CCL 2026 ; ಡಾರ್ಲಿಗ್ ಕೃಷ್ಣ, ರಾಜೀವ್ ಸಿಡಿಲಬ್ಬರದ ಅರ್ಧಶತಕ -ಭೋಜ್‌ಪುರಿ ತಂಡದ ವಿರುದ್ಧ ಗೆದ್ದ ಕಿಚ್ಚನ ಪಡೆ
ಸಿಸಿಎಲ್ 12ನೇ (CCL 2026) ಸೀಸನ್ ಕಳೆದ ಜನವರಿ 16ರಿಂದ ಅದ್ಧೂರಿಯಾಗಿ ಆರಂಭ ಆಗಿದೆ. ಈಗಾಗಲೇ ''ಕರ್ನಾಟಕ ಬುಲ್ದೋಜರ್ಸ್'' ತಂಡ ಸೆಮಿಫೈನಲ್ ಪ್ರವೇಶ ಮಾಡಿದ್ದು ಇಂದು ಕೋಯಂಬತ್ತೂರಿನ ಶ್ರೀ ರಾಮಕೃಷ್ಣ ಕಲಾ ಮತ್ತು ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಿಚ್ಚನ ಪಡೆ ಭೋಜ್‌ಪುರಿ ದಬಾಂಗ್ಸ್ ತಂಡವನ್ನು ಮಣಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಿಚ್ಚ ಸುದೀಪ್ ಇಂದು ಡಾರ್ಲಿಂಗ್ ಕೃಷ್ಣ ಜೊತೆ ಆರಂಭಿಕರಾಗಿ ಕಣಕ್ಕಿಳಿದರು.
ಪವರ್ ಪ್ಲೇನಲ್ಲಿ ಸುದೀಪ್ ಮತ್ತು ಕೃಷ್ಣ ಸಮಯೋಚಿತವಾದ ಬ್ಯಾಟಿಂಗ್ ಆಡಿದರು. ಪಂದ್ಯದ 3ನೇ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದ ಡಾರ್ಲಿಂಗ್ ಕೃಷ್ಣ ಆಕರ್ಷಕ ಅರ್ಧ ಶತಕ ಸಿಡಿಸಿದರು. ಆ ನಂತರ 53 ರನ್ ಗಳಿಸಿ ರಾಹುಲ್‌ಗೆ ವಿಕಟ್ ಒಪ್ಪಿಸಿದರು.
ಡಾರ್ಲಿಂಗ್ ಕೃಷ್ಣ ನಂತರ ಕಣಕ್ಕಿಳಿದ ಕಳೆದ ಪಂದ್ಯದ ಶತಕ ವೀರ ರಾಜೀವ್ ಭೋಜ್‌ಫುರಿ ದಂಬಾಗ್ಸ್ ಬೌಲರ್‌ಗಳನ್ನು ದಂಡಿಸಿದರು. ಮತ್ತೊಂದು ಕಡೆ 26 ರನ್ ಗಳಿಸಿ ಕ್ರೀಸ್‌ಗೆ ಅಂಟಿಕೊಂಡಿದ್ದ ಕಿಚ್ಚ ಸುದೀಪ್ ಸಿಕ್ಸ್ ಹೊಡೆಯುವ ಭರದಲ್ಲಿ ಬೋಲ್ಡ್ ಆದರು.
ಸುದೀಪ್ ನಿರ್ಗಮನದ ನಂತರ 14ನೇ ಓವರ್‌ನಲ್ಲಿ ರಾಜೀವ್ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಆ ನಂತರ 62 ರನ್‌ಗಳಿಸಿ ಆದಿತ್ಯಾಗೆ ವಿಕೆಟ್ ಒಪ್ಪಿಸಿದರು. 16 ಓವರ್‌ನಲ್ಲಿ 161 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಬುಲ್ದೋಜರ್ಸ್ ತಂಡ ಅಂತಿಮವಾಗಿ 20 ಓವರ್‌ನಲ್ಲಿ 9 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿತು.
203 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಭೋಜ್‌ಪುರಿ ದಬಾಂಗ್ಸ್ ತಂಡಕ್ಕೆ ಕರ್ನಾಟಕ ಬುಲ್ದೋಜರ್ಸ್ ತಂಡ ಆರಂಭಿಕ ಆಘಾತ ನೀಡಿತು. ನಾಯಕ ಮನೋಜ್ ತಿವಾರಿ ಅವರನ್ನು ಪೆವಿಲಿಯನ್‌ಗೆ ಕಳುಹಿಸಿತು. ಆ ನಂತರ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಅನ್ಶುಮನ್ ಕೂಡ ಮನೋಜ್ ತಿವಾರಿ ಹಿಂದೆಯೇ ಪೆವಿಲಿಯನ್ ಸೇರಿದರು.
