CCL 2023 Points Table : 50% ಲೀಗ್ ಪಂದ್ಯ ಮುಕ್ತಾಯ; ಆಡಿದ ಎಲ್ಲಾ ಪಂದ್ಯ ಗೆದ್ದ ತಂಡಗಳಿವು; ಎಲ್ಲಾ ಪಂದ್ಯ ಸೋತವರಿವರು!
ಪ್ರಸ್ತುತ ನಡೆಯುತ್ತಿರುವ ಸಿನಿ ರಸಿಕರು ಹಾಗೂ ಕ್ರಿಕೆಟ್ ಪ್ರಿಯರ ನೆಚ್ಚಿನ ಕ್ರಿಕೆಟ್ ಟೂರ್ನಮೆಂಟ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ( ಸಿಸಿಎಲ್ ) ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಹತ್ತನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಇದಾಗಿದ್ದು, ಈ ಬಾರಿ ಟ್ರೋಫಿಗಾಗಿ ಒಟ್ಟು ಎಂಟು ತಂಡಗಳು ಕಣಕ್ಕೆ ಇಳಿದಿವೆ. ಚಂದನವನದ ಪರ ಕರ್ನಾಟಕ ಬುಲ್ಡೋಜರ್ಸ್ ಪ್ರದೀಪ್ ನಾಯಕತ್ವದಡಿಯಲ್ಲಿ ಕಣಕ್ಕಿಳಿದಿದೆ.
ಉಳಿದಂತೆ ತೆಲುಗು ಟೈಟಾನ್ಸ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೊಸ್ ಹಾಗೂ ಪಂಜಾಬ್ ದೆ ಶೇರ್ ತಂಡಗಳು ತಮ್ಮ ತಮ್ಮ ಚಿತ್ರರಂಗಗಳನ್ನು ಪ್ರತಿನಿಧಿಸಿವೆ. ಫೆಬ್ರವರಿ 18ರಂದು ರಾಯ್‌ಪುರದಲ್ಲಿ ನಡೆದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಸ್ಟ್ರೈಕರ್ಸ್ ತಂಡಗಳ ನಡುವಿನ ಲೀಗ್ ಹಂತದ ಪಂದ್ಯದ ಮೂಲಕ ಆರಂಭವಾದ ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಒಟ್ಟು 16 ಪಂದ್ಯಗಳು ಜರುಗಲಿವೆ.

ಫೆಬ್ರವರಿ 18ರಂದು ಎರಡು ಪಂದ್ಯಗಳು, ಫೆಬ್ರವರಿ 19ರಂದು ಎರಡು ಪಂದ್ಯಗಳು, ಫೆಬ್ರವರಿ 25ರಂದು ಎರಡು ಪಂದ್ಯಗಳು ಹಾಗೂ ಫೆಬ್ರವರಿ 26ರಂದು ಎರಡು ಪಂದ್ಯಗಳು ನಡೆದಿದ್ದು ಇಲ್ಲಿಯವರೆಗೂ ಒಟ್ಟು ಎಂಟು ಪಂದ್ಯಗಳು ಮುಕ್ತಾಯಗೊಂಡಿವೆ. ಇನ್ನು ಉಳಿದ ಪಂದ್ಯಗಳು ಮಾರ್ಚ್ 4ರಂದು ಆರಂಭಗೊಳ್ಳಲಿದ್ದು, ಟೂರ್ನಿಯ ಲೀಗ್ ಹಂತ ಶೇ.50ರಷ್ಟು ಮುಕ್ತಾಯವಾದ ಬಳಿಕ ಅಂಕಪಟ್ಟಿ ಈ ಕೆಳಕಂಡಂತಿದೆ.
1. ಎರಡು ಪಂದ್ಯಗಳನ್ನಾಡಿ ಎರಡೂ ಪಂದ್ಯಗಳಲ್ಲಿಯೂ ಗೆದ್ದಿರುವ ತೆಲುಗು ವಾರಿಯರ್ಸ್ 4 ಅಂಕಗಳ ಜತೆಗೆ ಹೆಚ್ಚಿನ ನೆಟ್ ರನ್ ರೇಟ್ ಹೊಂದಿರುವ ಕಾರಣ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

