For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಮನವಿಗೆ ಕೈ ಜೋಡಿಸಿದ ಸ್ಯಾಂಡಲ್‌ವುಡ್ ಯುವಸೇನೆ

  |

  ಕೋವಿಡ್ ಕಾರಣದಿಂದ ಕರ್ನಾಟಕ ಮೃಗಾಲಯಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಹಿನ್ನೆಲೆ ಮೃಗಾಲಯದಲ್ಲಿರುವ ಪ್ರಾಣಿಗಳು, ಪಕ್ಷಿಗಳನ್ನು ದತ್ತು ಪಡೆಯುವ ಮೂಲಕ ನೆರವು ನೀಡಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿನಂತಿಸಿದ್ದರು. ದರ್ಶನ್ ಅವರ ಮನವಿ ನಂತರ ಹದಿನೈದು ದಿನದಲ್ಲಿ 1.5 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ ಎಂದು ಕರ್ನಾಟಕ ಮೃಗಾಲಯಗಳ ಆಡಳಿತ ಮಂಡಳಿ ಮಾಹಿತಿ ನೀಡಿದೆ.

  Recommended Video

  ದರ್ಶನ್ ಮಾತಿಗೆ ಬೆಲೆ ಕೊಟ್ಟ ಸ್ಯಾಂಡಲ್ ವುಡ್ ಸೀನಿಯರ್ಸ್ ಹಾಗೂ ಜೂನಿಯರ್ಸ್ | Filmibeat Kannada

  ದರ್ಶನ್ ಅಭಿಮಾನಿಗಳು, ಸಾರ್ವಜನಿಕರು, ರಾಜಕಾರಣಿಗಳು ಜೊತೆ ಸ್ಯಾಂಡಲ್‌ವುಡ್ ಯುವತಾರೆಯರು ಈ ಮಹತ್ವದ ಕೆಲಸಕ್ಕೆ ಕೈ ಜೋಡಿಸಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಹಾಗಾದ್ರೆ, ಕನ್ನಡ ಚಿತ್ರರಂಗ ಯಾವ ನಟ-ನಟಿ ಯಾವ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲಿದೆ ಓದಿ...

  ಚಿರತೆ ದತ್ತು ಪಡೆದ ಅಮೂಲ್ಯ

  ಚಿರತೆ ದತ್ತು ಪಡೆದ ಅಮೂಲ್ಯ

  ದರ್ಶನ್ ಮನವಿಯ ನಂತರ ನಟಿ ಅಮೂಲ್ಯ ದಂಪತಿ ಮೈಸೂರಿನ ಮೃಗಾಲಯದಲ್ಲಿ ಚಿರತೆ ದತ್ತು ಪಡೆದಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ನಟಿ ''ನಾವು ಮೈಸೂರಿನ ಮೃಗಾಲಯದಲ್ಲಿ ಒಂದು 'ಜಾಗ್ವಾರ್' ಅನ್ನು ದತ್ತು ಪಡೆಯುವ ಮೂಲಕ, ನಮ್ಮ ಕಡೆಯಿಂದ ಅಳಿಲು ಸೇವೆ ಸಲ್ಲಿಸಿರುವ ಖುಷಿ ನೀಡಿದೆ. ಇಂತಹ ಒಂದು ಉತ್ತಮ ಕಾರ್ಯಕ್ಕೆ ಬೆಂಬಲ ನೀಡಿ, ಪ್ರೋತ್ಸಾಹ ನೀಡುತ್ತಿರುವ ದರ್ಶನ್ ಸರ್‌ಗೆ ಧನ್ಯವಾದಗಳು'' ಎಂದು ಟ್ವೀಟ್ ಮಾಡಿದರು. ಇದಕ್ಕೆ ದರ್ಶನ್ ಪ್ರತಿಕ್ರಿಯಿಸಿ ''ಪ್ರಾಣಿಗಳ ಮೇಲಿನ ನಿಮ್ಮ ಪ್ರೀತಿಗೆ ಹೃದಯಪೂರ್ವಕ ಧನ್ಯವಾದಗಳು'' ಎಂದಿದ್ದಾರೆ.

