CCL 2025: ಚೆನ್ನೈ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ರಾ? 'ಕರ್ನಾಟಕ ಬುಲ್ಡೋಜರ್ಸ್' ಯಾಕೆ ಈ ಸೋಲು?
ಸಿಸಿಎಲ್ 2025 ಎರಡು ಸೆಮಿ ಫೈನಲ್ ಪಂದ್ಯಗಳು ಮುಗಿದಿದ್ದು ಅನಿರೀಕ್ಷಿತ ಫಲಿತಾಂಶಗಳು ಬಂದಿವೆ. ಯಾವ ತಂಡ ಗೆಲ್ಲುತ್ತವೆ ಅಂತ ನಿರೀಕ್ಷೆ ಮಾಡಲಾಗಿತ್ತೋ? ಆ ಎರಡೂ ತಂಡಗಳು ಸೋತಿವೆ. ಫೈನಲ್ ತಲುಪುವ ಎರಡು ಪ್ರಮುಖ ತಂಡಗಳಲ್ಲಿ 'ಬೆಂಗಾಲ್ ಟೈಗರ್ಸ್' ಹಾಗೂ 'ಕರ್ನಾಟಕ ಬುಲ್ಡೋಜರ್ಸ್' ತಂಡ ಫೇವರಿಟ್ ಆಗಿದ್ದವು. ಆದರೆ, ಸೆಮಿಫೈನಲ್ಸ್ ಪಂದ್ಯದಲ್ಲಿ ಆಗಿದ್ದೇ ಬೇರೆ.
ಕರ್ನಾಟಕ ಬುಲ್ಡೋಜರ್ಸ್ ತಂಡ ಚೆನ್ನೈ ರೈನೋಸ್ ವಿರುದ್ದ ಗೆದ್ದು ಫೈನಲ್ ಪ್ರವೇಶ ಮಾಡುತ್ತೆ ಎಂಬ ನಿರೀಕ್ಷೆಯಿತ್ತು. ಆದರೆ, ಕನ್ನಡಿಗರಿಗೆ ಈ ಪಂದ್ಯ ನಿರಾಸೆ ನೀಡಿದೆ. ಲೀಗ್ ಪಂದ್ಯದಲ್ಲಿ ಚೆನ್ನೈ ರೈನೋಸ್ ತಂಡವನ್ನು ಸುಲಭವಾಗಿ ಸೋಲಿಸಿದ್ದ ಕರ್ನಾಟಕ ಸೆಮಿ ಫೈನಲ್‌ನಲ್ಲಿ ಯಾಕೆ ಇಷ್ಟು ಹೀನಾಯವಾಗಿ ಸೋಲುಂಡಿತು? ಅನ್ನೋ ಪ್ರಶ್ನೆ ಈಗ ಕಾಡುತ್ತಿರುವ ಪ್ರಶ್ನೆ.

ಕರ್ನಾಟಕ ಬುಲ್ಡೋಜರ್ಸ್ ತಂಡದ ಬೌಲರ್‌ಗಳನ್ನು ಚೆನ್ನೈನ ಇಬ್ಬರು ಬ್ಯಾಟ್ಸ್‌ಮ್ಯಾನ್ ಧೂಳಿಪಟ ಮಾಡಿದ್ದರು. ಪ್ರತಿ ಓವರ್‌ಗೆ ಸಿಕ್ಸ್, ಫೋರ್ ಮಿಸ್ ಇಲ್ಲದೆ ಹೊಡೆದಿದ್ದಾರೆ. ಅದನ್ನು ನೋಡಿದರೆ, ಇಷ್ಟೊಂದು ಕೆಟ್ಟದಾಗಿ ಬೌಲಿಂಗ್ ಮಾಡದಿದ್ದ ಕರ್ನಾಟಕ ಬುಲ್ಡೋಜರ್ಸ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡವರಿಗಿಂತ ಕೀಳಾಗಿ ಬೌಲಿಂಗ್ ಪ್ರದರ್ಶನ ನೀಡಿತ್ತು. ಇದೇ ಸೋಲಿಗೆ ಪ್ರಮುಖ ಕಾರಣ.
ಕರ್ನಾಟಕ ಬುಲ್ಡೋಜರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್‌ಗೆ 111 ರನ್‌ಗಳನ್ನು ಕಲೆ ಹಾಕಿತ್ತು. ಹೆಚ್ಚು ಕಮ್ಮಿ ಆಗಿದ್ದರೆ, ಚೆನ್ನೈ ರೈನೋಸ್ ಮೊದಲ ಇನ್ನಿಂಗ್ಸ್ ನಲ್ಲಿಯೇ ಈ ರನ್ ಅನ್ನು ಬೀಟ್ ಮಾಡುತ್ತಿತ್ತು. ಆದರೆ, ಕೊನೆಯ ಓವರ್‌ನಲ್ಲಿ ಸ್ವಲ್ಪ ಎಡವಿದ್ದರು. 2 ವಿಕೆಟ್ ನಷ್ಟಕ್ಕೆ 105 ರನ್‌ಗೆ ಗಳಿಸಿತ್ತು. ಕರ್ನಾಟಕ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 123 ರನ್ ಗಳಿಸಿತ್ತು. ಆರಂಭದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದಷ್ಟೇ. ಆ ನಂತರ ಒಂದೇ ಒಂದು ವಿಕೆಟ್ ಅನ್ನೂ ಪಡೆಯುವುದಕ್ಕೆ ಇವರಿಗೆ ಸಾಧ್ಯವಾಗಲಿಲ್ಲ.

