CCL ಫೈನಲ್ ಪಂದ್ಯ ಯಾರು ಗೆದ್ರು? ಫಲಿತಾಂಶ ಏನಾಯ್ತು?
ಚಂಡೀಗಢದಲ್ಲಿ ನಡೆಯುತ್ತಿದ್ದ ಸಿಸಿಎಲ್ ಟಿ 10 ಲೀಗ್ ಫೈನಲ್ ಯಾರು ಗೆದ್ದರು ಎಂಬುದು ಬಹುತೇಕರಿಗೆ ಗೊತ್ತೇ ಆಗಲಿಲ್ಲ. ಸೆಮಿಫೈನಲ್ ಪ್ರವೇಶಿಸಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಬೋಜ್ ಪುರಿ ತಂಡದ ಎದುರು ಪಂದ್ಯ ಆಡಬೇಕಿತ್ತು.
ಆದ್ರೆ, ಮಳೆಯ ಕಾರಣದಿಂದ ಪಂದ್ಯ ಮುಂದೂಡಲಾಗಿದೆ. ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗಾಲೇ ಟೂರ್ನಿ ಮುಗಿಯಬೇಕಿತ್ತು. ಮಳೆರಾಯ ಅಡ್ಡಿಯಾದ ಕಾರಣ ಸೆಮಿಫೈನಲ್ ಮತ್ತು ಫೈನಲ್ ಪಂದ್ಯವನ್ನ ಮುಂದಿನ ವಾರಕ್ಕೆ ಮುಂದೂಡಲಾಗಿದೆ.
ಹೌದು, ಈಗಾಗಲೇ ವೇಳಾಪಟ್ಟಿಯಲ್ಲಿರುವಂತೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನ ಮಾರ್ಚ್ 10 ರಂದು ನಡೆಸಲಾಗುವುದು ಎಂದು ಸಿಸಿಎಲ್ ಆಯೋಜಕರು ತಿಳಿಸಿದ್ದಾರೆ.

ಭೋಜ್ ಪುರಿ ದಬಾಂಗ್ಸ್ ತಂಡದ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಸೆಮಿ ಫೈನಲ್ ಪಂದ್ಯ ಆಡಲಿದೆ. ಎರಡನೇ ಸೆಮಿ ಫೈನಲ್ ಮುಂಬೈ ಹೀರೋಸ್ ಮತ್ತು ಬೆಂಗಾಲ್ ಟೈಗರ್ಸ್ ತಂಡಗಳು ಫೈನಲ್ ಪ್ರವೇಶಕ್ಕಾಗಿ ಹಣಾಹಣಿ ನಡೆಸಲಿದೆ. ಈ ಎರಡು ಸೆಮಿಫೈನಲ್ ಪಂದ್ಯದಲ್ಲಿ ಗೆದ್ದವರು ಫೈನಲ್ ನಲ್ಲಿ ಮುಖಾಮುಖಿಯಾಗಲಿದ್ದಾರೆ.
More from Filmibeat
English summary
Karnataka bulldozers team enters to semi final in celebrity cricket league t10. unfortunately CCL semi finals and final is postponed to march 10.


Click it and Unblock the Notifications











