ಸಿಸಿಎಲ್: ಕರ್ನಾಟಕ vs ತೆಲುಗು ವಾರಿಯರ್ಸ್ ಸೆಮಿಫೈನಲ್ ಪಂದ್ಯದಲ್ಲಿ ಯಾವ ಆಟಗಾರರು ಆಡಲಿದ್ದಾರೆ?
ಪ್ರಸ್ತುತ ನಡೆಯುತ್ತಿರುವ ಹತ್ತನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮುಕ್ತಾಯದ ಹಂತ ತಲುಪಿದೆ. ಹೌದು, ಲೀಗ್ ಹಂತದ ಎಲ್ಲಾ 16 ಪಂದ್ಯಗಳು ಮುಕ್ತಾಯಗೊಂಡಿದ್ದು, ಇಂದು ( ಮಾರ್ಚ್ 24 ) ವಿಶಾಖಪಟ್ಟಣದ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ಮೊದಲ ಸೆಮಿಫೈನಲ್ ಪಂದ್ಯ ಹಾಗೂ ಸಂಜೆ 7 ಗಂಟೆಗೆ ಎರಡನೇ ಸೆಮಿಫೈನಲ್ ಪಂದ್ಯಗಳು ಜರುಗಲಿವೆ.
ಇನ್ನು ಈ ಬಾರಿಯ ಲೀಗ್ ಹಂತದಲ್ಲಿ ಕರ್ನಾಟಕ ಬುಲ್ಡೋಜರ್ಸ್, ತೆಲುಗು ಟೈಟಾನ್ಸ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೊಸ್ ಹಾಗೂ ಪಂಜಾಬ್ ದೆ ಶೇರ್ ಸೇರಿದಂತೆ ಒಟ್ಟು ಎಂಟು ತಂಡಗಳು ಕಣಕ್ಕಿಳಿದಿದ್ದವು. ಈ ಎಲ್ಲಾ ತಂಡಗಳೂ ಸಹ ಲೀಗ್ ಹಂತದಲ್ಲಿ ತಲಾ ನಾಲ್ಕು ಪಂದ್ಯಗಳನ್ನಾಡಿದ್ದು, ಹೆಚ್ಚು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಗಿಟ್ಟಿಸಿಕೊಂಡ ತಂಡಗಳು ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿವೆ.

ಹೌದು, ನಾಲ್ಕು ಪಂದ್ಯಗಳನ್ನಾಡಿ ಎಲ್ಲಾ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವ ಕರ್ನಾಟಕ ಬುಲ್ಡೋಜರ್ಸ್, ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಭೋಜ್‌ಪುರಿ ದಬಾಂಗ್ಸ್, ನಾಲ್ಕು ಪಂದ್ಯಗಳನ್ನಾಡಿ ಮೂರು ಪಂದ್ಯಗಳನ್ನು ಗೆದ್ದು ಉಳಿದೊಂದು ಪಂದ್ಯದಲ್ಲಿ ಸೋತು ಮೂರನೇ ಸ್ಥಾನದಲ್ಲಿರುವ ಮುಂಬೈ ಹೀರೊಸ್ ಹಾಗೂ ನಾಲ್ಕು ಪಂದ್ಯಗಳನ್ನಾಡಿ ಎರಡು ಪಂದ್ಯಗಳನ್ನು ಗೆದ್ದು ಉಳಿದೆರಡು ಪಂದ್ಯಗಳಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿರುವ ತೆಲುಗು ವಾರಿಯರ್ಸ್ ಸೆಮಿ ಫೈನಲ್ ಸುತ್ತಿಗೆ ಪ್ರವೇಶವನ್ನು ಪಡೆದುಕೊಂಡಿವೆ.
ಇನ್ನುಳಿದಂತೆ ಚೆನ್ನೈ ರೈನೊಸ್, ಪಂಜಾಬ್ ದೆ ಶೇರ್, ಬೆಂಗಾಲ್ ಟೈಗರ್ಸ್ ಹಾಗೂ ಕೇರಳ ಸ್ಟ್ರೈಕರ್ಸ್ ತಂಡಗಳು ಸೆಮಿಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಸಿಕೊಳ್ಳುವಲ್ಲಿ ವಿಫಲತೆ ಹೊಂದಿ ಟೂರ್ನಿಯಿಂದ ಲೀಗ್ ಹಂತದಲ್ಲಿಯೇ ಹೊರಬಿದ್ದಿವೆ. ಇನ್ನು ಸೆಮಿಫೈನಲ್ ಹಂತದ ಎರಡೂ ಪಂದ್ಯಗಳೂ ಸಹ ಇಂದೇ ನಡೆಯಲಿದ್ದು, ಅಂಕಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಭೋಜ್‌ಪುರಿ ದಬಾಂಗ್ಸ್ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿದ್ದ ಮುಂಬೈ ಹೀರೋಸ್ ತಂಡಗಳು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಇನ್ನು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದ ತೆಲುಗು ವಾರಿಯರ್ಸ್ ತಂಡಗಳು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಾಡಲಿವೆ. ಈ ಎರಡೂ ಪಂದ್ಯಗಳಲ್ಲಿ ಗೆಲ್ಲಲಿರುವ ತಂಡಗಳು ನೇರವಾಗಿ ಫೈನಲ್ ಸುತ್ತಿಗೆ ಎಂಟ್ರಿ ಕೊಡಲಿದ್ದು, ಸೋಲುವ ತಂಡಗಳು ಟೂರ್ನಿಯಿಂದ ಹೊರಬೀಳಲಿವೆ. ಇನ್ನು ಟೂರ್ನಿಯಲ್ಲಿನ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ತೆಲುಗು ವಾರಿಯರ್ಸ್ ವಿರುದ್ಧ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದು, ಪಂದ್ಯದ ಕುರಿತು ಚರ್ಚೆಗಳು ಶುರುವಾಗಿವೆ.

