ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ; ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಅರ್ಧಕರ್ಧ ಪ್ರಪಂಚವೇ ಈಗ ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿದೆ. ಅಪರಾಧ ಪ್ರಕರಣಗಳು ಇದರಿಂದ ಕಮ್ಮಿ ಆಗುತ್ತಿದೆ. ಕೆಲ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಹುಡುಕಲು ಸಿಸಿಟಿವಿ ಫುಟೇಜ್ ಸಹಾಯಕ್ಕೆ ಬರ್ತಿದೆ. ಇದೀಗ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆ ಅಂಗಳದಲ್ಲಿ ಕಳ್ಳತನವಾಗಿದೆ. ಅದು ಮನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಳ್ಳರು ಏನೆಲ್ಲಾ ಹೇಗೆಲ್ಲಾ ಯಾವ ವೇಷದಲ್ಲಿ ಬಂದು ಕಳ್ಳತನ ಮಾಡುತ್ತಾರೆ ಎಂದು ಹೇಳುವುದು ಕಷ್ಟ. ತಮ್ಮ ಮನೆಯಲ್ಲಿ ನಡೆದ ಕಳ್ಳತನದ ಬಗ್ಗೆ ಸ್ವತಃ ರಿಕ್ಕಿ ಕೇಜ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಡೆಲಿವರಿ ಬಾಯ್ ಬಂದು ಮನೆಯಲ್ಲಿ ಕಳ್ಳತನ ಮಾಡಿದ್ದಾನೆ. ಆತ ಯಾರೆಂದು ಗುರ್ತಿಸಲು ಪೊಲೀಸರಿಗೆ ಸಹಕರಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

CCTV Footage Shows Imposters as Delivery Boys Stealing from Ricky Kej s House

ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಜೊಮ್ಯಾಟೊ ಅಥವಾ ಸ್ವಿಗ್ಗಿ ಡೆಲಿವರಿ ಬಾಯ್ ವೇಷದಲ್ಲಿ ಬಂದಿರುವ ಇಬ್ಬರು ರಿಕ್ಕಿ ಕೇಜ್ ಮನೆ ನೀರಿನ ಸಂಪ್ ಮೇಲಿನ ಮುಚ್ಚಳ ಕದ್ದಿದ್ದಾರೆ. ರಿಕ್ಕಿ ಕೇಜ್ ಪೋಸ್ಟ್ ಬಗ್ಗೆ ಜೊಮ್ಯಾಟೊ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರತಿಕ್ರಿಯಿಸಿದೆ.

ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಟ್ವೀಟ್ ಮಾಡಿ "ನಮ್ಮ ಮನೆಯಲ್ಲಿ ಕಳ್ಳತನವಾಗಿದೆ. ಜೊಮ್ಯಾಟೊ ನಿಮ್ಮ ಡೆಲಿವರಿ ಬಾಯ್ ಒಬ್ಬ ಗುರುವಾರ ನಮ್ಮ ಮನೆಗೆ ನುಗ್ಗಿ ಸಂಪ್-ಕವರ್ ಕದ್ದಿದ್ದಾರೆ ಎಂದು ತೋರುತ್ತಿದೆ. 15 ನಿಮಿಷಗಳ ಮುನ್ನ ಒಮ್ಮೆ ಬಂದು ಪರಿಶೀಲಿಸಿದ್ದಾರೆ. ನಂತರ ಅತಿಕ್ರಮಣ ಪ್ರವೇಶ ಮಾಡಿ ಅಪರಾಧ ಎಸಗಿದ್ದಾರೆ. ನೀವು ಸಿಸಿಟಿವಿ ದೃಶ್ಯಾವಳಿಗಳನ್ನು ಎರಡು ಕೋನಗಳಿಂದ ನೋಡಬಹುದು. ಅವರ ಮುಖದ ಸ್ಕ್ರೀನ್‌ಶಾಟ್‌ಗಳು ಮತ್ತು ನಂಬರ್ ಪ್ಲೇಟ್ ಸಹ. ಕೆಂಪು ಹೋಂಡಾ ಆಕ್ಟಿವಾದಲ್ಲಿ ಸಂಖ್ಯೆ KA03HY8751 ಎಂದು ತೋರುತ್ತದೆ?" ಎಂದು ಜೊಮ್ಯಾಟೊ ಹಾಗೂ ಬೆಂಗಳೂರು ಪೊಲೀಸ್ ಟ್ವಿಟ್ಟರ್‌ ಖಾತೆಗೆ ಟ್ಯಾಗ್ ಮಾಡಿ ಬರೆದುಕೊಂಡಿದ್ದಾರೆ.