ಭೋಜ್‌ಪುರಿ ದಬಾಂಗ್ಸ್ ತಂಡದ ಸ್ಟಾರ್ ಆಟಗಾರ ಟೈಗರ್ ಅವರ ಮೇಲೆ ಎಲ್ಲರ ನಿರೀಕ್ಷೆ ಇತ್ತು. ಆದರೆ ಟೈಗರ್ ಕೂಡ ನಿರಾಸೆ ಮೂಡಿಸಿದರು. 7 ರನ್ ಗಳಿಸಿ ಕಾರ್ತಿಕ್‌ಗೆ ವಿಕೆಟ್ ಒಪ್ಪಿಸಿದರು.

ಹೀಗೆ ಕೇವಲ 2 ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು 19 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದ್ದ ಭೋಜ್‌ಪುರಿ ದಬಾಂಗ್ಸ್ ತಂಡಕ್ಕೆ ಆದಿತ್ಯ ಅಜಯ್ ಆಸರೆಯಾಗುವ ಪ್ರಯತ್ನವನ್ನು ಮಾಡಿದರು. ಒಂದರ ಹಿಂದೆ ಮತ್ತೊಂದು ಬೌಂಡರಿಗಳನ್ನು ಕೂಡ ಹೊಡೆದರು. ಆದರೆ ಮಂಜುನಾಥ್ ಇವರ ಅಬ್ಬರಕ್ಕೆ ಬ್ರೇಕ್ ಹಾಕಿದರು. 22 ಬಾಲ್‌ಗಳಲ್ಲಿ 34 ರನ್ ಗಳಿಸಿದ್ದ ಆದಿತ್ಯ ಅವರ ವಿಕೆಟ್ ಪಡೆದರು.
ಆ ನಂತರ ಉದಯ್ ತಿವಾರಿ ತಂಡಕ್ಕೆ ಆಸರೆಯಾಗುವ ಪ್ರಯತ್ನ ಮಾಡಿದರಾದರೂ ಕೂಡ ಮಂಜುನಾಥ್ ಇವರನ್ನು ಕೂಡ ತಮ್ಮ ಬಲೆಗೆ ಕೆಡವಿದರು. 26 ಬಾಲ್‌ಗಳಲ್ಲಿ 36 ರನ್ ಗಳಿಸಿ ಮಂಜುನಾಥ್ ಔಟ್ ಆದರು. ಹೀಗೆ 15 ಓವರ್‌ಗಳಲ್ಲಿ 129 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡ ಭೋಜ್‌ಫುರಿ ದಬಾಂಗ್ಸ್ ತಂಡಕ್ಕೆ ಕೊನೆಯ 18 ಬಾಲ್‌ಗಳಲ್ಲಿ ಗೆಲ್ಲಲು 47 ರನ್‌ಗಳ ಅವಶ್ಯಕತೆ ಇತ್ತು. ಈ ಸಮಯದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದ ಮನಮೋಹನ್ ಮತ್ತು ಸುಧೀರ್ ಕುಮಾರ್ ಸಿಂಗ್ ಅಅವರ ವಿಕೆಟ್‌ನ್ನು ಕರಣ್ ಉರುಳಿಸಿದರು. ಆದರೆ 17 ರನ್‌ಗಳನ್ನು ತಮ್ಮ ಈ ಓವರ್‌ನಲ್ಲಿ ನೀಡಿದರು. ಪರಿಣಾಮ ಕೊನೆಯ ಓವರ್‌ನಲ್ಲಿ ಗೆಲ್ಲಲು 26 ರನ್‌ಗಳ ಅವಶ್ಯಕತೆ ಭೋಜ್‌ಪುರಿ ತಂಡಕ್ಕಿತ್ತು. ಅಂತಿಮವಾಗಿ 184ರನ್‌ಗಳಿಗೆ ಭೋಜ್‌ಫುರಿ ದಬಾಂಗ್ಸ್ ತಂಡ ಆಲ್‌ಔಟ್ ಆಯ್ತು.


Click it and Unblock the Notifications











