CCL 2026: ಸಿಸಿಎಲ್ ಪಾಯಿಂಟ್ಸ್ ಟೇಬಲ್; ಕರ್ನಾಟಕ ಬುಲ್ಡೋಜರ್ಸ್ ಯಾವ ಸ್ಥಾನದಲ್ಲಿದೆ?
ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಹೊಸ ಸೀಸನ್ ಆರಂಭವಾಗಿದೆ. ವೀಕೆಂಡ್‌ಗಳಲ್ಲಿ 8 ಸಿನಿಮಾ ಕಲಾವಿದರು, ತಂತ್ರಜ್ಞರ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ. ಫಸ್ಟ್ ವೀಕೆಂಡ್‌ನಲ್ಲಿ ಒಟ್ಟು 6 ಪಂದ್ಯಗಳು ನಡೆದಿದೆ. ವೈಜಾಗ್‌ನಲ್ಲಿ ಸರಣಿಯ ಆರಂಭದ ಪಂದ್ಯಗಳು ನಡೆದವು.
ಬಣ್ಣ ಹಚ್ಚಿ ನಟಿಸುವ ಕಲಾವಿದರು ಪ್ಯಾಡು, ಗ್ಲೌಸು ಧರಿಸಿ ಕ್ರಿಕೆಟ್ ಮೈದಾನಕ್ಕೆ ಇಳಿದಿದ್ದಾರೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಮತ್ತೊಮ್ಮೆ ಸರಣಿಯಲ್ಲಿ ಭಾಗಿ ಆಗಿದೆ. ಈಗಾಗಲೇ 2 ಬಾರಿ ಕಿಚ್ಚನ ಪಡೆ ಟ್ರೋಫಿ ಎತ್ತಿ ಹಿಡಿದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಸಾಧ್ಯವಾಗಲಿಲ್ಲ. ಈ ಬಾರಿ ಟ್ರೋಫಿ ಮೇಲೆ ತಂಡ ಕಣ್ಣಿಟ್ಟಿದೆ.

ಕಳೆದ ಶುಕ್ರವಾರ(ಜನವರಿ 16) ನಡೆದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಂಜಾಬ್ ದೆ ಶೇರ್ ತಂಡವನ್ನು ಕರ್ನಾಟಕ ಬುಲ್ಡೊಜರ್ಸ್ ತಂಡ ಎದುರಿಸಿತ್ತು. ಮೊದಲ ಪಂದ್ಯದಲ್ಲಿ ಕಿಚ್ಚಿನ ಹುಡುಗರು ಗೆಲುವಿನ ನಗೆ ಬೀರಿದ್ದರು. ಟಿ-20 ಮಾದರಿಯಲ್ಲಿ ಪಂದ್ಯಗಳು ನಡೆಯುತ್ತಿವೆ. ಬಿಗ್‌ಬಾಸ್ ಫಿನಾಲೆ ಶೋ ನಿರೂಪಣೆ ನಡುವೆಯೂ ಸುದೀಪ್ ಮೈದಾನಕ್ಕಿಳಿದು ಆಟ ಆಡಿದ್ದರು.
ಸರಣಿಯಲ್ಲಿ ಒಟ್ಟು 6 ಪಂದ್ಯಗಳು ನಡೆದಿದ್ದರೂ ಕರ್ನಾಟಕ ಬುಲ್ಡೋಜರ್ಸ್ ತಂಡ ಒಂದು ಪಂದ್ಯ ಮಾತ್ರ ಆಡಿದೆ. ಇನ್ನುಳಿದಂತೆ ಬೆಂಗಾಲ್ ಟೈಗರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಿದ್ದು ಇನ್ನುಳಿದ ತಂಡಗಳು ಒಂದೊಂದು ಪಂದ್ಯ ಆಡಿದಂತಾಗಿದೆ. ಬೆಂಗಾಲ್ ಟೈಗರ್ಸ್ ಆಡಿದ ಎರಡು ಪಂದ್ಯಗಳನ್ನು ಗೆದ್ದು 4 ಅಂಗಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
| Pos | Team | PL | W | L | NR | PTS | NRR |
|---|---|---|---|---|---|---|---|
| 1 | Bengal Tigers | 2 | 2 | 0 | 0 | 4 | +0.306 |
| 2 | Bhojpuri Dabanggs | 1 | 1 | 0 | 0 | 2 | +2.050 |
| 3 | Karnataka Bulldozers | 1 | 1 | 0 | 0 | 2 | +1.550 |
| 4 | Kerala Strikers | 1 | 1 | 0 | 0 | 2 | +0.398 |
| 5 | Telugu Warriors | 2 | 1 | 1 | 0 | 2 | +0.275 |