ರಿಕ್ಕಿ ಕೇಜ್ ಮನವಿಗೆ ಪ್ರತಿಕ್ರಿಯಿಸಿರುವ ಜೊಮ್ಯಾಟೊ ಟ್ವೀಟ್ ಮಾಡಿ "ಹಾಯ್ ರಿಕಿ, ಇದು ನಿಜಕ್ಕೂ ಕಳವಳಕಾರಿ, ಮತ್ತು ನಮ್ಮ ಡೆಲಿವರಿ ಬಾಯ್‌ಗಳಿಂದ ಈ ನಡವಳಿಕೆಯನ್ನು ನಾವು ಖಂಡಿತವಾಗಿಯೂ ಪ್ರೋತ್ಸಾಹಿಸುವುದಿಲ್ಲ. ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು DM ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಲು ನಾವು ವಿನಂತಿಸುತ್ತೇವೆ ಇದರಿಂದ ನಾವು ನಿಮ್ಮೊಂದಿಗೆ ಮತ್ತಷ್ಟು ಸಂಪರ್ಕ ಸಾಧಿಸಬಹುದು" ಎಂದು ರಿಪ್ಲೇ ಮಾಡಿದ್ದಾರೆ. ನಿಮಗೆ ಏನಾದರೂ ಮಾಹಿತಿ ಸಿಕ್ಕರೆ ಮೆಸೇಜ್ ಮಾಡಿ ಬಳಿ ಫೋನ್ ನಂಬರ್ ಕೊಡುತ್ತೇನೆ ಎಂದು ರಿಕ್ಕಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಸಂಗೀತ ಕ್ಷೇತ್ರಕ್ಕೆ ನೀಡಲಾಗುವ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಎರಡು ಬಾರಿ ರಿಕ್ಕಿ ಕೇಜ್ ಮುಡಿಗೇರಿಸಿಕೊಂಡಿದ್ದಾರೆ. ರಿಕ್ಕಿ ಕೇಜ್ ಹಾಗೂ ಸ್ವೀವರ್ಟ್ ಕೋಪ್‌ಲ್ಯಾಂಡ್ ಜೋಡಿಯು 'ಡಿವೈನ್ ಟೈಡ್' ಎಂಬ ಆಲ್ಬಂಗಾಗಿ 3 ವರ್ಷಗಳ ಹಿಂದೆ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು. ಅದಕ್ಕೂ ಮುನ್ನ 2015ರಲ್ಲಿ 'ವಿಂಡ್ಸ್ ಆಫ್ ಸಂಸಾರ' ಎನ್ನುವ ಮತ್ತೊಂದು ಆಲ್ಬಂಗೆ ಗ್ರ್ಯಾಮಿ ಅವಾರ್ಡ್ ಲಭಿಸಿತ್ತು. ಬೆಸ್ಟ್ ನ್ಯೂ ಏಜ್ ಆಲ್ಬಂ ಕ್ಯಾಟಗರಿಯಲ್ಲೇ ಎರಡು ಬಾರಿ ಪ್ರಶಸ್ತಿ ಪಡೆದಿದ್ದು ವಿಶೇಷ.

ಈ ವರ್ಷ ಲಾಸ್ ಏಂಜಲೀಸ್‌ನಲ್ಲಿ ನಡೆದ 67 ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಿಕಿ ಕೇಜ್ ಪ್ರಶಸ್ತಿ ವಂಚಿತರಾಗಿದ್ದರು. ರಿಕ್ಕಿ ಹಾಗೂ ಅನೌಷ್ಕಾ ಶಂಕರ್ ಅವರನ್ನು ಹಿಂದಿಕ್ಕಿ ಚಂದ್ರಿಕಾ ಟಂಡನ್ ಪ್ರಶಸ್ತಿ ಗೆದ್ದಿದ್ದರು.

More from Filmibeat

Read more about: ricky kej music kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X