CCL 2024: ಮುಂಬೈ ಹೀರೊಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಜಯಭೇರಿ

ಮತ್ತೆ ಸಿನಿಮಾ- ಕ್ರಿಕೆಟ್ ಸಮಾಗಮವಾಗಿದೆ. ಸಿನಿಮಾ ತಾರೆಯರು ಬಣ್ಣ ಕಳಚಿಟ್ಟು ಗ್ಲೌಸು, ಪ್ಯಾಡು ತೊಟ್ಟು ಬ್ಯಾಟ್ ಹಿಡಿದು ಕ್ರಿಕೆಟ್ ಅಂಗಳಕ್ಕೆ ಇಳಿದಿದ್ದಾರೆ. ಸಿಸಿಎಲ್(ಸೆಲೆಬ್ರೆಟಿ ಕ್ರಿಕೆಟ್ ಲೀಗ್) 10ನೇ ಆವೃತ್ತಿ ಲೀಗ್ ಪಂದ್ಯಗಳು ಶಾರ್ಜಾದಲ್ಲಿ ನಡೀತಿದೆ. ಭಾನುವಾರ ಸಂಜೆ(ಫೆಬ್ರವರು 25) ಮುಂಬೈ ಹೀರೊಸ್ ಎದುರು ಕರ್ನಾಟಕ ಬುಲ್ಡೋಜರ್ಸ್ ಗೆದ್ದು ಬೀಗಿದ್ದಾರೆ.

ಟೆಸ್ಟ್ ಪಂದ್ಯದ ರೀತಿ ತಲಾ 10 ಓವರ್‌ಗಳ ನಾಲ್ಕು ಇನ್ನಿಂಗ್ಸ್‌ಗಳಾಗಿ ಸಿಸಿಎಲ್ ಪಂದ್ಯಗಳು ನಡೆಯುತ್ತಿವೆ. ಮುಂಬೈ ಹೀರೊಸ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ನೀರಸ ಪ್ರದರ್ಶನ ತೋರಿದ ಕರ್ನಾಟಕ ಬುಲ್ಡೋಜರ್ಸ್ ಬಳಿಕ ಅದ್ಭುತ ಪ್ರದರ್ಶನದ ಮೂಲಕ ಗೆಲುವಿನ ನಗೆ ಬೀರಿದರು. ಬಾಲಿವುಡ್ ತಂಡವನ್ನು ನಟ ರಿತೇಶ್ ದೇಶ್‌ಮುಖ ಮುನ್ನಡೆಸಿದರು. ಪ್ರದೀಪ್ ಸ್ಯಾಂಡಲ್‌ವುಡ್ ತಂಡದ ನೇತೃತ್ವ ವಹಿಸಿದ್ದರು.

CCL 2024; Karnataka Bulldozers Won By 38 Runs Against Mumbai Heroes

ರಿತೇಶ್ ದೇಶಮುಖ್ ಟಾಸ್ ಗೆದ್ದು ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ಸಣ್ಣ ಮಳೆಯ ಕಾರಣ ಪಂದ್ಯವು ಸ್ವಲ್ಪ ತಡವಾಗಿ ಶುರುವಾಯಿತು. ನಡುವೆ ಕೂಡ ಮಳೆ ಬಂದು ಅಡ್ಡಿಯಾಗಿತ್ತು. ಆದರೂ ಸಂಪೂರ್ಣ 40 ಓವರ್‌ಗಳ ಪಂದ್ಯ ನಡೀತು.

ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಪ್ರದೀಪ್ ಮತ್ತು ಡಾರ್ಲಿಂಗ್ ಕೃಷ್ಣ ತಂಡಕ್ಕೆ ಸಾಧಾರಣ ಓಪನಿಂಗ್ ನೀಡಿದರು. ಬಳಿಕ ತಂಡ ದಿಢೀರ್ ಕುಸಿತ ಕಂಡಿತು. ಟೂರ್ನಿಯಲ್ಲೇ ಅತಿ ಕಡಿಮೆ ಇನ್ನಿಂಗ್ ಮೊತ್ತವನ್ನು ತಂಡ ದಾಖಲಿಸಿತ್ತು. 10 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 70 ರನ್ ಸೇರಿಸಿತು. ಮುಂಬೈ ಹೀರೊಸ್ ಬೌಲಿಂಗ್, ಫೀಲ್ಡಿಂಗ್ ಎದುರು ರನ್ ಗಳಿಸುವುದು ಕಷ್ಟವಾಯಿತು. ಪ್ರದೀಪ್ 18 ರನ್‌ ಗಳಿಸಿದ್ದೆ ಹೆಚ್ಚು.

