CCL 2025: 46 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್

ಸಿಸಿಎಲ್ ಸೀಸನ್ 11ರ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದಿದೆ. ಅಖಿಲ್ ಅಕ್ಕಿನೇನಿ ನೇತೃತ್ವದ ತೆಲುಗು ವಾರಿಯರ್ಸ್ ವಿರುದ್ಧ 46 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ತಲಾ 10 ಓವರ್‌ಗಳ 4 ಇನ್ನಿಂಗ್ಸ್ ಪಂದ್ಯದಲ್ಲಿ ಕಿಚ್ಚ ಹುಡುಗರು ಜಬರ್ದಸ್ತ್‌ ಆಗಿ ಆಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಟಾಸ್ ಗೆದ್ದ ತೆಲುಗು ವಾರಿಯರ್ಸ್ ತಂಡದ ನಾಯಕ ಅಖಿಲ್ ಅಕ್ಕಿನೇನಿ ಫೀಲಿಂಗ್ ಆಯ್ಕೆ ಮಾಡಿಕೊಂಡರು. ಕರ್ನಾಟಕ ಬುಲ್ಡೋಜರ್ಸ್ ತಂಡ ಡಾರ್ಲಿಂಗ್ ಕೃಷ್ಣ ಹಾಗೂ ರಾಜೀವ್ ಬ್ಯಾಟಿಂಗ್ ಆರಂಭಿಸಿದರು. ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡಾದ ಡಾರ್ಲಿಂಗ್ ಕೃಷ್ಣ ತಂಡಕ್ಕೆ ನೆರವಾದರು.

ತೆಲುಗು ವಾರಿಯರ್ಸ್ ತಂಡ ಉತ್ತಮ ಬೌಲಿಂಗ್, ಫೀಲ್ಡಿಂಗ್ ನಡುವೆಯೂ ಕೃಷ್ಣ ದೊಡ್ಡ ಇನ್ನಿಂಗ್ಸ್ ಕಟ್ಟಿದ್ದರು. 10 ಓವರ್‌ಗಳ ಇನ್ನಿಂಗ್ಸ್‌ನಲ್ಲಿ 80 ರನ್ ಬಾರಿಸಿದರು. ಅದು ಕೂಡ ಕೇವಲ 38 ಎಸೆತಗಳಲ್ಲಿ ಎನ್ನುವುದು ವಿಶೇಷ. ಬೌಂಡರಿ ಸಿಕ್ಸರ್‌ಗಳ ಮೂಲಕ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದರು. ಮೊದಲ ಇನ್ನಿಂಗ್ಸ್‌ನಲ್ಲಿ ತಂಡ 10 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿತು.

CCL 2025 karnataka bulldozers beat telugu warriors by 46 runs in chinnaswamy stadium

ತೆಲುಗು ವಾರಿಯರ್ಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಅಖಿಲ್ 51 ರನ್ ಹಾಗೂ ಆದರ್ಶನ್ 25 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು. ಚಂದನ್ ಹಾಗೂ ಮಂಜುನಾಥ್ ಗೌಡ ತಲಾ ಎರಡು ವಿಕೆಟ್ ಪಡೆದಿದ್ದರು. 14 ರನ್‌ಗಳ ಮುನ್ನಡೆಯೊಂದಿಗೆ ಕರ್ನಾಟಕ ಬುಲ್ಡೋಜರ್ಸ್ ತಂಡ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿತು.

ಎರಡನೇ ಇನ್ನಿಂಗ್ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಕರ್ನಾಟಕ ಬುಲ್ಡೋಜರ್ಸ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಕೃಷ್ಣ ಕೂಡ ಬೇಗ ಔಟ್ ಆಗಿದ್ದರು. ಆದರೆ ರಾಜೀವ್ 25 ರನ್ ಹಾಗೂ ಕರಣ್ 34 ರನ್ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆ ಮೂಲಕ

ಕರ್ನಾಟಕ ಇನ್ನಿಂಗ್ಸ್ 2ನೇ ಇನ್ನಿಂಗ್ ಮುಕ್ತಾಯವಾಗಿದೆ. 10 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿತು. ಆ ಮೂಲಕ ಕರ್ನಾಟಕ ಬುಲ್ಡೋಜರ್ಸ್ ಒಟ್ಟಾರೆ ಭಾರೀ ಮೊತ್ತದ ಟಾರ್ಗೆಟ್ ಅನ್ನು ತೆಲುಗು ವಾರಿಯರ್ಸ್ ತಂಡದ ಮುಂದಿಟ್ಟಿದೆ. 10 ಓವರ್‌ಗಳಲ್ಲಿ 138 ರನ್‌ ಗಳಿಸಿದರೆ ತೆಲುಗು ವಾರಿಯರ್ಸ್ ತಂಡ ಪಂದ್ಯ ಗೆಲ್ಲಲಿದೆ. ತೆಲುಗು ವಾರಿಯರ್ಸ್ ಎದುರು 138 ರನ್‌ಗಳ ಬೃಹತ್ ಟಾರ್ಗೆಟ್ ಕೊಟ್ಟರು.

ಭಾರೀ ಮೊತ್ತ ಬೆನ್ನತ್ತಿದ ತೆಲುಗು ವಾರಿಯರ್ಸ್ ತಂಡ ಆರಂಭದಲ್ಲಿ ಉತ್ತಮ ಪ್ರತಿರೋಧ ತೋರಿತು. ಎಸ್ ತಮನ್ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ಶಕ್ತಿ ತುಂಬಿತ್ತು. ಆದರೆ ಬಳಿಕ ದಿಢೀರನೆ ವಾರಿಯರ್ಸ್ ಬ್ಯಾಟಿಂಗ್ ಕುಸಿಯಿತು. 6 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 68 ರನ್ ಗಳಿಸಿತು. ಅಂತಿಮವಾಗಿ 10 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿ ವಾರಿಯರ್ಸ್ ತಂಡ ಸೋಲಿಗೆ ಶರಣಾಯಿತು. ಎಸ್ ತಮನ್ 19 ಎಸೆತಗಳಲ್ಲಿ 37 ರನ್ ಸಿಡಿಸಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆ ಪಾತ್ರರಾದರು.

ನಟ ಗೋಲ್ಡನ್ ಸ್ಟಾರ್ ಗಣೇಶ್ 2 ಓವರ್‌ಗಳಲ್ಲಿ 5 ರನ್ ನೀಡಿ 4 ವಿಕೆಟ್ ಕಬಳಿಸಿ ಗಮನ ಸೆಳೆದರು. ಒಟ್ಟಾರೆ ಕಿಚ್ಚನ ಹುಡುಗರು ಕಿಚ್ಚಿನಿಂದ ಆಡಿ ಮೊದ ಪಂದ್ಯದಲ್ಲಿ ಗೆದ್ದು ಬೀಗಿದ್ದಾರೆ. ಫೆಬ್ರವರಿ 14ರಂದು ಹೈದರಾಬಾದ್‌ನಲ್ಲಿ ಚೆನ್ನೈ ರೈನೋಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಎರಡನೇ ಪಂದ್ಯ ಆಡಲಿದೆ.

More from Filmibeat

English summary
Celebrity cricket league 2025; karnataka bulldozers vs telugu warriors; The Karnataka Bulldozers defeated the Telugu Warriors by 46 runs
Read more about: sandalwood kannada ccl 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X