CCL 2025; ಮತ್ತೆ ಡಾರ್ಲಿಂಗ್ ಕೃಷ್ಣ ಸಿಡಿಲಬ್ಬರದ ಬ್ಯಾಟಿಂಗ್, ಮುಂಬೈ ಎದುರು ಆಕರ್ಷಕ ಶತಕ
ಸಿಸಿಎಲ್‌ನಲ್ಲಿ ಟೂರ್ನಿಯಲ್ಲಿ ನಟ ಡಾರ್ಲಿಂಗ್ ಕೃಷ್ಣ ಬ್ಯಾಟಿಂಗ್ ಆರ್ಭಟ ಮುಂದುವರೆದಿದೆ. ಮೊದಲ 2 ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿದ್ದ ಕೃಷ್ಣ 3ನೇ ಪಂದ್ಯದಲ್ಲಿ ಮುಂಬೈ ಹೀರೋಸ್ ವಿರುದ್ಧ ಮತ್ತೊಮ್ಮೆ ಅಬ್ಬರಿಸಿ ಬೊಬ್ಬಿರಿದ್ದಾರೆ.
ರಾಜೀವ್ ಜೊತೆ ಕೃಷ್ಣ ಮೊದಲ ವಿಕೆಟ್‌ಗೆ 48 ಎಸೆತಗಳಲ್ಲಿ 116 ಜೊತೆಯಾಟ ನೀಡಿದರು. ಇವರಿಬ್ಬರ ಆರ್ಭಟವನ್ನು ತಡೆಯಲು ಮುಬೈ ಹೀರೋಸ್ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ರಾಜೀವ್ ಔಟ್ ಆದ ಬಳಿಕ ಕೃಷ್ಣ ಮತ್ತಷ್ಟು ಜೋರಾಗಿ ಬ್ಯಾಟ್ ಬೀಸಿದರು. ಬೌಂಡರಿ, ಸಿಕ್ಸರ್‌ಗಳ ಮೂಲಕ ರಂಜಿಸಿದರು.

ಮೊದಲ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಕೃಷ್ಣ 80 ರನ್ ಗಳಿಸಿದ್ದರು. ನಿನ್ನೆ ಚೆನ್ನೈ ರೈನೋಸ್ ಎದುರು ಅಬ್ಬರಿಸಿ 50 ರನ್ ಸಿಡಿಸಿದರು. ಇದೀಗ 3ನೇ ಪಂದ್ಯದಲ್ಲಿ ಕೇವಲ 33 ಎಸೆತಳಲ್ಲಿ ಆಕರ್ಷಕ ಶಕಕ ಸಿಡಿಸಿ ದಾಖಲೆ ಬರೆದಿದ್ದಾರೆ. ಒಟ್ಟಾರೆ 36 ಎಸೆತಗಳಲ್ಲಿ ಔಟಾಗಲೇ 111 ರನ್ ಗಳಿಸಿ ಸದ್ದು ಮಾಡಿದ್ದಾರೆ. 10 ಓವರ್‌ಗಳ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸುವುದು ತಮಾಷೆಯ ಮಾತಲ್ಲ. ಹಾಗಾಗಿ ಇದು ಸಿಸಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಎನಿಸಿಕೊಂಡಿದೆ. ಸಿಸಿಎಲ್ ಸರಣಿಯಲ್ಲೇ ಅತಿ ವೇಗವಾಗಿ ಶತಕ ಸಿಡಿಸಿದ ದಾಖಲೆ ಕೂಡ ಕೃಷ್ಣ ಹೆಸರಿಗೆ ಸೇರಿದೆ. ಇಂದಿನ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್ ಸಿಡಿಸಿ ಅಬ್ಬರಿಸಿದರು.
ವೃತ್ತಿಪರ ಅನುಭವಿ ಕ್ರಿಕೆಟ್ ಆಟಗಾರನಂತೆ ಕೃಷ್ಣ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಐಪಿಎಲ್‌ಗೆ ಇವರನ್ನು ಆಯ್ಕೆ ಮಾಡಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಷ್ಟರಮಟ್ಟಿಗೆ ಅವರು ಪ್ರದರ್ಶನ ಗಮನ ಸೆಳೆಯುತ್ತಿದೆ. ಮೊದಲ 2 ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ಸದ್ಯ ಹೈದರಾಬಾದ್ ರಾಜೀವ್ ಗಾಂಧೀ ಕ್ರೀಡಾಂಗಣಲ್ಲಿ ಸಿಸಿಎಲ್ ಪಂದ್ಯಗಳು ನಡೀತಿದೆ.
ಡಾರ್ಲಿಂಗ್ ಕೃಷ್ಣ ಶತಕದ ನೆರವಿನಿಂದ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 171 ರನ್ ಗಳಿಸಿದೆ. 308 ಸ್ಟ್ರೈಕ್‌ರೇಟ್‌ನಲ್ಲಿ ಕೃಷ್ಣ 111 ರನ್ ಕಲೆ ಹಾಕಿದರು. ರಾಜೀವ್ ಮಾತ್ರ ಔಟ್ ಆಗಿದ್ದರು. ಟಾಸ್ ಗೆದ್ದ ಮುಂಬೈ ಹೀರೊಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅವರ ನಿರ್ಧಾರ ತಪ್ಪು ಎಂದು ಬಹಳ ಬೇಗ ಡಾರ್ಲಿಂಗ್ ಕೃಷ್ಣ ಸಾಬೀತು ಮಾಡಿ ತೋರಿಸಿದರು.
2ನೇ ಇನ್ನಿಂಗ್ಸ್‌ನಲ್ಲಿ ಕೃಷ್ಣ 8 ಎಸೆತಗಳಲ್ಲಿ 19 ರನ್ ಗಳಿಸಿ ಔಟಾಗಿದ್ದಾರೆ. ಶಬೀರ್ ಬೌಲಿಂಗ್‌ನಲ್ಲಿ ಬೋಲ್ಡ್ ಆಗಿ ಹೊರ ನಡೆದರು. ಆದರೂ 2 ಸಿಕ್ಸ್ ಹಾಗೂ 1 ಬೌಂಡರಿ ಬಾರಿಸಿ ಅಬ್ಬರಿಸಿದರು.


Click it and Unblock the Notifications











