WPL ಕಪ್ ಗೆದ್ದ ಆರ್‌ಸಿಬಿ ಗರ್ಲ್ಸ್; CCLನಲ್ಲಿ ಸೋತ ಕರ್ನಾಟಕ ಬುಲ್ಡೋಜರ್ಸ್

ಮಹಿಳಾ ಪ್ರೀಮಿಯರ್ 2024ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಟ್ರೋಫಿ ಎತ್ತಿ ಹಿಡಿದಿದೆ. 16 ವರ್ಷಗಳಿಂದ ಆರ್‌ಸಿಬಿ ಪುರುಷರ ತಂಡ ಕಪ್ ಗೆದ್ದಿಲ್ಲ ಎನ್ನುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆದರೆ ಆರ್‌ಸಿಬಿ ಗರ್ಲ್ಸ್ ಕಪ್ ಗೆದ್ದು ಸಂಭ್ರಮಿಸಿದ್ದಾರೆ. ಇತ್ತ ಸಿಸಿಎಲ್‌ ಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಸೋತಿರುವುದು ಬೇಸರ ಮೂಡಿಸಿದೆ.

ಫೆಬ್ರವರಿ 23ರಿಂದ ಶುರುವಾಗಿದ್ದ ಸಿಸಿಎಲ್‌ 10ನೇ ಸೀಸನ್‌ಗೆ ಈಗ ತೆರೆ ಬಿದ್ದಿದೆ. ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ಎದುರು ಕರ್ನಾಟಕ ಬುಲ್ಡೋಜರ್ಸ್ ತಂಡ ಸೋಲುಂಡಿದೆ. ಇದೇ ತಂಡದ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಸ್ಯಾಂಡಲ್‌ವುಡ್ ತಾರೆಯರ ತಂಡ ಫೈನಲ್ ಪ್ರವೇಶಿಸಿತ್ತು. ನಾಲ್ಕು ಇನ್ನಿಂಗ್ಸ್‌ಗಳಾಗಿ ನಡೆದ ಪಂದ್ಯದಲ್ಲಿ 12 ರನ್‌ಗಳಿಂದ ಬೆಂಗಾಲ್ ಟೈಗರ್ಸ್ ತಂಡ ಗೆಲುವು ಸಾಧಿಸಿದೆ.

CCL 2024 Bengal tigers beat karnataka bulldozers by 13 runs to lift title

ಟೂರ್ನಿ ಉದ್ದಕ್ಕೂ ಕರ್ನಾಟಕ ಬುಲ್ಡೋಜರ್ಸ್ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಫೈನಲ್ ಪಂದ್ಯದಲ್ಲಿ ಕೂಡ ಪ್ರಬಲ ಹೋರಾಟ ನಡೆಸಿ ನಟ ಕಿಚ್ಚ ಸುದೀಪ್ ನೇತೃತ್ವದ ಸೋಲುಂಡಿದೆ. ಆದರೂ ಆಟಗಾರರು ತಮ್ಮ ಆಟದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ವಿಶೇಷ ಅಂದ್ರೆ ಸರಣಿಯಲ್ಲಿ ಎರಡು ಬಾರಿ ಬೆಂಗಾಲ್ ಟೈಗರ್ಸ್ ಎದುರು ಕರ್ನಾಟಕ ಬುಲ್ಡೋಜರ್ಸ್ ತಂಡ ಗೆಲುವಿನ ನಗೆ ಬೀರಿತ್ತು.

ಬೆಂಗಾಲ್ ಟೈಗರ್ಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 10 ಓವರ್‌ಗಳಲ್ಲಿ 118 ರನ್ ಗಳಿಸಿತ್ತು. 29 ಎಸೆತಗಳಲ್ಲಿ ಅಜೇಯ 57 ರನ್ ಸಿಡಿಸಿ ಜಾಮಿ ತಂಡಕ್ಕೆ ನೆರವಾಗಿದ್ದರು. ಬೌಲಿಂಗ್‌ನಲ್ಲಿ ಜೆಕೆ 7 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಈ ಮೊತ್ತವನ್ನು ಬೆನ್ನತ್ತಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ 7 ವಿಕೆಟ್ ಕಳೆದುಕೊಂಡು 10 ಓವರ್‌ಗಳಲ್ಲಿ 86 ರನ್‌ಗಳನ್ನು ಪೇರಿಸಿತು. ತಂಡದ ಪರ ಅತ್ಯಧಿಕ ಪ್ರದೀಪ್ 23 ಎಸೆತಗಳಲ್ಲಿ 32 ರನ್ ಗಳಿಸಿದರು. 16 ರನ್ ನೀಡಿ 3 ವಿಕೆಟ್ ಕಬಳಿಸಿ ಆನಂದ ಕರ್ನಾಟಕ ಬುಲ್ಡೋಜರ್ಸ್ ತಂಡದ ಓಟಕ್ಕೆ ಬ್ರೇಕ್ ಹಾಕಿದ್ದರು.

32 ರನ್‌ಗಳ ಮುನ್ನಡೆಯೊಂದಿಗೆ ಬೆಂಗಾಲ್ ಟೈಗರ್ಸ್ ಮತ್ತೆ ಬ್ಯಾಟಿಂಗ್ ಆರಂಭಿಸಿತು. 2ನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಜಾಮಿ ತಂಡಕ್ಕೆ ನೆರವಾದರು. 18 ಎಸೆತಗಳಲ್ಲಿ 39 ರನ್‌ ಗಳಿಸಿದರು. ಒಟ್ಟಾರೆ ತಂಡ 10 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿತು. ಕೊನೆ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಒಟ್ಟು 137 ರನ್ ಗುರಿ ನೀಡಿತು.

CCL 2024 Bengal tigers beat karnataka bulldozers by 13 runs to lift title

ದೊಡ್ಡ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಕಾರ್ತಿಕ್ ಆಸರೆಯಾದರು. ಆದರೂ ಅಂತಿಮವಾಗಿ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಸುದೀಪ್ ನೇತೃತ್ವದ ತಂಡ 125 ರನ್ ಗಳಿಸಿ 12 ರನ್‌ಗಳಿಂದ ಸೋಲುಂಡಿತು. ಕಳಪೆ ಬೌಲಿಂಗ್ ಕಾರಣಕ್ಕೆ ಕರ್ನಾಟಕ ಬುಲ್ಡೋಜರ್ಸ್ ತಕ್ಕ ಬೆಲೆ ತೆರುವಂತಾಯಿತು.

More from Filmibeat

English summary
CCL 2024: Bengal tigers win maiden title
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X