  ದರ್ಶನ್ ಕಾಯಕಕ್ಕೆ ಕೈಜೋಡಿಸಿ ಆಫ್ರಿಕನ್ ಆನೆ ದತ್ತು ಪಡೆದ ಉಪೇಂದ್ರದರ್ಶನ್ ಕಾಯಕಕ್ಕೆ ಕೈಜೋಡಿಸಿ ಆಫ್ರಿಕನ್ ಆನೆ ದತ್ತು ಪಡೆದ ಉಪೇಂದ್ರ

  ಚಿರತೆ ದತ್ತು ಪಡೆದ ಕಾರುಣ್ಯ ರಾಮ್

  ಚಿರತೆ ದತ್ತು ಪಡೆದ ಕಾರುಣ್ಯ ರಾಮ್

  ದರ್ಶನ್ ಅವರ ಮನವಿ ಹಿನ್ನೆಲೆ ನಟಿ ಕಾರುಣ್ಯ ರಾಮ್ ಮೈಸೂರಿನ ಮೃಗಾಲಯದಲ್ಲಿ ಚಿರತೆ ದತ್ತು ಪಡೆದುಕೊಂಡಿದ್ದಾರೆ. ಇದಕ್ಕೆ ದರ್ಶನ್ ಪ್ರತಿಕ್ರಿಯಿಸಿ ''ಪ್ರಾಣಿಗಳ ಮೇಲಿನ ನಿಮ್ಮ ಪ್ರೀತಿಗೆ ಹೃದಯಪೂರ್ವಕ ಧನ್ಯವಾದಗಳು'' ತಿಳಿಸಿದ್ದಾರೆ.

  ಚಿರತೆ ದತ್ತು ಪಡೆದ ಅಭಯ್ ವೀರ್

  ಚಿರತೆ ದತ್ತು ಪಡೆದ ಅಭಯ್ ವೀರ್

  ಕನ್ನಡದ ಯುವ ನಟ (ಬ್ರಹ್ಮಪುತ್ರ ಸಿನಿಮಾ) ಅಭಯ್ ವೀರ್ ಚಿರತೆ ದತ್ತು ಪಡೆದಿದ್ದಾರೆ. ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಒಂದು ವರ್ಷದ ಅವಧಿಗೆ ದತ್ತು ಪಡೆದರು. ಅಭಯ್ ವೀರ್ ಕೆಲಸಕ್ಕೆ ಡಿ ಬಾಸ್ ಮೆಚ್ಚುಗೆ ವ್ಯಕ್ತಡಿಸಿದ ಧನ್ಯವಾದ ತಿಳಿಸಿದ್ದಾರೆ.

  ದರ್ಶನ್ ಮನವಿಯಿಂದ 1 ಕೋಟಿ ಹಣ ಸಂಗ್ರಹ, ಯಾವ ಮೃಗಾಲಯದಲ್ಲಿ ಹೆಚ್ಚು?ದರ್ಶನ್ ಮನವಿಯಿಂದ 1 ಕೋಟಿ ಹಣ ಸಂಗ್ರಹ, ಯಾವ ಮೃಗಾಲಯದಲ್ಲಿ ಹೆಚ್ಚು?

  ಅಶ್ವಿತಿ ಶೆಟ್ಟಿ-ಅದ್ವಿತಿ ಶೆಟ್ಟಿ

  ಅಶ್ವಿತಿ ಶೆಟ್ಟಿ-ಅದ್ವಿತಿ ಶೆಟ್ಟಿ

  ಕನ್ನಡದ ಯುವ ನಟಿ ಅಶ್ವಿತಿ ಶೆಟ್ಟಿ ಮತ್ತು ಸಹೋದರಿ ಅದ್ವಿತಿ ಶೆಟ್ಟಿ ಇಬ್ಬರು ಪ್ರತ್ಯೇಕವಾಗಿ ಬನ್ನೇರುಘಟ್ಟ ಮೃಗಾಲಯದಲ್ಲಿ ಜೋಡಿ ಆಮೆಗಳನ್ನು ದತ್ತು ಪಡೆದಿದ್ದಾರೆ. ದರ್ಶನ್ ಅವರಿಂದ ಸ್ಫೂರ್ತಿಯಾಗಿ ಈ ಅಳಿಲು ಸೇವೆ ಮಾಡುತ್ತಿರುವುದಾಗಿ ಇಬ್ಬರು ಟ್ವೀಟ್ ಮಾಡಿದ್ದಾರೆ. ಸಹೋದರಿಯರ ಕಾರ್ಯಕ್ಕೆ ದಾಸ ಧನ್ಯವಾದ ತಿಳಿಸಿದರು.

  ಲವ್‌ಬರ್ಡ್ಸ್ ದತ್ತು ಪಡೆದ ನಿರ್ದೇಶಕ

  ಲವ್‌ಬರ್ಡ್ಸ್ ದತ್ತು ಪಡೆದ ನಿರ್ದೇಶಕ

  ಡೆಡ್ಲಿ ಖ್ಯಾತಿಯ ನಿರ್ದೇಶಕ ರವಿ ಶ್ರೀವತ್ಸ ಮೈಸೂರಿನ ಮೃಗಾಲಯದಿಂದ ಜೋಡಿಹಕ್ಕಿಯನ್ನು ದತ್ತು ಪಡೆದು ಸಹಾಯ ಮಾಡಿದ್ದಾರೆ. ರವಿ ಶ್ರೀವತ್ಸ ಕೆಲಸಕ್ಕೆ ದರ್ಶನ್ ಧನ್ಯವಾದ ಅರ್ಪಿಸಿದರು.