ಕರ್ನಾಟಕ ಬುಲ್ಡೋಜರ್ ಪರ ಬೌಲಿಂಗ್ ಮಾಡಿದವರೆಲ್ಲರೂ ರನ್ ಕೊಟ್ಟಿದ್ದೇ ಕೊಟ್ಟಿದ್ದು. ರಾಜೀವ್ ಮಾಡಿದ ಮೊದಲ ಓವರ್ ಬಿಟ್ಟರೆ, ಮತ್ತೆ ಎಲ್ಲಾ ಓವರ್‌ಗಳು 10 ರಿಂದ 15 ರನ್ ಬಂದಿವೆ. ಸಿಕ್ಸ್, ಫೋರ್‌ಗಳಿಗೆ ಲೆಕ್ಕವೇ ಇಲ್ಲದಂತೆ ಬಾರಿಸಿದ್ದರು. ರಾಜೀವ್ ಮಾಡಿದ ಎರಡನೇ ಓವರ್ ಕೂಡ ಹೆಚ್ಚು ರನ್ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಚಂದನ್‌ಗೆ ಒಂದು ವಿಕೆಟ್, ಸುನೀಲ್‌ಗೆ ಒಂದು ವಿಕೆಟ್ ಬಂದಿದ್ದು ಬಿಟ್ಟರೆ ಮತ್ಯಾರೂ ವಿಕೆಟ್ ಪಡೆಯಲೇ ಇಲ್ಲ.
ಇನ್ನು ಎರಡನೇ ಇನ್ನಿಂಗ್ಸ್‌ನಲ್ಲೂ ಅಷ್ಟೇ. ರಾಜೀವ್ ಎರಡು ವಿಕೆಟ್ ತೆಗೆದರೂ, ಎರಡನೇ ಓವರ್ ದುಬಾರಿ ಎನಿಸಿದ್ದರು. ಎರಡನೇ ಓವರ್ ಡಾರ್ಲಿಂಗ್ ಕೃಷ್ಣ ಇನ್ನು ದುಬಾರಿ ಆಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್, ಚಂದನ್ ಕುಮಾರ್, ಸುನೀಲ್ ರಾವ್, ಅನುಪ್ ಭಂಡಾರಿ ಎಲ್ಲರೂ ಕೆಟ್ಟದಾಗಿಯೇ ಬೌಲಿಂಗ್ ಮಾಡಿದರು. ಮೊದಲ ಮೂರು ಪಂದ್ಯಗಳಲ್ಲಿ ಮಾಡಿದ ಬೌಲಿಂಗ್ ಎಫೆಕ್ಟ್ ಈ ಸೆಮಿ ಫೈನಲ್ ಪಂದ್ಯದಲ್ಲಿ ಇರಲಿಲ್ಲ. ಬೌಲರ್‌ಗಳು ಆಸಕ್ತಿ ಕಳೆದುಕೊಂಡಿದ್ದರೋ? ಇಲ್ಲ ಓವರ್ ಕಾನ್ಫಿಡೆನ್ಸ್‌ನಲ್ಲಿ ಇದ್ದರೋ ಗೊತ್ತಿಲ್ಲ. ಬೌಲಿಂಗ್ ಅಂತೂ ಇಷ್ಟು ಕೆಟ್ಟದಾಗಿ ಹಿಂದಿನ ಯಾವುದೇ ಪಂದ್ಯದಲ್ಲೂ ಇರಲಿಲ್ಲ ಅಂತ ಹೇಳಬಹುದು.
ಕಾಕತಾಳೀಯವೋ ಏನೋ ಸೆಮಿಫೈನಲ್ ಪಂದ್ಯದಲ್ಲಿ ಯಾರು ಮೊದಲ ಬ್ಯಾಟಿಂಗ್ ಮಾಡಿದ್ದಾರೋ ಅವರು ಸೋತಿದ್ದಾರೆ. ಪಂಜಾಬ್ ದೆ ಶೇರ್ ಹಾಗೂ ಬೆಂಗಾಲ್ ಟೈಗರ್ಸ್ ಪಂದ್ಯ ಕೂಡ ಹೀಗೆ ಆಗಿದೆ. ಒಟ್ನಲ್ಲಿ ಹೋಮ್ ಗ್ರೌಂಡ್‌ನಲ್ಲೇ ಕರ್ನಾಟಕ ಬುಲ್ಡೋಜರ್ಸ್ ಟೀಮ್ ಹೀನಾಯವಾಗಿ ಸೋತಿದೆ. 130 ರನ್ ಖಂಡಿತಾ ಕೆಟ್ಟ ಟಾರ್ಗೆಲ್ ಆಗಿರಲಿಲ್ಲ. ಹಾಗೇ ಇದು ಬ್ಯಾಡ್ ಲಕ್ ಅಂತೂ ಅಲ್ಲವೇ ಅಲ್ಲ. ಸುಲಭವಾಗಿ ಗೆಲ್ಲುವ ಪಂದ್ಯವನ್ನು ಕೈ ಚೆಲ್ಲಿದೆ. ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಕಳೆದು ಕೊಂಡಿದೆ.


Click it and Unblock the Notifications











