CCL 2026 Semifinal: ಕರ್ನಾಟಕ vs ತಮಿಳುನಾಡು ಕಾದಾಟ: ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಯಾರು ಬಲಾಢ್ಯ?

ಸಿಸಿಎಲ್ ಸೀಸನ್ 12 ಅಂತಿಮ ಘಟ್ಟದತ್ತ ಸಾಗಿದೆ. ಈಗಾಗಲೇ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. 4 ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಆಡಿದ 3 ಪಂದ್ಯ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮೊದಲ ಸ್ಥಾನದಲ್ಲಿದೆ. ಒಂದು ಪಂದ್ಯ ಗೆದ್ದು ಅದೃಷ್ಟದಿಂದ ಸೆಮಿಫೈನರ್ ಹಂತಕ್ಕೆ ಚೆನ್ನೈ ಕಿಂಗ್ಸ್ ತಂಡ ಎಂಟ್ರಿಯಾಗಿದೆ. ಎರಡೂ ತಂಡಗಳು ಸೆಮಿಫೈನಲ್ ಪಂದ್ಯದಲ್ಲಿ ಎದಿರುಬದಿರಾಗುತ್ತಿವೆ.

ನಾಳೆ(ಜನವರಿ 31) ಕೊಯಂಬತ್ತೂರಿನಲ್ಲಿ ಸುದೀಪ್ ಪಡೆ, ವಿಕ್ರಾಂತ್ ನೇತೃತ್ವದ ಚೆನ್ನೈ ತಂಡದ ವಿರುದ್ಧ ಅಖಾಡಕ್ಕೆ ಇಳಿಯಲಿದೆ. ಕಳೆದ ವರ್ಷ ಮೈಸೂರಿನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೂ ವಿರುದ್ಧವೇ ಕರ್ನಾಟಕ ಬುಲ್ಡೋಜರ್ಸ್ ತಂಡ ಸೋಲುಂಡು ಟೂರ್ನಿಯಿಂದ ಹೊರಬಿದ್ದಿತ್ತು. ಆ ಸೋಲಿಗೆ ತಮಿಳುನಾಡಿನಲ್ಲೇ ಸೇಡು ತೀರಿಸಿಕೊಳ್ಳಲು ಕಿಚ್ಚನ ಪಡೆ ಸಜ್ಜಾಗಿದೆ. ತಂಡ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಈ ಹಿಂದಿನ ಸೀಸನ್‌ಗಳಲ್ಲಿ ಕರ್ನಾಟಕ ಹಾಗೂ ಚೆನ್ನೈ ತಂಡಗಳು ಆಡಿದ ಪಂದ್ಯಗಳ ಫಲಿತಾಂಶ ಏನಾಗಿತ್ತು. ದಾಖಲೆಗಳ ಲೆಕ್ಕಾಚಾರದಲ್ಲಿ ಯಾರು ಬೆಸ್ಟ್ ಬನ್ನಿ ನೋಡೋಣ.

CCL 2026 Semi-Final Karnataka vs Chennai Head-to-Head Rivalry Takes Center Stage

ಚೆನ್ನೈ ರೈನೋಸ್ ಹೆಸರಿನಲ್ಲಿ ತಮಿಳು ಕಲಾವಿದರು ಹಾಗೂ ತಂತ್ರಜ್ಞರು ತಂಡವಾಗಿ ಸಿಸಿಎಲ್ ಟೂರ್ನಿಗಳಲ್ಲಿ ಆಡುತ್ತಾ ಬಂದಿದ್ದರು. ಈ ಬಾರಿ 'ವೇಲ್ಸ್ ಚೆನ್ನೈ ಕಿಂಗ್ಸ್' ಎಂದು ತಂಡದ ಹೆಸರು ಬದಲಾಗಿದೆ. ಈ ಹಿಂದಿನ 11 ಸೀಸನ್‌ಗಳಲ್ಲಿ ಹಲವು ಬಾರಿ ಚೆನ್ನೈ ವಿರುದ್ಧ ಸುದೀಪ್ ಪಡೆ ಮೈದಾನಕ್ಕೆ ಇಳಿದಿತ್ತು.

2011

ಸಿನಿಮಾ ಪೈರಸಿ ವಿರುದ್ಧ ಅಭಿಯಾನ ಮಾಡಲು ಸಿಸಿಎಲ್ ಕ್ರಿಕೆಟ್ ಟೂರ್ನಿ ಆರಂಭಿಸಲಾಯಿತು. 4 ತಂಡಗಳು ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದವು. ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧವೇ ಕಿಚ್ಚನ ಪಡೆ ಸೋಲುವಂತಾಗಿತ್ತು.

CCL 2026 Semi-Final Karnataka vs Chennai Head-to-Head Rivalry Takes Center Stage

2012

ಸಿಸಿಎಲ್ 2ನೇ ಸೀಸನ್‌ನಲ್ಲಿ 4 ತಂಡಗಳ ಜೊತೆಗೆ ಕೇರಳ ಸ್ಟೈಕರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ತಂಡಗಳು ಸೇರಿಕೊಂಡವು. ಲೀಗ್ ಹಂತದಲ್ಲಿ ಚೆನ್ನೈ ವಿರುದ್ಧ ಸೋತಿದ್ದ ಬುಲ್ಡೋಜರ್ಸ್ ತಂಡ ಫೈನಲ್‌ನಲ್ಲಿ ಕೂಡ ಮುಗ್ಗರಿಸಿತ್ತು. ಕೇವಲ 1 ರನ್‌ನಿಂದ ಟ್ರೋಫಿ ಕಳೆದುಕೊಳ್ಳುವಂತಾಗಿತ್ತು. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆದಿತ್ತು.

