ಕೀರ್ತಿ ಗೌಡಗೆ ಚಪ್ಪಲಿ ಥಳಿತ: ಅಂದು ಸುಳ್ಳು ಹೇಳಿದ್ರಾ ನಾಗರತ್ನ.?

Recommended Video

ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಮಾಡಿದ ಮೊದಲ ಪತ್ನಿ ನಾಗರತ್ನ | FILMIBEAT KANNADA

ಸೈಲೆಂಟ್ ಆಗಿದ್ದ ದುನಿಯಾ ವಿಜಯ್ ಪತ್ನಿ ನಾಗರತ್ನ ಕಳೆದ ತಿಂಗಳು ಅಂದ್ರೆ ಸೆಪ್ಟೆಂಬರ್ 23 ರಂದು ದಿಢೀರ್ ಅಂತ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

''ಸುಮಾರು 9 ಗಂಟೆ ಸಮಯದಲ್ಲಿ ಕೀರ್ತಿಗೌಡ ಮತ್ತು ಅವರ ಜೊತೆ ಇಬ್ಬರು ಹುಡುಗರು ನನ್ನನ್ನು ಮನೆಯ ಒಳಗಡೆ ಬಿಡದೇ ಮಕ್ಕಳನ್ನು ಮಾತನಾಡಿಸದಂತೆ ತಡೆದು, ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ'' ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ನಾಗರತ್ನ ದೂರು ಕೊಟ್ಟರು.

ಇದೇ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಅಂದು ಮನೆಯಲ್ಲಿ ನಡೆದ ಗಲಾಟೆಯ ಸಿಸಿಟಿವಿ ವಿಡಿಯೋ ಫುಟೇಜ್ ಬಟಾಬಯಲಾಗಿದೆ. ಕೀರ್ತಿಗೌಡ ಮೇಲೆ ನಾಗರತ್ನ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಮುಂದೆ ಓದಿರಿ...

ಹಲ್ಲೆ ನಡೆಸಿದ್ದು ನಾಗರತ್ನ.!

ಹಲ್ಲೆ ನಡೆಸಿದ್ದು ನಾಗರತ್ನ.!

ಮನೆಯಲ್ಲಿ ಇದ್ದ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ನಡೆಸಿರುವುದು ನಾಗರತ್ನ. ಕೀರ್ತಿ ಗೌಡ ಮೇಲೆ ಚಪ್ಪಲಿಯಿಂದ ನಾಗರತ್ನ ಹಲ್ಲೆ ಮಾಡಿದ್ದಾರೆ. ಇದು ಇಂದು ಬಿಡುಗಡೆ ಆಗಿರುವ ಸಿಸಿಟಿವಿ ಫುಟೇಜ್ ನಲ್ಲಿ ಸೆರೆ ಆಗಿದೆ.

ಮಾಂಗಲ್ಯ ಸರ ಕಿತ್ತು ಹಾಕಿದ ನಾಗರತ್ನ

ಮಾಂಗಲ್ಯ ಸರ ಕಿತ್ತು ಹಾಕಿದ ನಾಗರತ್ನ

ಕೀರ್ತಿ ಗೌಡ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನ ಇದೇ ಗಲಾಟೆ ಸಂದರ್ಭದಲ್ಲಿ ನಾಗರತ್ನ ಕಿತ್ತು ಹಾಕಿದ್ದರಂತೆ. ಇದಕ್ಕೆ ಸಾಕ್ಷಿಯಾಗಿ ಕುತ್ತಿಗೆಯಲ್ಲಿ ಗಾಯದ ಗುರುತುಗಳಿವೆ ಎನ್ನುತ್ತಾರೆ ಕೀರ್ತಿ ಗೌಡ.

ನಾಗರತ್ನ ವಿರುದ್ಧ ದೂರು ಕೊಟ್ಟ ಕೀರ್ತಿ ಗೌಡ

ನಾಗರತ್ನ ವಿರುದ್ಧ ದೂರು ಕೊಟ್ಟ ಕೀರ್ತಿ ಗೌಡ

ಸೆಪ್ಟೆಂಬರ್ 23 ರಂದು ನಡೆದ ಹಲ್ಲೆ ವಿಚಾರವಾಗಿ ಅಕ್ಟೋಬರ್ 26 ರಂದು ಪೊಲೀಸ್ ಠಾಣೆಗೆ ಕೀರ್ತಿಗೌಡ ದೂರು ಕೊಟ್ಟಿದ್ದಾರೆ. ''ನನ್ನ ತಮ್ಮ ನಿನ್ನ ಕೊಚ್ಚಿ ಕೊಲೆ ಮಾಡಲು ಕಾಯುತ್ತಿದ್ದಾನೆ. ನಿನ್ನನ್ನ ಕೊಲೆ ಮಾಡಿಸಿಯೇ ತೀರುತ್ತೇನೆ ಎಂದು ನಾಗರತ್ನ ಬೆದರಿಕೆ ಹಾಕಿದ್ದಾರೆ'' ಎಂದು ದೂರಿನಲ್ಲಿ ಕೀರ್ತಿ ಗೌಡ ಉಲ್ಲೇಖಿಸಿದ್ದಾರೆ.

ಅಂದು ಸುಳ್ಳು ದೂರು ಕೊಟ್ಟಿದ್ರಾ ನಾಗರತ್ನ.?

ಅಂದು ಸುಳ್ಳು ದೂರು ಕೊಟ್ಟಿದ್ರಾ ನಾಗರತ್ನ.?

ತಾವೇ ಹಲ್ಲೆ ನಡೆಸಿ ಬಳಿಕ ಕೀರ್ತಿ ಗೌಡ ವಿರುದ್ಧ ನಾಗರತ್ನ ದೂರು ಕೊಟ್ರಾ.? ಮಾಧ್ಯಮಗಳ ಮುಂದೆ ಕೂತು ನಾಗರತ್ನ ಸುಳ್ಳು ಕಥೆ ಕಟ್ಟಿದ್ರಾ.? ಇದಕ್ಕೆ ಸ್ವತಃ ನಾಗರತ್ನ ಅವರೇ ಸ್ಪಷ್ಟ ಉತ್ತರ ಕೊಡಬೇಕು.

More from Filmibeat

English summary
CCTV Footage out: Nagaratna assaults Keerthi Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X