CCL 2025: ತೆಲುಗು ವಾರಿಯರ್ಸ್ ವಿರುದ್ಧ ಅಬ್ಬರಿಸಿದ ಡಾರ್ಲಿಂಗ್ ಕೃಷ್ಣ

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಇನ್ನಿಂಗ್ಸ್ ಆರಂಭದಲ್ಲೇ ಆಘಾತ ಎದುರಿಸಿತು. ಬಹಳ ಬೇಗ ಭರವಸೆಯ ಆಟಗಾರ ರಾಜೀವ್ ವಿಕೆಟ್ ಕಳೆದುಕೊಂಡಿತ್ತು. ಬಳಿಕ ಡಾರ್ಲಿಂಗ್ ಕೃಷ್ಣ ಬಂಡೆಯಂತೆ ನಿಂತರು. ಆಗಾಗ್ಗೆ ಕ್ರೀಸ್‌ನಿಂದ ಹೊರಗೆ ಬಂದು ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಪ್ರಯತ್ನ ಮಾಡಿದರು. ಕೆಲವೊಮ್ಮೆ ಯಶಸ್ಸು ಕಂಡರು.

ತೆಲುಗು ವಾರಿಯರ್ಸ್ ಪ್ರಬಲ ಬೌಲಿಂಗ್ ದಾಳಿ ನಡುವೆಯೂ ಕರ್ನಾಟಕ ಬುಲ್ಡೋಜರ್ಸ್ ತಂಡ ರನ್ ಗಳಿಸುತ್ತಾ ಸಾಗಿತು. 30 ಸಾವಿರಕ್ಕೂ ಅಧಿಕ ಪ್ರೇಕ್ಷಕರು ತುಂಬಿದ್ದ ಕ್ರೀಡಾಂಗಣದಲ್ಲಿ ಕಿಚ್ಚ ನೇತೃತ್ವದ ತಂಡಕ್ಕೆ ಭಾರೀ ಬೆಂಬಲ ಸಿಕ್ಕಿತ್ತು. ಡಾರ್ಲಿಂಗ್ ಕೃಷ್ಣ ಬೌಂಡರಿ, ಸಿಕ್ಸರ್‌ ಸಿಡಿಸಿ ರಂಜಿಸಿದರು. ಮೊದಲ ಇನ್ನಿಂಗ್ಸ್‌ನ 10 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಂಡ 113 ರನ್ ಗಳಿಸಿತು.

CCL 2025 karnataka bulldozers vs telugu warriors Darling Krishna s brilliant batting

ಡಾರ್ಲಿಂಗ್ ಕೃಷ್ಣ 38 ಎಸೆತಗಳಲ್ಲಿ 80 ರನ್ ಗಳಿಸಿ ಹುಬ್ಬೇರಿಸಿದರು. 4 ವಿಕೆಟ್‌ಗೆ ಕರಣ್ ಜೊತೆ ಸೇರಿ ಕೃಷ್ಣ 74 ರನ್‌ಗಳ ಜೊತೆಯಾಟ ತಂಡದ ಬಲ ಹೆಚ್ಚಿಸಿತ್ತು. ಮೊದಲ 5 ಓವರ್‌ಗಳಲ್ಲಿ ವಾರಿಯರ್ಸ್ ಕೈ ಮೇಲಾಗಿದ್ದರೆ ನಂತರದ 5 ಓವರ್‌ಗಳು ಬುಲ್ಡೋಜರ್ಸ್ ಅಬ್ಬರಿಸಿದ್ದರು. ತೆಲುಗು ವಾರಿಯರ್ಸ್ ಕೂಡ ಮೊದಲ ಇನ್ನಿಂಗ್ಸ್‌ ಉತ್ತಮವಾಗಿ ಆರಂಭಿಸಿದರು.

More from Filmibeat

English summary
Karnataka bulldozers vs telugu warriors; Darling Krishna defies tension with half-century
Read more about: sandalwood kannada ccl 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X