CCL 2025: ಚೆನ್ನೈ ರೈನೋಸ್ ಎದುರು ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

ಸಿಸಿಎಲ್ 2025 ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ 2ನೇ ಗೆಲುವು ಸಾಧಿಸಿದೆ. ಹೈದರಾಬಾದ್ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ರೈನೋಸ್ ಎದುರು 7 ವಿಕೆಟ್‌ಗಳಿಂದ ಸುದೀಪ್ ನೇತೃತ್ವದ ತಂಡ ಗೆದ್ದು ಬೀಗಿದೆ. ಎರಡು ತಂಡಗಳಿಗೆ ತಲಾ 2 ಇನ್ನಿಂಗ್ಸ್ ರೀತಿ 4 ಇನ್ನಿಂಗ್ಸ್‌ಗಳಾಗಿ ಸಿಸಿಎಲ್ ಪಂದ್ಯಗಳು ನಡೆಯುತ್ತಿದೆ.

ಟಾಸ್ ಗೆದ್ದು ಚೆನ್ನೈ ರೈನೋಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭದಿಂದಲೇ ಎದುರಾಳಿ ತಂಡದ ಬ್ಯಾಟ್ಸ್ಮನ್‌ಗಳನ್ನು ಕರ್ನಾಟಕ ಬುಲ್ಡೋಜರ್ಸ್ ಬೌಲರ್‌ಗಳು ಕಟ್ಟಿ ಹಾಕಿದರು. ಆದರೆ ನಿಧಾನವಾಗಿ ರನ್ ಗಳಿಸಲು ಆರಂಭಿಸಿದ ತಂಡ ಅಂತಿಮವಾಗಿ ಉತ್ತ, ಮೊತ್ತವನ್ನೇ ಕಲೆ ಹಾಕಿತ್ತು. 3 ವಿಕೆಟ್ ಕಳೆದುಕೊಂಡು 108 ರನ್ ಗಳಿಸಿತ್ತು. ಚೆನ್ನೈ ಪರ ಪೃಥ್ವಿ 27 ಹಾಗೂ ವಿಕ್ರಾಂತ್ 27 ರನ್ ಕೊಡುಗೆ ನೀಡಿದರು.

CCL 2025 Karnataka bulldozers beat Chennai rhinos by 7 wickets

108 ರನ್‌ಗಳ ಮೊದಲ ಇನ್ನಿಂಗ್ಸ್‌ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಡಾರ್ಲಿಂಗ್ ಕೃಷ್ಣ ನೆರವಾದರು. ಕಳೆದ ವಾರ ನಡೆದ ಮೊದಲ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ವಿರುದ್ಧ ಅಬ್ಬರಿಸಿ 80 ರನ್ ಗಳಿಸಿದ್ದ ಕೃಷ್ಣ, ಚೆನ್ನೈ ವಿರುದ್ಧವೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 23 ಎಸೆತಗಳಲ್ಲಿ 50 ರನ್ ಸಿಡಿಸಿ ಸದ್ದು ಮಾಡಿದ್ದರು. ಒಟ್ಟಾರೆ 4 ವಿಕೆಟ್ ಕಳೆದುಕೊಂಡು 142 ರನ್ ಕಲೆ ಹಾಕಿತು.

44 ರನ್ ಹಿನ್ನಡೆಯೊಂದಿಗೆ ಚೆನ್ನೈ ರೈನೋಸ್ 2ನೇ ಇನ್ನಿಂಗ್ಸ್‌ ಆರಂಭಿಸಿತು. ಕೊನೆಗೆ 7 ವಿಕೆಟ್ ಕಳೆದುಕೊಂಡು 10 ಓವರ್‌ಗಳಲ್ಲಿ 103 ರನ್ ಗಳಿಸಿತು. ಕಾಲೈ 24, ಪೃಥ್ವಿ 30 ರನ್ ಗಳಿಸಿ ತಂಡಕ್ಕೆ ನೆರವಾದರು. ಸುನಿಲ್ ರಾವ್ 2 ಹಾಗೂ ರಾಜೀವ್ 1 ವಿಕೆಟ್ ಕಬಳಿಸಿದರು.

ಬಳಿಕ 10 ಓವರ್‌ಗಳಲ್ಲಿ 70 ರನ್‌ಗಳ ಗುರಿಯೊಂದಿಗೆ ಕರ್ನಾಟಕ ಬುಲ್ಡೋಜರ್ಸ್ 2ನೇ ಇನ್ನಿಂಗ್ಸ್ ಆರಂಭಿಸಿತು. ಆರಂಭದಲ್ಲೇ ಜೆಕೆ ಔಟ್ ಆಗಿದ್ದು ತಂಡಕ್ಕೆ ಆಘಾತ ತಂದಿತ್ತು. ಮೊದಲ ಎಸೆತದಲ್ಲಿ 1 ರನ್ ಗಳಿಸಿದ ಜೆಕೆ 2ನೇ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆಗಿ ಹೊರ ನಡೆದರು. ಅಂತಿಮವಾಗಿ ತಂಡ 7 ವಿಕೆಟ್‌ಗಳ ಗೆಲುವು ಸಾಧಿಸಿತು. 2ನೇ ಇನ್ನಿಂಗ್ಸ್‌ನಲ್ಲಿ ಕರಣ್ 18 ಗಳಿಸಿದರು. ಡಾರ್ಲಿಂಗ್ ಕೃಷ್ಣ 22 ಹಾಗೂ ರಾಜೀವ್ 17 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

More from Filmibeat

English summary
Karnataka bulldozers Vs Chennai rhinos CCL match; Kiccha Sudeep's team won by 7wickets
Read more about: ccl 2025 sandalwood kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X