CCL 2025 ; ಇಂದು ಕರ್ನಾಟಕ ಬುಲ್ಡೋಜರ್ಸ್‌ಗೆ ಪಂಜಾಬ್ ದಿ ಶೇರ್ ಸವಾಲು, ಸೆಮಿಫೈನಲ್ ಲೆಕ್ಕಾಚಾರವೇನು..?

ಕನ್ನಡ ಚಿತ್ರರಂಗದ ಬಾದ್ ಷಾ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಜೆಕೆ, ಹೀಗೆ ಅನೇಕರು ಸದ್ಯಕ್ಕೆ ಯಾವ ಚಿತ್ರಕ್ಕೂ ಬಣ್ಣ ಹಚ್ತಿಲ್ಲ. ಯಾಕೆಂದರೆ ಇವರೆಲ್ಲರ ಗಮನ ಸದ್ಯ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಮೇಲಿದೆ. ಈ ಬಾರಿ ಸಿಸಿಎಲ್ ಕಪ್ ಮುಡಿಗೇರಿಸಿಕೊಳ್ಳಬೇಕೆಂಬ ಉತ್ಸಾಹ ಎಲ್ಲರಲ್ಲಿಯೂ ಇದೆ.

ಇದಕ್ಕೆ ಪೂರಕವಾಗಿ ಕಳೆದ ಮೂರು ಪಂದ್ಯಗಳನ್ನು ಕಿಚ್ಚ ಸುದೀಪ್ ಸಾರಥ್ಯದಲ್ಲಿ ಹಗಲಿರುಳು ಬೆವರು ಸುರಿಸಿ ಸಿದ್ಧವಾದ ತಾರೆಯರು ನಿರೀಕ್ಷೆಗೆ ತಕ್ಕಂತೆ ಆಡಿದ್ದಾರೆ ಕೂಡ. ಆದರೆ ಇದು ಓನ್ ಡೇ ಮ್ಯಾಚ್ ಅಲ್ಲ. ಬದಲಿಗೆ T-20 ಮ್ಯಾಚ್. ಅದರಲ್ಲಿಯೂ ಇಲ್ಲಿನ ಪದ್ದತಿ ಮತ್ತು ನಿಯಮಗಳು ಬೇರೆ. ಹೀಗಾಗಿ ಯಾವತ್ತು ಯಾವ ಪಂದ್ಯದ ಫಲಿತಾಂಶ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವರೇ ಗೆಲ್ಲುತ್ತಾರೆ ಎಂಬ ಭವಿಷ್ಯವಾಣಿಯನ್ನು ಕೂಡ ಹೇಳುವುದು ಕಷ್ಟ. ಇದಕ್ಕೆ ಪೂರಕವಾಗಿ ಗೆಲ್ಲಬೇಕಿದ್ದ ಪಂದ್ಯಗಳನ್ನು ಇಲ್ಲಿ ಸೋತವರು ಇದ್ದಾರೆ. ಇನ್ನೇನು ಸೋತರು ಎಂದುಕೊಳ್ಳುವಷ್ಟರಲ್ಲಿ ಎಲ್ಲ ಲೆಕ್ಕಾಚಾರ ಬುಡಮೇಲಾಗಿಸಿ ಗೆದ್ದವರು ಇದ್ದಾರೆ.

ccl-2025-sudeeps-karnataka-bulldozers-to-face-punjab-de-sher-today-details-inside

ಸದ್ಯ ಇಂತಹದ್ದೇ ಲೆಕ್ಕಾಚಾರ ಇಂದಿನ ಮ್ಯಾಚ್ ವಿಚಾರದಲ್ಲಿ ನಡೆಯುತ್ತಿದೆ. ಹೌದು, ಸತತ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಇಂದು ಪಂಜಾಬ್ ದಿ ಶೇರ್ ತಂಡವನ್ನು ಎದುರಿಸಲಿದೆ. ಸೂರತ್‌ನ ಲಾಲ್‌ಭಾಯಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಈಗಲೇ ತೀವೃವಾದ ಕುತೂಹಲವನ್ನು ಕೆರಳಿಸಿದೆ.

ಇನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ಆಡಿದ ಮೂರು ಮ್ಯಾಚ್‌ನಲ್ಲಿ ದಿಗ್ವಿಜಯ ಸಾಧಿಸಿದೆ. ಆದರೆ ಅದೇ ಪಂಜಾಬ್ ಗೆಲುವು ಮತ್ತು ಸೋಲು ಎರಡರ ರುಚಿಯನ್ನು ಈ ಟೂರ್ನಾಮೆಂಟ್‌ನಲ್ಲಿ ನೋಡಿದೆ. ಅದರಲ್ಲಿಯೂ ಕಳೆದ ಮ್ಯಾಚ್ ಪಂಜಾಬ್ ಪಾಲಿಗೆ ಅವಿಸ್ಮರಣಿಯ. ಸೋಲುವ ಪಂದ್ಯವನ್ನು ಪಂಜಾಬ್ ಗೆದ್ದು ಬೀಗಿದೆ.

