CCL 2025: ಕರ್ನಾಟಕ ಬುಲ್ಡೋಜರ್ಸ್ ತಂಡ ಪ್ರಕಟ; ಕ್ಯಾಪ್ಟನ್ ಯಾರು?

ಮತ್ತೆ ತಾರೆಯರ ಕ್ರಿಕೆಟ್ ಟೂರ್ನಿ ಬರ್ತಿದೆ. ಸಿಸಿಎಲ್ 11ನೇ ಸೀಸನ್‌ಗೆ ದಿನಗಣನೆ ಶುರುವಾಗಿದೆ. ಭಾರತೀಯ ಚಿತ್ರರಂಗದ ತಾರೆಯರು 7 ತಂಡಗಳಾಗಿ ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ. ಮೇಕಪ್, ಕ್ಯಾಮರಾ ಮರೆತು ಬ್ಯಾಟು, ಬಾಲ್ ಹಿಡಿದು ಕ್ರಿಕೆಟ್ ಆಡಲಿದ್ದಾರೆ. ಫೋರ್, ಸಿಕ್ಸರ್ ಮಳೆ ಸುರಿಸಲು ಮುಂದಾಗಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಆಟಗಾರರ ಪಟ್ಟಿ ಹೊರಬಿದ್ದಿದೆ.

2011ರಲ್ಲಿ ಮೊದಲ ಬಾರಿಗೆ ಸಿಸಿಎಲ್ ಕ್ರಿಕೆಟ್ ಟೂರ್ನಿ ಆರಂಭವಾಗಿತ್ತು. ಇದೇ ಫೆಬ್ರವರಿ 8ರಿಂದ 11ನೇ ಸೀಸನ್ ರಂಗೇರುತ್ತಿದೆ. ಈಗಾಗಲೇ ಕಿಚ್ಚ ಸುದೀಪ್ ತಂಡದ ಜೊತೆ ತಾಲೀಮು ನಡೆಸುತ್ತಿದ್ದಾರೆ. ಹಿಂದಿ ಚಿತ್ರರಂಗದ ತಾರೆಯರು (ಮುಂಬೈ ಹೀರೋಸ್), ಬೆಂಗಾಲಿ ಚಿತ್ರರಂಗದವರು (ಬೆಂಗಾಲ್ ಟೈಗರ್ಸ್), ಪಂಜಾಬಿ ತಾರೆಯರು (ಪಂಜಾಬ್ ಡಿ ಶೇರ್), ಭೋಜ್‌ಪುರಿ ಚಿತ್ರರಂಗದವರು (ಭೋಜ್‌ಪುರಿ ದಬಾಂಗ್ಸ್) ತಂಡಗಳಾಗಿ ಆಡಲಿದ್ದಾರೆ.

CCL 2025 Karnataka Bulldozers Squad Actor Sudeep lead team

ಇನ್ನು ತೆಲುಗು ತಾರೆಯರು (ತೆಲುಗು ವಾರಿಯರ್ಸ್), ತಮಿಳು ಚಿತ್ರರಂಗದ ನಟರು, ತಂತ್ರಜ್ಞರು (ಚೆನ್ನೈ ರೈನೋಸ್), ಸುದೀಪ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ತಾರೆಯರು (ಕರ್ನಾಟಕ ಬುಲ್ಡೋಜರ್ಸ್) ಮತ್ತು ಮಲಯಾಳಂ ಸಿನಿಮಾರಂಗದವರು (ಕೇರಳ ಸ್ಟ್ರೈಕರ್ಸ್) ಕೂಡ ಟೂರ್ನಿಯಲ್ಲಿದ್ದಾರೆ. ಬಾಲಿವುಡ್ ತಂಡವನ್ನು ನಟ ಸೋನು ಸೂದ್ ಮುನ್ನಡೆಸಲಿದ್ದಾರೆ.

ತೆಲುಗು ತಂಡಕ್ಕೆ ನಟ ಅಖಿಲ್ ಅಕ್ಕಿನೇನಿ ಕ್ಯಾಪ್ಟನ್ ಆಗಿದ್ದಾರೆ. ಇನ್ನು ನಟ ಆರ್ಯ ಕಾಲಿವುಡ್ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. 2013 ಹಾಗೂ 2014ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದು ಟ್ರೋಫಿ ಎತ್ತಿ ಹಿಡಿದಿತ್ತು. ಬಳಿಕ ಯಾಕೋ ಪ್ರಶಸ್ತಿ ಒಲಿಯಲಿಲ್ಲ. ಈ ಬಾರಿ ಮತ್ತೆ ಟ್ರೋಫಿ ಮೇಲೆ ತಂಡ ಕಣ್ಣಿಟ್ಟಿದ್ದು ಕಠಿಣ ತರಬೇತಿ ನಡೆಸುತ್ತಿದೆ. ಈಗಾಗಲೇ ತಂಡದ ಆಟಗಾರರ ಪಟ್ಟಿ ಹೊರ ಬಿದ್ದಿದೆ.