2013

ಸದಾ ಕ್ಯಾಮರಾ, ಆಕ್ಷನ್ ಕಟ್ ಎನ್ನುವ ಸಿನಿಮಾ ಕಲಾವಿದರು, ತಂತ್ರಜ್ಞರು ಸಿಸಿಎಲ್ ಟೂರ್ನಿಯಲ್ಲಿ ಒಟ್ಟಾಗಿ ಕ್ರಿಕೆಟ್ ಆಡುತ್ತಾ ಬರ್ತಿದ್ದಾರೆ. ಸುದೀಪ್ 12 ಸೀಸನ್‌ಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಜೊತೆಗಿದ್ದಾರೆ. 3ನೇ ಸೀಸನ್‌ನಲ್ಲಿ ಮಳೆಯ ಕಾರಣಕ್ಕೆ ಚೆನ್ನೈ ವಿರುದ್ಧ ಬುಲ್ಡೋಜರ್ಸ್ ಪಂದ್ಯ ರದ್ದಾಗಿತ್ತು.

2014

ಪಂದ್ಯ ಟೈ ಆಗಿಬಿಟ್ಟರೆ ಈಗ ಸೂಪರ್ ಓವರ್ ಆಡಿಸಲಾಗುತ್ತದೆ. ಆದರೆ ಕೆಲ ವರ್ಷಗಳ ಹಿಂದೆ ಈ ರೀತಿ ಇರಲಿಲ್ಲ. 2014ರಲ್ಲಿ ಚೆನ್ನೈ vs ಬುಲ್ಡೋಜರ್ಸ್ ನಡುವಿನ ಪಂದ್ಯ ಟೈ ಆಗಿತ್ತು. ಎರಡೂ ತಂಡಗಳು 193 ರನ್ ಗಳಿಸಿದ್ದವು.

2015

4ನೇ ಸೀಸನ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಸೆಮಿಫೈನಲ್‌ನಲ್ಲಿ ಚೆನ್ನೈ ತಂಡವನ್ನು ಎದುರಿಸಿತ್ತು. ಕಿಚ್ಚನ ಪಡೆ ನೀಡಿದ 159 ರನ್ ಗುರಿಯನ್ನು ಚೆನ್ನೈ ಪಡೆ ಸುಲಭವಾಗಿ ಮುಟ್ಟಿತ್ತು.

2016

ಪ್ರತಿ ವರ್ಷ ಸಿಸಿಎಲ್ ಟೂರ್ನಿ ನಡೆಯುತ್ತಿದೆ. ಕೊವಿಡ್ ಸಮಯದಲ್ಲಿ ವ್ಯತ್ಯಾಸವಾಗಿತ್ತು. 2016ರಲ್ಲಿ ಲೀಗ್ ಹಂತದಲ್ಲೇ ಚೆನ್ನೈ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದು ಬೀಗಿತ್ತು. ಆದರೆ ಫೈನಲ್‌ನಲ್ಲಿ ತೆಲುಗು ವಾರಿಯರ್ಸ್ ಎದುರು ಕಿಚ್ಚನ ಪಡೆ ಸೋತಿತ್ತು.

2023

ಕಾರಣಾಂತರಗಳಿಂದ ಕೆಲವೊಮ್ಮೆ ಚೆನ್ನೈ, ಕರ್ನಾಟಕ ತಂಡಗಳು ಟೂರ್ನಿಯಲ್ಲಿ ಪಂದ್ಯಗಳನ್ನು ಆಡಿಲ್ಲ. ಕೋವಿಡ್ ಬಳಿಕ 2023ರಲ್ಲಿ ಮತ್ತೆ ಸಿಸಿಎಲ್ ಟೂರ್ನಿ ಜರುಗಿತ್ತು. ಟಿ-20 ಬದಲು 10 ಓವರ್‌ಗಳ 4 ಇನ್ನಿಂಗ್ಸ್ ಫಾರ್ಮೆಟ್‌ನಲ್ಲಿ ಪಂದ್ಯಗಳು ನಡೆದಿದ್ದವು. ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಕಿಚ್ಚನ ಪಡೆ ಗೆದ್ದಿತ್ತು.

2024

ಲೀಗ್ ಹಂತದಲ್ಲೇ ಚೆನ್ನೈ ವಿರುದ್ಧ ಬುಲ್ಡೋಜರ್ಸ್ ತಂಡ ಗೆಲುವಿನ ನಗೆ ಬೀರಿತ್ತು. ಆದರೆ ಫೈನಲ್‌ನಲ್ಲಿ ಬೆಂಗಾಲ್ ಟೈಗರ್ಸ್ ಎದುರು ಸೋಲುವಂತಾಗಿತ್ತು.

2025

ಕಳೆದ ವರ್ಷ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ಅಬ್ಬರಿಸಿತ್ತು. ಆದರೆ ಸೆಮಿಫೈನಲ್‌ನಲ್ಲಿ ಸೋಲುವಂತಾಗಿತ್ತು. ಈ ಬಾರಿ ಲೀಗ್ ಹಂತದಲ್ಲಿ ಎರಡೂ ತಂಡಗಳು ಮುಖಾಮುಖಿ ಆಗಲಿಲ್ಲ. ಆದರೆ ಸೆಮಿಫೈನಲ್ ಕಾದಾಟಕ್ಕೆ ಸಜ್ಜಾಗಿವೆ.

More from Filmibeat

Read more about: ccl ccl 2026 sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X