CCL 2023 Points Table : ಲೀಗ್‌ನ 10 ಪಂದ್ಯಗಳು ಮುಗಿದ ಬಳಿಕ ಅಂಕಪಟ್ಟಿ ಹೇಗಿದೆ? ಸೆಮೀಸ್ ಪ್ರವೇಶಿಸುವ ತಂಡಗಳಾವುವು?
ಪ್ರಸ್ತುತ ನಡೆಯುತ್ತಿರುವ 10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯ ಲೀಗ್ ಹಂತ ಮುಕ್ತಾಯದ ಸನಿಹಕ್ಕೆ ಬಂದಿವೆ. ನಿನ್ನೆ ( ಮಾರ್ಚ್ 4 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ತಂಡಗಳ ನಡುವಿನ ಪಂದ್ಯದ ಮೂಲಕ ಲೀಗ್ ಹಂತದ ಹತ್ತು ಪಂದ್ಯಗಳು ಮುಕ್ತಾಯಗೊಂಡಿವೆ.
ಇನ್ನು ಈ ಬಾರಿಯ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್, ತೆಲುಗು ಟೈಟಾನ್ಸ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೊಸ್ ಹಾಗೂ ಪಂಜಾಬ್ ದೆ ಶೇರ್ ಸೇರಿದಂತೆ ಒಟ್ಟು ಎಂಟು ತಂಡಗಳು ಕಣಕ್ಕಿಳಿದಿದ್ದು, ಲೀಗ್ ಹಂತ ಮುಕ್ತಾಯದ ಹಂತಕ್ಕೆ ಸಮೀಪಿಸುತ್ತಿದ್ದಂತೆ ಸೆಮಿಫೈನಲ್ ಎಂಟ್ರಿಗಾಗಿ ಪೈಪೋಟಿ ಹಾಗೂ ಲೆಕ್ಕಾಚಾರಗಳು ಏರ್ಪಟ್ಟಿವೆ.

ಟೂರ್ನಿಯ ಲೀಗ್ ಹಂತದ ಹತ್ತನೇ ಪಂದ್ಯದಲ್ಲಿ ಚೆನ್ನೈ ರೈನೋಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ 6 ವಿಕೆಟ್‌ಗಳ ಅಮೋಘ ಜಯವನ್ನು ಸಾಧಿಸುವುದರ ಮೂಲಕ ಸತತ ಮೂರನೇ ಗೆಲುವನ್ನು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿಕೆ ಕಂಡಿದೆ ಹಾಗೂ ತನ್ನ ಸೆಮಿಫೈನಲ್ ಪ್ರವೇಶದ ಹಾದಿಯನ್ನು ಸರಳಪಡಿಸಿಕೊಂಡಿದೆ. ಹಾಗಿದ್ದರೆ ಈ ಪಂದ್ಯ ಮುಗಿದ ಬಳಿಕ ಅಂಕಪಟ್ಟಿ ಹೇಗಿದೆ, ಉಳಿದ ತಂಡಗಳ ಸೆಮಿಫೈನಲ್ ಹಾದಿ ಹೇಗಿದೆ ಹಾಗೂ ಎಷ್ಟು ಪಂದ್ಯಗಳನ್ನು ಗೆದ್ದರೆ ಸೆಮಿಫೈನಲ್ ಪ್ರವೇಶಿಸಬಹುದು ಎಂಬ ಮಾಹಿತಿ ಈ ಕೆಳಕಂಡಂತಿದೆ..
ಮಾರ್ಚ್ 4ರವರೆಗಿನ ಲೀಗ್ ಹಂತದ ಪಂದ್ಯಗಳು ಮುಗಿದ ಬಳಿಕ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಅಂಕಪಟ್ಟಿ ಈ ಕೆಳಕಂಡಂತಿದೆ..
1. ಮೂರು ಪಂದ್ಯಗಳಲ್ಲಿ ಕಣಕ್ಕಿಳಿದು ಮೂರೂ ಪಂದ್ಯಗಳಲ್ಲಿಯೂ ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
2. 2 ಪಂದ್ಯಗಳನ್ನಾಡಿ ಎರಡರಲ್ಲಿಯೂ ಗೆದ್ದಿರುವ ಭೋಜ್‌ಪುರಿ ದಬಾಂಗ್ಸ್ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