2. ಇನ್ನು ನಮ್ಮ ಕರ್ನಾಟಕ ಬುಲ್ಡೋಜರ್ಸ್ ಸಹ ಎರಡು ಪಂದ್ಯಗಳನ್ನಾಡಿ ಆ ಎರಡೂ ಪಂದ್ಯಗಳನ್ನು ಗೆದ್ದಿದ್ದು 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
3. ಭೋಜ್‌ಪುರಿ ದಬಾಂಗ್ಸ್ ತಂಡ ಸಹ ಎರಡು ಪಂದ್ಯಗಳನ್ನಾಡಿ ಎರಡೂ ಪಂದ್ಯಗಳಲ್ಲಿಯೂ ಗೆದ್ದು 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
4. ಎರಡು ಪಂದ್ಯಗಳನ್ನಾಡಿ ಒಂದು ಪಂದ್ಯದಲ್ಲಿ ಗೆದ್ದು ಉಳಿದೊಂದು ಪಂದ್ಯದಲ್ಲಿ ಸೋತಿರುವ ಚೆನ್ನೈ ರೈನೊಸ್ ನಾಲ್ಕನೇ ಸ್ಥಾನದಲ್ಲಿದೆ.
5. ಎರಡು ಪಂದ್ಯಗಳನ್ನಾಡಿ ಒಂದು ಪಂದ್ಯದಲ್ಲಿ ಗೆದ್ದು ಉಳಿದೊಂದು ಪಂದ್ಯದಲ್ಲಿ ಸೋತಿರುವ ಮುಂಬೈ ಹೀರೊಸ್ ಐದನೇ ಸ್ಥಾನದಲ್ಲಿದೆ.
6. ಎರಡು ಪಂದ್ಯಗಳನ್ನಾಡಿ ಎರಡೂ ಪಂದ್ಯಗಳಲ್ಲೂ ಸೋತಿರುವ ಪಂಜಾಬ್ ದೆ ಶೇರ್ ತಂಡ ಆರನೇ ಸ್ಥಾನದಲ್ಲಿದೆ.
7. ಬೆಂಗಾಲ್ ಟೈಗರ್ಸ್ ತಂಡ ಸಹ ಎರಡು ಪಂದ್ಯಗಳನ್ನಾಡಿ ಎರಡರಲ್ಲಿಯೂ ಸೋತು ಏಳನೇ ಸ್ಥಾನದಲ್ಲಿದೆ.
8. ಕೇರಳ ಸ್ಟ್ರೈಕರ್ಸ್ ಕೂಡ ಎರಡು ಪಂದ್ಯಗಳನ್ನಾಡಿ ಎರಡೂ ಪಂದ್ಯಗಳಲ್ಲಿಯೂ ಸೋತು ಎಂಟನೇ ಸ್ಥಾನದಲ್ಲಿದೆ.
ಸದ್ಯ ಲೀಗ್ ಹಂತದ ಮೊದಲ ಎಂಟು ಪಂದ್ಯಗಳು ಮುಗಿದಿದ್ದು, ಉಳಿದ ಎಂಟು ಪಂದ್ಯಗಳು ಯಾವ ದಿನದಂದು ಯಾವ ತಂಡಗಳ ನಡುವೆ ಯಾವ ಸ್ಥಳದಲ್ಲಿ ನಡೆಯಲಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
* ಮಾರ್ಚ್ 4ರಂದು ಪಂಜಾಬ್ ದೆ ಶೇರ್ ಹಾಗೂ ತೆಲುಗು ವಾರಿಯರ್ಸ್ ತಂಡಗಳ ನಡುವಿನ ಪಂದ್ಯ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
* ಚೆನ್ನೈ ರೈನೋಸ್ ಹಾಗೂ ಕರ್ನಾಟಕ ಬುಲ್ಡೋಜರ್ಸ್ ತಂಡಗಳ ನಡುವಿನ ಪಂದ್ಯ ಮಾರ್ಚ್ 4ರಂದು ಸಂಜೆ 7ಕ್ಕೆ ನಡೆಯಲಿದೆ.
* ಮಾರ್ಚ್ 5ರಂದು ಭೋಜ್‌ಪುರಿ ದಬಾಂಗ್ಸ್ ಹಾಗೂ ಬೆಂಗಾಲ್ ಟೈಗರ್ಸ್ ತಂಡಗಳ ನಡುವಿನ ಪಂದ್ಯ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
* ಮಾರ್ಚ್ 5ರಂದು ಕೇರಳ ಸ್ಟ್ರೈಕರ್ಸ್ ಹಾಗೂ ಮುಂಬೈ ಹೀರೊಸ್ ತಂಡಗಳ ನಡುವಿನ ಪಂದ್ಯ ಸಂಜೆ 7ಕ್ಕೆ ನಡೆಯಲಿದೆ.
* ಮಾರ್ಚ್ 11ರಂದು ಕೇರಳ ಸ್ಟ್ರೈಕರ್ಸ್ ಹಾಗೂ ಭೋಜ್‌ಪುರಿ ದಬಾಂಗ್ಸ್ ತಂಡಗಳ ನಡುವಿನ ಪಂದ್ಯ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
* ಮಾರ್ಚ್ 11ರಂದು ಕರ್ನಾಟಕ ಬುಲ್ಡೋಜರ್ಸ್ ಹಾಗೂ ಪಂಜಾಬ್ ದೆ ಶೇರ್ ತಂಡಗಳ ನಡುವಿನ ಪಂದ್ಯ ಸಂಜೆ 7ಕ್ಕೆ ನಡೆಯಲಿದೆ.
* ಮಾರ್ಚ್ 12ರಂದು ತೆಲುಗು ಟೈಟಾನ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳ ನಡುವಿನ ಪಂದ್ಯ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
* ಮಾರ್ಚ್ 12ರಂದು ಮುಂಬೈ ಹೀರೊಸ್ ಹಾಗೂ ಬೆಂಗಾಲ್ ಟೈಗರ್ಸ್ ತಂಡಗಳ ನಡುವಿನ ಪಂದ್ಯ ಸಂಜೆ 7ಕ್ಕೆ ನಡೆಯಲಿದೆ.
ಮಾರ್ಚ್ 18ರಂದು ಎರಡು ಸೆಮಿ ಫೈನಲ್ ಪಂದ್ಯಗಳು ಜರುಗಲಿದ್ದು, ಮಾರ್ಚ್ 19ರಂದು ಫೈನಲ್ ಪಂದ್ಯ ನಡೆಯಲಿದೆ. ಅಂಕಪಟ್ಟಿಯಲ್ಲಿ ಲೀಗ್ ಹಂತದ ಪಂದ್ಯಗಳೆಲ್ಲಾ ಮುಗಿದ ನಂತರ ಯಾವ ತಂಡಗಳು ಟಾಪ್ 4ನಲ್ಲಿ ಇರಲಿವೆಯೋ ಆ ತಂಡಗಳು ಸೆಮಿಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.


Click it and Unblock the Notifications











