CCL 2023: ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕರ್ನಾಟಕಕ್ಕೆ ಎದುರಾಳಿ ಯಾರು? ಸೆಮಿಫೈನಲ್ ಯಾವಾಗ?

ಪ್ರಸ್ತುತ ಹತ್ತನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಮೆಂಟ್ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್, ತೆಲುಗು ಟೈಟಾನ್ಸ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೊಸ್ ಹಾಗೂ ಪಂಜಾಬ್ ದೆ ಶೇರ್ ಸೇರಿದಂತೆ ಒಟ್ಟು ಎಂಟು ತಂಡಗಳು ಕಣಕ್ಕಿಳಿದಿವೆ.

ಟೂರ್ನಿಯಲ್ಲಿ ಲೀಗ್, ಸೆಮಿಫೈನಲ್ ಹಾಗೂ ಫೈನಲ್ ಹೀಗೆ ಮೂರು ಹಂತಗಳಲ್ಲಿ ಪಂದ್ಯಗಳು ಆಯೋಜನೆಗೊಂಡಿದ್ದು, ಲೀಗ್ ಹಂತದಲ್ಲಿ ಒಟ್ಟು 16 ಪಂದ್ಯಗಳು ಜರುಗಲಿವೆ. ಎಂಟು ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಈ ಲೀಗ್ ಹಂತದಲ್ಲಿ ಆಡುತ್ತಿವೆ. ವಾರಂತ್ಯದ ಶನಿವಾರ ಹಾಗೂ ಭಾನುವಾರಗಳಂದು ಈ ಟೂರ್ನಿಯ ಪಂದ್ಯಗಳು ಜರುಗುತ್ತಿದ್ದು, ಈ ವಾರದ ಶನಿವಾರ ಹಾಗೂ ಭಾನುವಾರದಂದು ನಡೆಯಲಿರುವ ನಾಲ್ಕು ಪಂದ್ಯಗಳ ಮೂಲಕ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿವೆ.

CCL 2023: League stage last matches and semifinal matches date and timings

ಕಳೆದ ವಾರಾಂತ್ಯದವರೆಗೂ ಎಲ್ಲಾ ತಂಡಗಳು ಲೀಗ್ ಹಂತದಲ್ಲಿ ತಲಾ ಮೂರು ಪಂದ್ಯಗಳನ್ನು ಆಡಿದ್ದು, ಈ ವಾರಾಂತ್ಯದಲ್ಲಿ ತಮ್ಮ ಪಾಲಿನ ಕೊನೆಯ ಪಂದ್ಯಗಳನ್ನು ಆಡಲಿವೆ. ಈ ಪಂದ್ಯಗಳ ಮೂಲಕ ಯಾವ ತಂಡಗಳು ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಡಲಿವೆ ಎಂಬುದು ತಿಳಿದು ಬರಲಿದೆ. ಹೀಗಾಗಿ ಈ ಪಂದ್ಯಗಳು ನೋಡುಗರಲ್ಲಿ ಕುತೂಹಲ ಮೂಡಿಸಿವೆ.

ಹೀಗೆ ಸಿನಿ ರಸಿಕರನ್ನು ತನ್ನತ್ತ ಸೆಳೆದಿರುವ ಈ ಪಂದ್ಯಗಳಲ್ಲಿ ಯಾವ ಯಾವ ತಂಡಗಳು ಮುಖಾಮುಖಿಯಾಗಲಿವೆ ಹಾಗೂ ಸೆಮಿ ಫೈನಲ್ ಪಂದ್ಯಗಳು ಯಾವ ದಿನಾಂಕದಂದು ನಡೆಯಲಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಮಾರ್ಚ್ 11ರ ಶನಿವಾರದಂದು ಮಧ್ಯಾಹ್ನ 2.30ಕ್ಕೆ ಕೇರಳ ಸ್ಟ್ರೈಕರ್ಸ್ ಹಾಗೂ ಭೋಜ್‌ಪುರಿ ದಬಾಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದೇ ದಿನ ನಡೆಯಲಿರುವ ಎರಡನೇ ಪಂದ್ಯದಲ್ಲಿ ಸಂಜೆ 7ಕ್ಕೆ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಪಂಜಾಬ್ ದೆ ಶೇರ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

CCL 2023: League stage last matches and semifinal matches date and timings

ಮಾರ್ಚ್ 12ರಂದು ನಡೆಯಲಿರುವ ಮಧ್ಯಾಹ್ನ 2.30ರ ಪಂದ್ಯದಲ್ಲಿ ಚೆನ್ನೈ ರೈನೋಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ ಹಾಗೂ ಅದೇ ದಿನ ನಡೆಯಲಿರುವ ಎರಡನೇ ಪಂದ್ಯದಲ್ಲಿ ಸಂಜೆ 7ಕ್ಕೆ ಬೆಂಗಾಲ್ ಟೈಗರ್ಸ್ ಹಾಗೂ ಮುಂಬೈ ಹೀರೊಸ್ ತಂಡಗಳು ಮುಖಾಮುಖಿಯಾಗಲಿವೆ.

