ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ 'ರಾಕಿಂಗ್ ಸ್ಟಾರ್' ದಂಪತಿ

By Pavithra

ಕನ್ನಡದ ರಾಕಿಂಗ್ ಸ್ಟಾರ್ ಹಾಗೂ ರಾಧಿಕಾ ಪಂಡಿತ್ ಜೋಡಿ ದಾಂಪತ್ಯ ಜೀವನಕ್ಕೆ ಒಂದು ವರ್ಷಗಳ ಸಂಭ್ರಮ. ತೆರೆಮೇಲೆ ಹಿಟ್ ಆಗಿರೋ ಈ ಜೋಡಿ ಆಫ್ ಸ್ಕ್ರೀನ್ ನಿಜ ಜೀವನದಲ್ಲೂ ಅಷ್ಟೇ ಅನ್ಯೂನ್ಯವಾಗಿದ್ದಾರೆ. ಇಬ್ಬರು ಕೂಡ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇಯಾದ ಸೇವೆ ಸಲ್ಲಿಸುತ್ತಿದ್ದು ಅಪಾರ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ.

ಒಂದು ವರ್ಷವನ್ನ ಯಶಸ್ವಿಯಾಗಿ ಪೂರೈಸಿರೋ ರಾಂಕಿಗ್ ಜೋಡಿಗೆ ಶುಭಾಷಯಗಳು ಸುರಿಮಳೆ ಹರಿದು ಬರ್ತಿದೆ. ರಾಧಿಕಾ, ಯಶ್ ಮದುವೆಯಲ್ಲಿ ಏನೆಲ್ಲಾ ವಿಶೇಷತೆಗಳಿತ್ತು, ಯಶ್-ರಾಧಿಕಾ ಪಂಡಿತ್ ಒಂದು ವರ್ಷದ ಜರ್ನಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಯಶ್-ರಾಧಿಕಾ ಮದುವೆಯ ವಾರ್ಷಿಕೋತ್ಸವ

ಯಶ್-ರಾಧಿಕಾ ಮದುವೆಯ ವಾರ್ಷಿಕೋತ್ಸವ

ರಾಕಿಂಗ್ ಜೋಡಿಗೆ ಇಂದು ಮದುವೆ ವಾರ್ಷಿಕೋತ್ಸವದ ಸಂಭ್ರಮ. ಕಳೆದ ವರ್ಷ ತಾಜ್ ವೆಸ್ಟ್ ಎಂಡ್ ನಲ್ಲಿ ಅದ್ದೂರಿಯಾಗಿ ಗುರು-ಹಿರಿಯರು ಹಾಗೂ ಸ್ನೇಹಿತರು ಹಲವಾರು ಗಣ್ಯರ ಸಮ್ಮುಖದಲ್ಲಿ ಇಬ್ಬರು ದಂಪತಿಗಳಾಗಿದ್ದರು.

ಅದೇ ಪ್ರೀತಿ ಹೊಸ ರೀತಿ

ಅದೇ ಪ್ರೀತಿ ಹೊಸ ರೀತಿ

ತೆರೆ ಮೇಲೆ ಖುಷಿ ಖುಷಿಯಾಗಿ ಕಾಣಿಸಿಕೊಳ್ಳುವ ಈ ಜೋಡಿ ನಿಜ ಜೀವನದಲ್ಲಿ ಮತ್ತಷ್ಟು ಆತ್ಮೀಯವಾಗಿದ್ದಾರೆ. ಅದೇ ಪ್ರೀತಿ ಮುಂದುವರೆದಿದೆ. ಯಶ್ ಮತ್ತು ರಾಧಿಕಾ ಯಾವುದಾದರು ಕಾರ್ಯಕ್ರಮಕ್ಕೆ ಬಂದರೆ ಈ ಜೋಡಿಯನ್ನ ನೋಡೊದಕ್ಕೆ ಖುಷಿ ಆಗುತ್ತೆ.

ಸಣ್ಣ-ಪುಟ್ಟ ವಿಚಾರದಲ್ಲಿ ಖುಷಿ

ಸಣ್ಣ-ಪುಟ್ಟ ವಿಚಾರದಲ್ಲಿ ಖುಷಿ

ಯಶ್ ಮತ್ತು ರಾಧಿಕಾ ಇಬ್ಬರು ವಯಕ್ತಿಕ ಜೀವನವನ್ನ ತುಂಬಾ ಚೆನ್ನಾಗಿ ಎಂಜಾಯ್ ಮಾಡುತ್ತಾರೆ. ಮದುವೆ ನಂತರ ಒಂದು ವರ್ಷಗಳ ಕಾಲ ತಮಗಾಗಿ ಸಮಯ ಮಾಡಿಕೊಂಡು ಲೈಫ್ ಅನ್ನ ಎಂಜಾಯ್ ಮಾಡಿದ್ದಾರೆ. ಸಣ್ಣ-ಪುಟ್ಟ ಸಂಗತಿಗಳಲ್ಲಿ ಹೆಚ್ಚು ಖುಷಿ ಪಡೋ ಜೋಡಿ ಇವರದ್ದು .

ಮದುವೆ ಪೋಟೋಗನ್ನ ರಿವಿಲ್ ಮಾಡಿದ ರಾಧಿಕಾ

ಮದುವೆ ಪೋಟೋಗನ್ನ ರಿವಿಲ್ ಮಾಡಿದ ರಾಧಿಕಾ

ಕಳೆದ ಒಂಬತ್ತು ದಿನಗಳಿಂದ ರಾಧಿಕಾ ಪಂಡಿತ್ ತಮ್ಮ ವಿವಾಹದ ಸಿದ್ದತೆ ಗಳು ಹೇಗಿತ್ತು ಅನ್ನೋದನ್ನ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಿಗಾಗಿ ಪ್ರತಿನಿತ್ಯ ಕೆಲ ಫೋಟೋಸ್ ಗಳನ್ನ ಫೇಸ್ ಬುಕ್ ನಲ್ಲಿ ಅಪ್ಲೌಡ್ ಮಾಡಿದ್ದಾರೆ.

ವಿದೇಶಕ್ಕೆ ಹಾರಿದ ಯಶ್-ರಾಧಿಕಾ

ವಿದೇಶಕ್ಕೆ ಹಾರಿದ ಯಶ್-ರಾಧಿಕಾ

ವಿವಾಹ ವಾರ್ಷಿಕೋತ್ಸದ ಸಂಭ್ರಮ ಆಚರಣೆ ಮಾಡಲು ಈ ಜೋಡಿ ವಿದೇಶಕ್ಕೆ ಹಾರಿದೆ. ಕೆಲದಿನಗಳು ಸುತ್ತಾಡಿ ಬಂದ ನಂತರ ಇಬ್ಬರು ತಮ್ಮ ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

More from Filmibeat

English summary
Kannada actor Rocking Star Yash and Radhika Pandit are celebrating their 1st wedding anniversary.
Read more about: yash radhika pandith
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X