| 6 | Vels Chennai Kings | 1 | 0 | 1 | 0 | 0 | 0.000 |
| 7 | Mumbai Heroes | 2 | 0 | 2 | 0 | 0 | -0.517 |
| 8 | Punjab De Sher | 2 | 0 | 2 | 0 | 0 | -1.775 |
ಒಂದು ಪಂದ್ಯ ಗೆದ್ದು ಒಂದು ಪಂದ್ಯದಲ್ಲಿ ಸೋತಿರುವ ತೆಲುಗು ವಾರಿಯರ್ಸ್ 2 ಅಂಕ ಪಡೆದು 5ನೇ ಸ್ಥಾನದಲ್ಲಿದೆ. ಒಂದು ಪಂದ್ಯ ಆಡಿ ಗೆದ್ದು ಭೋಜ್‌ಪುರಿ ದಬಾಂಗ್ಸ್ ತಂಡ 2ನೇ ಸ್ಥಾನದಲ್ಲಿದ್ದು 2 ಅಂಕ ಗಳಿಸಿರುವ ಕರ್ನಾಟಕ ಬುಲ್ಡೋಜರ್ಸ್ 3ನೇ ಸ್ಥಾನದಲ್ಲಿದೆ. ಕೇರಳ ಸ್ಟೈಕರ್ಸ್ ಹಾಗೂ ಚೆನ್ನೈ ಕಿಂಗ್ಸ್ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿವೆ. ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ಮುಂಬೈ ಹೀರೊಸ್ ಹಾಗೂ ಪಂಜಾಬ್ ದೇ ಶೇರ್ ತಂಡಗಳು ಕೊನೆಯ ಸ್ಥಾನದಲ್ಲಿವೆ.
ಕಳೆದ ಸೀಸನ್‌ನಲ್ಲಿ ಅಚ್ಚರಿ ಎನ್ನುವಂತೆ ಆಡಿ ಟ್ರೋಫಿ ಗೆದ್ದಿದ್ದ ಪಂಜಾಬ್ ತಂಡ ಕೊನೆಯ ಸ್ಥಾನದಲ್ಲಿರುವುದು ವಿಪರ್ಯಾಸ. ಈ ಶುಕ್ರವಾರ(ಜನವರಿ 23) ನಡೆಯುವ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಕರ್ನಾಟಕ ಬುಲ್ಡೋಜರ್ಸ್ ಎದುರಿಸಲಿದ್ದಾರೆ. ಭಾನುವಾರ ಭೋಜ್‌ಪುರಿ ದಬಾಂಗ್ಸ್ ಎದುರು ಕಿಚ್ಚನ ಪಡೆ ಸರಣಿಯ 3ನೇ ಪಂದ್ಯ ಆಡಲಿದೆ.
ಕಳೆದ ವೀಕೆಂಡ್ ವೈಜಾಗ್‌ನಲ್ಲಿ ಪಂದ್ಯಗಳು ನಡೆದಿದ್ದವು. ಆದರೆ ಈ ವೀಕೆಂಡ್ ಮಧುರೈನಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಸೆಮಿ ಫೈನಲ್ ಪಂದ್ಯಗಳು ಹಾಗೂ ಫೈನಲ್ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದೆ. ಆಡಿದ 2 ಪಂದ್ಯ ಸೋತಿರುವ ಹಾಲಿ ಚಾಂಪಿಯನ್ ಪಂಜಾಬ್ ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ.
ಪಂಜಾಬ್ ವಿರುದ್ಧ ಕರ್ನಾಟಕ ತಂಡ 31 ರನ್‌ಗಳ ಗೆಲುವು ಸಾಧಿಸಿತ್ತು. ಕರಣ್ ಆರ್ಯನ್ ಅದ್ಭುತ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 170 ರನ್ ಗಳಿಸಿ ಬುಲ್ಡೋಜರ್ಸ್ ಸವಾಲು ಹಾಕಿದ್ದರು. ಈ ಸಾಧಾರಣ ಗುರಿ ಬೆನ್ನಟ್ಟಿದ ಪಂಜಬ್ ತಂಡ 139 ರನ್‌ಗಳಿಗೆ ಆಲ್‌ಔಟ್ ಆಗಿ ಸೋಲೊಪ್ಪಿಕೊಂಡಿತ್ತು. ಕರ್ನಾಟಕ ತಂಡ ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ತೆಲುಗು ವಾರಿಯರ್ಸ್ ತಂಡದ ನಾಯಕ ಅಖಿಲ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಇತ್ತೀಚೆಗೆ ಸದ್ದು ಮಾಡಿದ್ದರು.


Click it and Unblock the Notifications