ಈ ಹೈವೋಲ್ಟೇಜ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳ ಪರ ಯಾವ ಆಟಗಾರರು ಕಣಕ್ಕಿಳಿಯಬಹುದು ಎಂಬ ಊಹೆಗಳು ಜೋರಾಗಿದ್ದು, ಪಂದ್ಯದಲ್ಲಿ ಎರಡೂ ತಂಡಗಳ ಪರ ಕಣಕ್ಕಿಳಿಯಬಹುದಾದ ಆಟಗಾರರ ಸಂಭಾವ್ಯ ಪಟ್ಟಿ ಈ ಕೆಳಕಂಡಂತಿದೆ..
ಕರ್ನಾಟಕ ಬುಲ್ಡೋಜರ್ಸ್ : ಕೃಷ್ಣ, ಪ್ರದೀಪ್ ಬೋಗಾದಿ (ನಾಯಕ), ರಾಜೀವ್ ಹನು, ಕಿಚ್ಚ ಸುದೀಪ್ (ವಿಕೆಟ್ ಕೀಪರ್), ಗಣೇಶ್, ಸುನೀಲ್ ರಾವ್, ಜಯರಾಮ್ ಕಾರ್ತಿಕ್, ಕರಣ್ ಅರ್ಯಾನ್, ಚಂದನ್ ಕುಮಾರ್, ನಿರೂಪ್ ಭಂಡಾರಿ, ಅರುಣ್ ಬಚ್ಚನ್.
ತೆಲುಗು ವಾರಿಯರ್ಸ್: ಅಕಿಲ್ ಅಕ್ಕಿನೇನಿ (ನಾಯಕ), ಪ್ರಿನ್ಸ್, ಸುಧೀರ್ ಬಾಬು, ಅಶ್ವಿನ್ ಬಾಬು, ರೋಷನ್, ಥಮನ್, ನಿಖಿಲ್, ಆರ್ ರಘು, ಸಮರ್ಥ್, ಸಚಿನ್ ಜೋಷಿ, ಅಯ್ಯಪ್ಪ ಶರ್ಮ (ವಿಕೆಟ್ ಕೀಪರ್).
ನೇರಪ್ರಸಾರದ ಮಾಹಿತಿ: ಸಿಸಿಎಲ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಸಿಸಿಎಲ್ ಯೂಟ್ಯೂಬ್ ಚಾನೆಲ್‌ನಲ್ಲಿ ಉಚಿತವಾಗಿ ನೋಡಬಹುದಾಗಿದೆ. ಕನ್ನಡದಲ್ಲಿ ಪಂದ್ಯದ ನೇರಪ್ರಸಾರವನ್ನು ಜೀ ಪಿಚ್ಚರ್ ವಾಹಿನಿಯಲ್ಲಿ ನೋಡಬಹುದು. ಜೀ5 ಆಪ್ ಚಂದಾದಾರರು ಸಹ ಮೊಬೈಲ್ ಆಪ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ. ಅಲ್ಲದೇ ಸಿಸಿಎಲ್ ವೆಬ್ ತಾಣ ಹಾಗೂ ಟ್ವಿಟರ್ ಖಾತೆಗಳಲ್ಲಿ ಲೈವ್ ಸ್ಕೋರ್ ಅಪ್‌ಡೇಟ್ ಇರಲಿದೆ.


Click it and Unblock the Notifications











