ದಾಂಪತ್ಯ ಜೀವನಕ್ಕೆ ಸಜ್ಜಾದ ಸಿಸಿಎಲ್ ಆಟಗಾರ ರಾಜೀವ್, ನಿಶ್ಚಿತಾರ್ಥ ಆಯ್ತು.!

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಟೂರ್ನಿಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಆಟಗಾರ ಹಾಗೂ ನಟ ರಾಜೀವ್. ಕರ್ನಾಟಕ ಬುಲ್ಡೋಜರ್ಸ್ ತಂಡದ ಪರವಾಗಿ, ಕಿಚ್ಚ ಸುದೀಪ್ ನೇತೃತ್ವದಲ್ಲಿ ಕ್ರಿಕೆಟ್ ಆಡುತ್ತಿದ್ದ ರಾಜೀವ್ ಸಿನಿಮಾಗಿಂತ ಕ್ರಿಕೆಟ್ ನಲ್ಲೇ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು.

ಈ ರಾಜೀವ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹೌದು, ಇಷ್ಟು ದಿನ ಬ್ಯಾಚುಲರ್ ಜೀವನವನ್ನ ಎಂಜಾಯ್ ಮಾಡ್ತಿದ್ದ ಸ್ಟಾರ್ ಆಟಗಾರ ಈಗ ನೂತನ ಜೀವನಕ್ಕೆ ಅಣಿಯಾಗುತ್ತಿದ್ದಾರೆ.

ಹೌದು, ಬೆಂಗಳೂರು ಮೂಲದ ರೇಷ್ಮಾ ಎಂಬುವರ ಜೊತೆ ರಾಜೀವ್ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸ್ಯಾಂಡಲ್ ವುಡ್ ಇಂಡಸ್ಟ್ರಿಯ ತಾರೆಯರು ವಿಶ್ ಮಾಡಿದ್ದಾರೆ. ಹಾಗಿದ್ರೆ, ರಾಜೀವ್ ಎಂಗೇಜ್ ಮೆಂಟ್ ಕಾರ್ಯಕ್ರಮ ಎಲ್ಲಿ ನಡೆಯಿತು.? ಯಾರೆಲ್ಲಾ ಭಾಗವಹಿಸಿದ್ದರು.? ಚಿತ್ರಗಳ ಸಮೇತ ಮುಂದೆ ಓದಿ.....

ವಿಶ್ ಮಾಡಿದ ಪ್ರಿಯಾ ಸುದೀಪ್.!

ವಿಶ್ ಮಾಡಿದ ಪ್ರಿಯಾ ಸುದೀಪ್.!

ರಾಜೀವ್ ಅವರ ಚಿತ್ರಗಳಿಗೆ ಮತ್ತು ವೃತ್ತಿ ಜೀವನದಲ್ಲಿ ಸದಾ ಬೆಂಬಲವಾಗಿ ನಿಂತಿರುವ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರು, ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿ ನವಜೋಡಿಗಳಿಗೆ ಶುಭಹಾರೈಸಿದ್ದಾರೆ.

ಶುಭಕೋರಿದ ಸುದೀಪ್

ಶುಭಕೋರಿದ ಸುದೀಪ್

ಬಹುಶಃ ಸುದೀಪ್ ಅವರು ಬೆಂಗಳೂರಿನಲ್ಲಿ ಇದ್ದಿದ್ರೆ ರಾಜೀವ್ ಎಂಗೇಜ್ ಮೆಂಟ್ ಕಾರ್ಯಕ್ರಮಕ್ಕೆ ಹೋಗ್ತಿದ್ದರು. ಆದ್ರೆ, ಪೈಲ್ವಾನ್ ಚಿತ್ರದ ಶೂಟಿಂಗ್ ಕಾರಣ ಹೈದರಬಾದ್ ನಲ್ಲಿದ್ದಾರೆ. ಹೀಗಾಗಿ, ಟ್ವಿಟ್ಟರ್ ಮೂಲಕವೇ ರಾಜೀವ್ ಗೆ ಶುಭಕೋರಿದ್ದಾರೆ.

ಪ್ರದೀಪ್ ಭಾಗಿ

ಪ್ರದೀಪ್ ಭಾಗಿ

ರಾಜೀವ್ ಅವರ ಆಪ್ತ ಸ್ನೇಹಿತರ ಪೈಕಿ ಪ್ರದೀಪ್ ಪ್ರಮುಖರು. ಸುದೀಪ್ ಅವರ ಆಪ್ತ ವಲಯದಲ್ಲಿ ಇವರಿಬ್ಬರು ಕಾಣಿಸಿಕೊಂಡಿದ್ದು, ಒಟ್ಟಿಗೆ ಸಿಸಿಎಲ್ ಲೀಗ್ ನಲ್ಲಿ ಒಂದೇ ತಂಡವನ್ನ ಪ್ರತಿನಿಧಿಸುತ್ತಾರೆ. ಇಂತಹ ಗೆಳೆಯನ ನಿಶ್ಚಿತಾರ್ಥಕ್ಕೆ ಕಾರ್ಯಕ್ರಮಕ್ಕೆ ಪ್ರದೀಪ್ ಆಗಮಿಸಿ ವಿಶ್ ಮಾಡಿದ್ದಾರೆ.

ಕಿರುತೆರೆ ನಟ ಜಗನ್

ಕಿರುತೆರೆ ನಟ ಜಗನ್

ಕಿರುತೆರೆಯ ಖ್ಯಾತ ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ ಕೂಡ ರಾಜೀವ್ ಅವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಯಾರು ಈ ರೇಷ್ಮಾ.?

ಯಾರು ಈ ರೇಷ್ಮಾ.?

ರಾಜೀವ್ ಮದುವೆಯಾಗಲಿರುವ ರೇಷ್ಮಾ ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಬೆಂಗಳೂರಿನ ಮೂಲದವರಾಗಿದ್ದು, ದಯಾನಂದ ಸಾಗರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಇವರಿಬ್ಬರ ಎಂಗೇಜ್ ಮೆಂಟ್ ಕಾರ್ಯಕ್ರಮ ಬೆಂಗಳೂರಿನ ಪೈವಿಸ್ತಾ ಕನ್ವೆಂಷನ್ ಹಾಲ್ ನಲ್ಲಿ ಜರುಗಿದೆ. ಸದ್ಯಕ್ಕೆ ಮದುವೆ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.

ರಾಜೀವ್ ಬಗ್ಗೆ....

ರಾಜೀವ್ ಬಗ್ಗೆ....

ರಾಜೀವ್ ಕನ್ನಡ ಸಿನಿಮಾಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದಾರೆ. 'ಉಸಿರೇ ಉಸಿರೇ' ಎಂಬ ಚಿತ್ರದಲ್ಲಿ ನಾಯಕನಾಗಿಯೂ ಅಭಿನಯಿಸಿದ್ದರು. ಇನ್ನುಳಿದಂತೆ 'ಅಮವಾಸ್ಯೆ', 'ಆರ್ ಎಕ್ಸ್ ಸೂರಿ', 'ಬೆಂಗಳೂರು 560023', 'ಜಿಂದಗಿ' ಅಂತಹ ಚಿತ್ರಗಳಲ್ಲಿ ರಾಜೀವ್ ನಟಿಸಿದ್ದಾರೆ.

More from Filmibeat

English summary
Ccl player and kannada actor rajeev and reshma riddhima got engaged in bangalore on sunday (november 18th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X