ನಟ ಸುದೀಪ್ ಮತ್ತೊಮ್ಮೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಕ್ಯಾಪ್ಟನ್ ಆಗಿ ಮುಂದುವರೆಯಲಿದ್ದಾರೆ. ಇನ್ನುಳಿದಂತೆ ನಟರಾದ ಗಣೇಶ್, ಜೆಕೆ, ಡಾರ್ಲಿಂಗ್ ಕೃಷ್ಣ, ಸುನಿಲ್ ರಾವ್, ರಾಜೀವ್, ಚಂದನ್, ಪ್ರತಾಪ್ ನಾರಾಯಣ್, ನಿರೂಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ್ ಗೌಡ, ಸಾಗರ್ ಗೌಡ, ಅಲಕ್ನಂದ, ಸಿದ್ದು ಮೂಲಿಮನಿ, ನಿರ್ದೇಶಕ ಅನೂಪ್ ಭಂಡಾರಿ ತಂಡದಲ್ಲಿದ್ದಾರೆ.

CCL 2025 Karnataka Bulldozers Squad Actor Sudeep lead team

ಜನವರಿ 31ಕ್ಕೆ ಟೂರ್ನಿ ಆರಂಭಿಸಲು ಮೊದಲಿಗೆ ತೀರ್ಮಾನಿಸಲಾಗಿತ್ತು. ಬಳಿಕ ದಿನಾಂಕ ಮುಂದೂಡಲಾಗಿದೆ. ಫೆಬ್ರವರಿ 8ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ಚೆನ್ನೈ ರೈನೋಸ್ ಹಾಗೂ ಬೆಂಗಾಲ್ ಟೈಗರ್ಸ್ ತಂಡಗಳ ನಡುವೆ ನಡೆಯಲಿದೆ. 2ನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ತೆಲುಗು ವಾರಿಯರ್ಸ್ ತಂಡಕ್ಕೆ ಸವಾಲು ಎಸೆಯಲಿದೆ.

ಮರುದಿನ ಬೆಂಗಾಲ್ ಟೈಗರ್ಸ್ vs ಪಂಬಾಜ್ ಹಾಗೂ ಮುಂಬೈ ಹೀರೋಸ್ vs ಭೋಜ್‌ಪುರಿ ದಬಾಂಗ್ಸ್ ತಂಡಗಳು ಸೆಣಸಲಿವೆ. ಫೆಬ್ರವರಿ 14ರಂದು ಚೆನ್ನೈ ರೈನೋಸ್ ವರ್ಸಸ್ ಕರ್ನಾಟಕ ಬುಲ್ಡೋಜರ್ಸ್ ತಂಡಗಳು ಹೈದರಾಬಾದ್‌ನಲ್ಲಿ ಆಡಲಿವೆ. ಮತ್ತೊಂದು ಪಂದ್ಯದಲ್ಲಿ ಭೊಜ್‌ಪುರಿ ದಂಬಾಗ್ಸ್ ತಂಡ ತೆಲುಗು ವಾರಿಯರ್ಸ್ ತಂಡಕ್ಕೆ ಎದುರಾಗಲಿದೆ. ಹೀಗೆ ಟೂರ್ನಿ ಮುಂದುವರೆಯುತ್ತದೆ.

ವೀಕೆಂಡ್‌ಗಳಲ್ಲಿ ಮಾತ್ರ ಸಿಸಿಎಲ್ ಪಂದ್ಯಗಳು ನಡೆಯಲಿದೆ. ಮಾರ್ಚ್ 1ರಂದು ಸೆಮಿಫೈನಲ್ ಪಂದ್ಯಗಳು ಹಾಗೂ ಮರುದಿನ ಫೈನಲ್ ಪಂದ್ಯ ಆಯೋಜಿಸಲಾಗಿದೆ. ಹಾಟ್‌ಸ್ಟರ್ ಹಾಗೂ ಸೋನಿ ಸ್ಪೋರ್ಟ್ 3 ಚಾನಲ್‌ನಲ್ಲಿ ವೀಕ್ಷಕರು ಸಿಸಿಎಲ್ ಪಂದ್ಯಗಳನ್ನು ಲೈವ್ ವೀಕ್ಷಿಸಬಹುದಾಗಿದೆ.

More from Filmibeat

English summary
Celebrity Cricket League 2025; Karnataka Bulldozers team, schedule and more;
Read more about: sudeep ganesh ccl 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X