3. 3 ಪಂದ್ಯಗಳನ್ನಾಡಿ ಎರಡು ಪಂದ್ಯಗಳಲ್ಲಿ ಗೆದ್ದು ಉಳಿದೊಂದು ಪಂದ್ಯದಲ್ಲಿ ಸೋತಿರುವ ತೆಲುಗು ವಾರಿಯರ್ಸ್ 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
4. 3 ಪಂದ್ಯಗಳನ್ನಾಡಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಗೆದ್ದು ಉಳಿದ ಎರಡು ಪಂದ್ಯಗಳಲ್ಲಿ ಸೋತಿರುವ ಚೆನ್ನೈ ರೈನೋಸ್ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
5. 3 ಪಂದ್ಯಗಳನ್ನಾಡಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಗೆದ್ದು ಉಳಿದ ಎರಡು ಪಂದ್ಯಗಳಲ್ಲಿ ಸೋತಿರುವ ಪಂಜಾಬ್ ದೆ ಶೇರ್ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
6. 2 ಪಂದ್ಯಗಳನ್ನಾಡಿ ಒಂದರಲ್ಲಿ ಗೆದ್ದು ಉಳಿದ ಪಂದ್ಯದಲ್ಲಿ ಸೋತಿರುವ ಮುಂಬೈ ಹೀರೋಸ್ ಎರಡು ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.
7. 2 ಪಂದ್ಯಗಳನ್ನಾಡಿ ಯಾವುದೇ ಪಂದ್ಯದಲ್ಲಿಯೂ ಗೆಲ್ಲದ ಬೆಂಗಾಲ್ ಟೈಗರ್ಸ್ ಏಳನೇ ಸ್ಥಾನದಲ್ಲಿದೆ.
8. 2 ಪಂದ್ಯಗಳನ್ನಾಡಿರುವ ಕೇರಳ ಸ್ಟ್ರೈಕರ್ಸ್ ಯಾವುದೇ ಪಂದ್ಯದಲ್ಲಿಯೂ ಗೆಲ್ಲದೇ ಅಂತಿಮ ಸ್ಥಾನ ಪಡೆದುಕೊಂಡಿದೆ.
ಕರ್ನಾಟಕ ಬುಲ್ಡೋಜರ್ಸ್ ಆರು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಸೆಮಿಫೈನಲ್ ಹಾಸಿ ಸುಗಮವಾಗಿದೆ. ಉಳಿದೊಂದು ಪಂದ್ಯವನ್ನು ಗೆದ್ದರೂ, ಸೋತರೂ ಕರ್ನಾಟಕ ಬುಲ್ಡೋಜರ್ಸ್ ಸೆಮಿಫೈನಲ್ ಪ್ರವೇಶಿಸಲಿದೆ. ಇನ್ನುಳಿದಂತೆ ಎರಡು ಪಂದ್ಯಗಳನ್ನಾಡಿ ಎರಡರಲ್ಲಿಯೂ ಗೆದ್ದಿರುವ ಭೋಜ್‌ಪುರಿ ದಬಾಂಗ್ಸ್ ಇನ್ನೊಂದು ಪಂದ್ಯ ಗೆದ್ದರೂ ಸುಲಭವಾಗಿ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ. ತೆಲುಗು ವಾರಿಯರ್ಸ್ ತಂಡ ಮೂರರಲ್ಲಿ ಎರಡು ಪಂದ್ಯಗಳಲ್ಲಿ ಗೆದ್ದಿದ್ದು ಉಳಿದೊಂದು ಪಂದ್ಯ ಗೆದ್ದರೆ ಸೆಮೀಸ್‌ಗೆ ಬರಲಿದೆ ಹಾಗೂ ಎರಡೇ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಮುಂಬೈ ಹೀರೋಸ್ ತಂಡಕ್ಕೂ ಸಹ ಸೆಮಿಸ್ ಅವಕಾಶವಿದೆ.
ಇನ್ನುಳಿದಂತೆ ಚೆನ್ನೈ ರೈನೋಸ್ ಉಳಿದ ಒಂದು ಪಂದ್ಯ ಗೆದ್ದರೂ ಬೇರೆ ತಂಡಗಳ ನೆಟ್ ರನ್ ರೇಟ್ ಮೇಲೆ ಸೆಮಿಫೈನಲ್ ಪ್ರವೇಶಿಸಬೇಕಾಗುತ್ತದೆ ಹಾಗೂ ಪಂಜಾಬ್ ದೆ ಶೇರ್, ಬೆಂಗಾಲ್ ಟೈಗರ್ಸ್ ಹಾಗೂ ಕೇರಳ ಸ್ಟ್ರೈಕರ್ಸ್ ಬಹುತೇಕ ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದೇ ಹೇಳಬಹುದು.


Click it and Unblock the Notifications











