Shivarajkumar Birthday: ಶಿವಣ್ಣನ ಹುಟ್ಟುಹಬ್ಬಕ್ಕೆ ಯಾರೆಲ್ಲಾ ವಿಶ್ ಮಾಡಿದ್ರು? ಇಲ್ಲಿದೆ ಪಟ್ಟಿ
ಜುಲೈ 12, ಚಂದನವನದ ಸಿನಿ ರಸಿಕರಿಗೆ ಹಾಗೂ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಹಬ್ಬದ ದಿನ ಎಂದೇ ಹೇಳಬಹುದು. ಹೌದು, ಇಂದು ಸೆಂಚುರಿ ಸ್ಟಾರ್ ಹುಟ್ಟುಹಬ್ಬ ಇರುವ ಕಾರಣ ಶಿವಣ್ಣನ ಅಭಿಮಾನಿಗಳು ಮಧ್ಯರಾತ್ರಿಯೇ ಶಿವರಾಜ್‌ಕುಮಾರ್ ಮನೆಗೆ ತೆರಳಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಒಂದೆಡೆ ಅಭಿಮಾನಿಗಳು ಮನೆ ಮುಂದೆ ಬಂದು ಹುಟ್ಟುಹಬ್ಬಕ್ಕೆ ಕೇಕ್ ಹಾಗೂ ಹಾರ ತಂದು ಶುಭ ಕೋರಿದ್ದರೆ, ಮತ್ತೊಂದೆಡೆ ಶಿವರಾಜ್‌ಕುಮಾರ್‌ಗೆ ಹುಟ್ಟುಹಬ್ಬದ ಪ್ರಯುಕ್ತ ಹಲವಾರು ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ಶಿವಣ್ಣನ ಜತೆಗಿನ ತಮ್ಮ ಫೋಟೊಗಳನ್ನು ಹಂಚಿಕೊಳ್ಳುತ್ತಿರುವ ಸೆಲೆಬ್ರಿಟಿಗಳು ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಕೇವಲ ಸಿನಿಮಾ ರಂಗದವರು ಮಾತ್ರವಲ್ಲಲದೇ ರಾಜಕೀಯ ಕ್ಷೇತ್ರದ ಗಣ್ಯ ವ್ಯಕ್ತಿಗಳು ಹಾಗೂ ಇತರೆ ವಿವಿಧ ಕ್ಷೇತ್ರಗಳ ವ್ಯಕ್ತಿಗಳೂ ಸಹ ಶಿವಣ್ಣನಿಗೆ ಹುಟ್ಟುಹಬ್ಬದ ವಿಷ್ ಮಾಡಿದ್ದಾರೆ. ಹೀಗೆ ಶಿವಣ್ಣ ಹುಟ್ಟುಹಬ್ಬದ ಅಂಗವಾಗಿ ಯಾವೆಲ್ಲಾ ಸೆಲಬ್ರಿಟಿಗಳು ಹಾಗೂ ರಾಜಕೀಯ ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಶಿವರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ "ನಿಮಗೆ ಹೆಚ್ಚೆಚ್ಚು ಸಂತಸ, ಆರೋಗ್ಯ ಹಾಗೂ ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ ಅಣ್ಣ. ಆ ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಮತ್ತು ಯಾವಾಗಲೂ ಇದ್ದ ಹಾಗೆ ನಮಗೆ ಮಾದರಿಯಾಗಿರಿ. ಹುಟ್ಟುಹಬ್ಬದ ಶುಭಾಶಯಗಳು" ಎಂದು ಬರೆದುಕೊಂಡು ಶುಭ ಕೋರಿದ್ದಾರೆ.
ಕಾಂತಾರ ಮೂಲಕ ಇಡೀ ದೇಶದಾದ್ಯಂತ ಹೆಸರು ಮಾಡಿರುವ ರಿಷಬ್ ಶೆಟ್ಟಿ ಶಿವರಾಜ್‌ಕುಮಾರ್ ಜತೆಗಿನ ಸೆಲ್ಫಿಯನ್ನು ಹಂಚಿಕೊಂಡಿದ್ದು "ಚಂದನವನದ ಚಿರಯುವಕ, ಪ್ರೀತಿಯ ಶಿವಣ್ಣನಿಗೆ ಹುಟ್ಟು ಹಬ್ಬದ ಶುಭಾಶಯಗಳು! ಹೀಗೆ ಸದಾ ಕಾಲ ನಮಗೆಲ್ಲಾ ಸ್ಪೂರ್ತಿಯಾಗಿರಿ" ಎಂದು ಬರೆದುಕೊಂಡು ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ಹಾಗೂ ಪ್ರತಿಭಾವಂತ ನಟ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
"ನಟನಾ ಕೌಶಲದಿಂದ ಮಾತ್ರವಲ್ಲ ತಮ್ಮ ವಿನಯಶೀಲ ನಡೆ-ನುಡಿಗಳಿಂದಲೂ ಕೋಟ್ಯಂತರ ಜನರ ಪ್ರೀತಿ-ಅಭಿಮಾನಗಳಿಗೆ ಪಾತ್ರರಾಗಿರುವ ಶಿವರಾಜ್ ಕುಮಾರ್ ಅವರಿಗೆ ಆಯುಷ್ಯ ಮತ್ತು ಆರೋಗ್ಯದ ಭಾಗ್ಯ ಕೂಡಿ ಬರಲಿ ಎಂದು ಹಾರೈಸುತ್ತೇನೆ" ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.


Click it and Unblock the Notifications