ಇನ್ನು ಸೆಮಿಫೈನಲ್ ಹಂತದಲ್ಲಿ ಎರಡು ಪಂದ್ಯಗಳು ಜರುಗಲಿದ್ದು, ಮೊದಲನೇ ಸೆಮಿಫೈನಲ್ ಪಂದ್ಯ ಮಾರ್ಚ್ 18ರ ಶನಿವಾರದಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಈ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡ ತಂಡಗಳು ಮುಖಾಮುಖಿಯಾಗಲಿವೆ ಹಾಗೂ ಇದೇ ದಿನ ಸಂಜೆ 7 ಗಂಟೆಗೆ ಎರಡನೇ ಸೆಮಿ ಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಳ್ಳಲಿರುವ ತಂಡಗಳು ಮುಖಾಮುಖಿಯಾಗಲಿವೆ. ಫೈನಲ್ ಪಂದ್ಯ ಮಾರ್ಚ್ 19ರ ಭಾನುವಾರ ಸಂಜೆ ಏಳು ಗಂಟೆಗೆ ಹೈದರಾಬಾದ್‌ನಲ್ಲಿ ನಡೆಯಲಿದೆ.

ಅಂಕಪಟ್ಟಿ ಹೀಗಿದೆ: 1. ಇಲ್ಲಿಯವರೆಗೂ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದು ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದು ಸೋಲಿಲ್ಲದ ಸರದಾರನಾಗಿ ಮಿಂಚಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿದೆ.

2. ಭೋಜ್‌ಪುರಿ ದಬಾಂಗ್ಸ್ ತಂಡ ಸಹ ಮೂರು ಪಂದ್ಯಗಳನ್ನಾಡಿ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದು ಆರು ಅಂಕಗಳನ್ನು ಪಡೆದುಕೊಂಡಿದ್ದು, ಕರ್ನಾಟಕ ಬುಲ್ಡೋಜರ್ಸ್‌ಗಿಂತ ಕಡಿಮೆ ನೆಟ್ ರನ್ ರೇಟ್ ಇರುವ ಕಾರಣ ಎರಡನೇ ಸ್ಥಾನದಲ್ಲಿದೆ.

3. ಮೂರು ಪಂದ್ಯಗಳನ್ನಾಡಿ ಎರಡರಲ್ಲಿ ಗೆದ್ದು ಉಳಿದೊಂದು ಪಂದ್ಯದಲ್ಲಿ ಸೋತಿರುವ ತೆಲುಗು ವಾರಿಯರ್ಸ್ ನಾಲ್ಕು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

4. ಹಾಲಿ ಚಾಂಪಿಯನ್ಸ್ ಮುಂಬೈ ಹೀರೊಸ್ ತಂಡ ಸಹ ಮೂರು ಪಂದ್ಯಗಳನ್ನಾಡಿ ಎರಡರಲ್ಲಿ ಗೆದ್ದು ಉಳಿದೊಂದು ಪಂದ್ಯದಲ್ಲಿ ಸೋತು ನಾಲ್ಕು ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನದಲ್ಲಿದೆ.

5. ಮೂರು ಪಂದ್ಯಗಳನ್ನಾಡಿ ಕೇವಲ ಒಂದು ಪಂದ್ಯದಲ್ಲಿ ಗೆದ್ದು ಉಳಿದೆರಡು ಪಂದ್ಯಗಳಲ್ಲಿ ಸೋತಿರುವ ಚೆನ್ನೈ ರೈನೊಸ್ ಎರಡು ಅಂಕಗಳನ್ನು ಪಡೆದುಕೊಂಡು ಐದನೇ ಸ್ಥಾನದಲ್ಲಿದೆ.

6. ಪಂಜಾಬ್ ದೆ ಶೇರ್ ತಂಡ ಸಹ ಚೆನ್ನೈ ರೈನೊಸ್ ತಂಡದ ಹಾಗೆ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು ಎರಡರಲ್ಲಿ ಸೋತು ಎರಡು ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಆರನೇ ಸ್ಥಾನದಲ್ಲಿದೆ.

7. ಬೆಂಗಾಲ್ ಟೈಗರ್ಸ್ ತಂಡ ಮೂರು ಪಂದ್ಯಗಳನ್ನಾಡಿದ್ದು, ಯಾವುದೇ ಪಂದ್ಯದಲ್ಲಿಯೂ ಗೆಲ್ಲದೇ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

8. ಕೇರಳ ಸ್ಟ್ರೈಕರ್ಸ್ ತಂಡವೂ ಸಹ ಮೂರು ಪಂದ್ಯಗಳನ್ನಾಡಿ ಯಾವ ಪಂದ್ಯದಲ್ಲಿಯೂ ಗೆಲುವು ಕಾಣದೇ ಅಂತಿಮ ಸ್ಥಾನದಲ್ಲಿದೆ.

More from Filmibeat

English summary
CCL 2023: League stage last matches and semifinal matches date and timings. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X