ಹೀಗಾಗಿ ಇಂದು ಫಲಿತಾಂಶ ಹೀಗೆ ಬರುತ್ತೆ ಎಂದು ಹೇಳುವುದು ತುಸು ಕಷ್ಟ. ಸಂಜೆ 06-30ಕ್ಕೆ ಪಂದ್ಯ ಆರಂಭವಾಗಲಿದ್ದು ಪಂಜಾಬ್ ತಂಡಕ್ಕೆ ಡಾರ್ಲಿಂಗ್ ಕೃಷ್ಣ ಸದ್ಯ ತಲೆ ನೋವಾಗಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ಧಾಂ ಧೂಂ ಎಂದು ಆಟವನ್ನು ಆಡಿರುವ ಡಾರ್ಲಿಂಗ್ ಕೃಷ್ಣ ಸಿಸಿಎಲ್‌ ಇತಿಹಾಸದಲ್ಲಿಯೇ ಶತಕವನ್ನು ಸಿಡಿಸಿದ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದ್ದಾರೆ. ಸಹಜವಾಗಿ ಡಾರ್ಲಿಂಗ್ ಕೃಷ್ಣ ವಿರುದ್ದ ಪಂಜಾಬ್ ಗೇಮ್ ಪ್ಲ್ಯಾನ್ ಮಾಡಿಕೊಂಡಿರುವ ಸಾಧ್ಯತೆ ಇದೆ. ಇನ್ನು ಇಂದು ಗೆದ್ದರೂ ಸೋತರೂ ಕರ್ನಾಟಕ ಬುಲ್ಡೋಜರ್ಸ್ ತಂಡ ಸೆಮಿಫೈನಲ್‌ನ್ನು ಪ್ರವೇಶಿಸಲಿದೆ.

ಇನ್ನು ಪಂಜಾಬ್ ಪರ ನಾಯಕ ಹಾರ್ಡಿ ಸಂಧು ಹೊರತು ಪಡಿಸಿದರೆ ಬೇರೆ ಯಾರಲ್ಲಿಯೂ ಬ್ಯಾಟ್ ಬೀಸುವ ಉತ್ಸಾಹ ಕಾಣುತ್ತಿಲ್ಲ. ಬೌಲಿಂಗ್ ಕೂಡ ಅಷ್ಟಕಷ್ಟೇ. ಹೀಗಾಗಿಯೇ ಇಂದು ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಪಂಜಾಬ್ ತಂಡವನ್ನು ಅನಾಯಾಸವಾಗಿ ಮಣಿಸಲಿದೆ ಎನ್ನುವ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ತಂಡಗಳ ಮಾಹಿತಿ

ಕರ್ನಾಟಕ ಬುಲ್ಡೋಜರ್ಸ್: ಸುದೀಪ್ (ನಾಯಕ), ರಾಜೀವ್ ಹನು, ಡಾರ್ಲಿಂಗ್ ಕೃಷ್ಣ, ಜಯರಾಮ್ ಕಾರ್ತಿಕ್, ಗೋಲ್ಡನ್ ಸ್ಟಾರ್ ಗಣೇಶ್, ಮಂಜುನಾಥ್ ಗೌಡ, ಕರಣ್ ಆರ್ಯನ್,ಸುನೀಲ್ ರಾವ್, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ಅನೂಪ್ ಭಂಡಾರಿ.

ಪಂಜಾಬ್ ದಿ ಶೇರ್: ಹಾರ್ಡಿ ಸಂಧು (ನಾಯಕ), ಮಯೂರ್ ಮೆಹ್ತಾ, ಅನುಜ್ ಖುರಾನ, ರಾಹುಲ್ ಜೈಟ್ಲಿ, ನಿಂಜಾ, ದಕ್ಷ್ ಸಿಂಗ್, ಬಬ್ಬಲ್ ರಾಜ್, ಸುಯ್ಯಶ್ ರೈ, ರೌನಕ್ ಭಿಂದರ್, ಜಸ್ಸೀ ಗಿಲ್, ಕರಣ ವಾಹಿ.

More from Filmibeat

Read more about: ccl 2025 cricket filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X