  ನವಿಲು ದತ್ತು ಪಡೆದ ಸೋನಾಲ್

  ನವಿಲು ದತ್ತು ಪಡೆದ ಸೋನಾಲ್

  ಪಂಚತಂತ್ರ ಹಾಗೂ ರಾಬರ್ಟ್ ಚಿತ್ರಗಳಲ್ಲಿ ಗಮನ ಸೆಳೆದಿದ್ದ ನಟಿ ಸೋನಾಲೆ ಬನ್ನೇರುಘಟ್ಟ ಮೃಗಾಲಯದಲ್ಲಿ ಬಿಳಿ ನವಿಲು ದತ್ತು ಪಡೆಯುವ ಮೂಲಕ ಡಿ ಬಾಸ್ ಅಭಿಯಾನಕ್ಕೆ ಕೈ ಜೋಡಿಸಿದರು.

  ಬಿಳಿ ನವಿಲು ದತ್ತು ಪಡೆದ ಅನುಷಾ

  ಬಿಳಿ ನವಿಲು ದತ್ತು ಪಡೆದ ಅನುಷಾ

  ಕನ್ನಡದ ಮತ್ತೊಬ್ಬ ಯುವ ನಟಿ ಅನುಷಾ ರೈ ಮೈಸೂರು ಮೃಗಾಲಯದಿಂದ ಬಿಳಿ ನವಿಲು ದತ್ತು ಪಡೆದುಕೊಂಡಿದ್ದಾರೆ. ಅನುಷಾ ನೆರವಿಗೆ ನಟ ದರ್ಶನ್ ಧನ್ಯವಾದ ಅರ್ಪಿಸಿದ್ದಾರೆ.

  ಜಿಂಕೆ ದತ್ತು ಪಡೆದ ಪ್ರಿಯಾಂಕಾ ತಿಮ್ಮೆಶ್

  ಜಿಂಕೆ ದತ್ತು ಪಡೆದ ಪ್ರಿಯಾಂಕಾ ತಿಮ್ಮೆಶ್

  ಗಣಪ, ಭೀಮಸೇನ ನಳಮಹಾರಾಜ ಅಂತಹ ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ನಟಿ ಪ್ರಿಯಾಂಕಾ ತಿಮ್ಮೇಶ್ ಕೃಷ್ಣಮೃಗ ದತ್ತು ಪಡೆದಿದ್ದಾರೆ. ಮೈಸೂರಿನ ಮೃಗಾಲಯದಲ್ಲಿ ದತ್ತು ಪಡೆದಿದ್ದು, ದರ್ಶನ್ ಧನ್ಯವಾದ ಅರ್ಪಿಸಿದ್ದಾರೆ.

  ಹುಲಿ ದತ್ತು ಪಡೆದ ನಿರ್ಮಾಪಕ

  ಹುಲಿ ದತ್ತು ಪಡೆದ ನಿರ್ಮಾಪಕ

  ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಬೆಂಗಾಲ್ ಟೈಗರ್ ದತ್ತು ಪಡೆದುಕೊಂಡಿದ್ದಾರೆ. ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದರು.

  ಆಫ್ರಿಕನ್ ಆನೆ ದತ್ತು ಪಡೆದ ಉಪೇಂದ್ರ

  ಆಫ್ರಿಕನ್ ಆನೆ ದತ್ತು ಪಡೆದ ಉಪೇಂದ್ರ

  ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ನಟ ಉಪೇಂದ್ರ ಆಫ್ರಿಕನ್ ಆನೆ ದತ್ತು ಪಡೆದರು. ದರ್ಶನ್ಅವರ ಮಾನವೀಯ ಅಭಿಯಾನಕ್ಕೆ ರಿಯಲ್ ಸ್ಟಾರ್ ಸಾಥ್ ಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದರು.

  ನವಿಲು ದತ್ತು ಪಡೆದ ಕಾವ್ಯ

  ನವಿಲು ದತ್ತು ಪಡೆದ ಕಾವ್ಯ

  ಕನ್ನಡದ ಯುವ ನಟಿ ಕಾವ್ಯ ವೆಂಕಟೇಶ್ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿ ಬಿಳಿ ನವಿಲು ದತ್ತು ಪಡೆದುಕೊಂಡಿದ್ದರು. ಇದಕ್ಕೆ ನಟ ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದ ಟ್ವೀಟ್ ಮಾಡಿದರು.

  0
  English summary
  Karunya Ram, Amulya, Anusha Rai, Kavya Venkatesh, Umapathy srinivas and Some other celebrities adopted animals from Karnataka Zoo after requested Darshan.
  Thursday, June 17, 2021, 10:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X