ ಬಚ್ಚನ್ ಡಕ್ ಔಟ್, ಕಿಚ್ಚ ಸುದೀಪ್ ಹಾಗೂ ಪ್ರದೀಪ್ ಬೋಗಾದಿ 2 ಸಿಕ್ಸರ್, 5 ಬೌಂಡರಿ ಸಹಿತ 26 ಎಸೆತಗಳಲ್ಲಿ ಅಜೇಯ 50 ರನ್ ಬಾರಿಸಿದರು. ತೆಲುಗು ವಾರಿಯರ್ಸ್ ಪರ ಸಾಮ್ರಾಟ್ ಎರಡು ವಿಕೆಟ್ ಪಡೆದರೆ, ಪ್ರಿನ್ಸ್ ಹಾಗೂ ಸಚಿನ್ ಜೋಶಿ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನು ತೆಲುಗು ವಾರಿಯರ್ಸ್ ತಂಡ ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್‌ನಲ್ಲಿ 10 ಓವರ್‌ಗೆ 6 ವಿಕೆಟ್ ನಷ್ಟಕ್ಕೆ 95 ರನ್ ಕಲೆಹಾಕಿದೆ. ಈ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ 4 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ. ಹೀಗೆ ಎರಡೂ ತಂಡಗಳ ನಡುವೆ ಮೊದಲ ಇನ್ನಿಂಗ್ಸ್‌ನಲ್ಲಿ ತೀವ್ರ ಪೈಪೋಟಿ ಉಂಟಾಗಿದ್ದು ಎರಡನೇ ಇನ್ನಿಂಗ್ಸ್‌ನಲ್ಲಿ ಯಾವ ತಂಡ ಮುನ್ನಡೆ ಸಾಧಿಸಿ ಗೆದ್ದು ಫೈನಲ್ ಸುತ್ತಿಗೆ ಲಗ್ಗೆ ಇಡಲಿದೆ ಕಾದು ನೋಡಬೇಕಿದೆ.

ತೆಲುಗು ವಾರಿಯರ್ಸ್ ಪರ ಅಖಿಲ್ ಅಕ್ಕಿನೇನಿ 14, ಸಚಿನ್ ಜೋಷಿ 10, ಪ್ರಿನ್ಸ್ 13, ಅಶ್ವಿನ್ ಬಾಬು 36, ರಘು 4, ರೋಷನ್ 11 ಹಾಗೂ ಸಾಮ್ರಾಟ್ ಯಾವುದೇ ರನ್ ಕಲೆ ಹಾಕದೇ ಅಜೇಯರಾಗಿ ಉಳಿದುಕೊಂಡಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ಪರ ಸುನಿಲ್ ರಾವ್ ಎರಡು ವಿಕೆಟ್ ಪಡೆದರೆ, ಜಯರಾಮ್ ಕಾರ್ತಿಕ್, ಪೆಟ್ರೋಲ್ ಪ್ರಸನ್ನ, ಡಾರ್ಲಿಂಗ್ ಕೃಷ್ಣ ಹಾಗೂ ಪ್ರದೀಪ್ ಬೋಗಾಗಿ ತಲಾ ಒಂದೊಂದು ವಿಕೆಟ್ ಪಡೆದರು.

More from Filmibeat

English summary
CCL 2023: Karnataka Bulldozers lead by 4 runs against Telugu Warriors in Semifinal match. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X