70 ರನ್‌ಗಳನ್ನು ಚೇಸ್ ಮಾಡಲು ಮುಂದಾದ ಮುಂಬೈ ಹೀರೊಸ್ ಉತ್ತಮ ಆರಂಭ ಪಡೆದರು. ಬಳಿಕ 10 ಓವರ್‌ಗಳಲ್ಲಿ 76 ರನ್‌ಗಳನ್ನು ಮಾತ್ರ ಕಲೆ ಹಾಕಿದರು. 27 ರನ್ ಗಳಿಸಿದ ಸಾಕಿಬ್ ಉತ್ತಮ ಎನಿಸಿಕೊಂಡರು. ಕೇವಲ 6 ರನ್‌ ಲೀಡ್‌ನೊಂದಿಗೆ ಕರ್ನಾಟಕ ಬುಲ್ಡೋಜರ್ಸ್ 2ನೇ ಇನ್ನಿಂಗ್ ಆರಂಭಿಸಿತು. ಆರಂಭದಲ್ಲಿ ನಾಯಕ ಪ್ರದೀಪ್ ಹಾಗೂ ಚಂದನ್ ವಿಕೆಟ್ ಕಳೆದುಕೊಂಡರೂ, ಡಾರ್ಲಿಂಗ್ ಕೃಷ್ಣ ಮತ್ತು ಜೆ. ಕಾರ್ತಿಕ್ ಉತ್ತಮ ಪ್ರದರ್ಶನ ನೀಡಿದರು.

CCL 2024; Karnataka Bulldozers Won By 38 Runs Against Mumbai Heroes

18 ಎಸೆತಗಳಲ್ಲಿ 55 ರನ್ ಸಿಡಿಸಿ ಡಾರ್ಲಿಂಗ್ ಕೃಷ್ಣ ಗಮನ ಸೆಳೆದರು. ಒಟ್ಟಾರೆ 2ನೇ ಇನ್ನಿಂಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ 3 ವಿಕೆಟ್ ಕಳೆದುಕೊಂಡು 129 ರನ್ ಪೇರಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಹೀರೋಸ್ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ತತ್ತರಿಸಿತು.

ಬುಲ್ಡೋಜರ್ಸ್‌ನ ಬೌಲರ್‌ಗಳು ಬಿಗಿಯಾದ ಬೌಲಿಂಗ್ ಮುಂಬೆ ಹೀರೋಸ್ ಆಟ ನಡೆಯಲಿಲ್ಲ. ಮೊದಲ ಬೌಂಡರಿ ಬಾರಿಸಲು 5ನೇ ಓಪರ್‌ವರೆಗೂ ಪರದಾಡುವಂತಾಯಿತು. ಸಾಲು ಸಾಲಾಗಿ 8 ವಿಕೆಟ್ ಕಳೆದುಕೊಂಡು ಅಂತಿಮವಾಗಿ 85 ರನ್‌ ಗಳಿಸಿ ತಮ್ಮ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಈ ಮೂಲಕ 38 ರನ್‌ಗಳಿಂದ ಕರ್ನಾಟಕ ಬುಲ್ಡೋಜರ್ಸ್‌ ಮೊದಲ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಿದರು.

ಈ ಪಂದ್ಯದೊಂದಿಗೆ ಶಾರ್ಜಾದಲ್ಲಿ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಮುಂದಿನ ವೀಕೆಂಡ್ ಹೈದರಾಬಾದ್‌ನಲ್ಲಿ ಪಂದ್ಯಗಳು ನಡೆಯಲಿವೆ. ಜಿಯೋ ಸಿನಿಮಾದಲ್ಲಿ ಸಿಸಿಎಲ್-10 ಪಂದ್ಯಗಳು ನೇರ ಪ್ರಸಾರವಾಗುತ್ತಿವೆ.

More from Filmibeat

English summary
Who Won Yesterday's CCL 2024 Between Karnataka Bulldozers and Mumbai Heroes? Check Winner, Scorecard and Awards;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X