For Quick Alerts
  ALLOW NOTIFICATIONS  
  For Daily Alerts

  ಮನು- ಸಂಗೀತಾ ಅದ್ಧೂರಿ ಆರತಕ್ಷತೆ: ಶಿವಣ್ಣ, ರಾಘಣ್ಣ, ಖುಷ್ಬೂ ಶುಭ ಹಾರೈಕೆ

  |

  ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಮದುವೆ ಸಂಭ್ರಮ ಕಳೆಕಟ್ಟಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ನಟ ಮನೋರಂಜನ್ ತಮ್ಮ ದೂರದ ಸಂಬಂಧಿ ಸಂಗೀತಾ ಜೊತೆ ಹೊಸಬಾಳಿಗೆ ಕಾಲಿಡುತ್ತಿದ್ದಾರೆ. ಶುಕ್ರವಾರದಿಂದಲೇ ಬೆಂಗಳೂರು ಪ್ಯಾಲೇಸ್ ಗ್ರೌಂಡ್‌ನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಮದುವೆ ಕಾರ್ಯಕ್ರಮಗಳು ಶುರುವಾಗಿದೆ.

  ಶುಕ್ರವಾರ ಮೆಹಂದಿ ಹಾಗೂ ಅರಿಶಿನ ಶಾಸ್ತ್ರ ನೆರವೇರಿದ್ರೆ, ನಿನ್ನೆ (ಆಗಸ್ಟ್ 20) ವಧುವಿನ ಕಡೆಯವರಿಂದ ಆರಕ್ಷತೆ ಕಾರ್ಯಕ್ರಮ ಜರುಗಿದೆ. ಅದ್ಧೂರಿ ಕಾರ್ಯಕ್ರಮದಲ್ಲಿ ಚಿತ್ರ ರಂಗದ ಗಣ್ಯರು ಸೇರಿದಂತೆ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ. ನಿನ್ನೆ (ಆಗಸ್ಟ್ 21) ನಡೆದ ಮನೋರಂಜನ್ ಹಾಗೂ ಸಂಗೀತಾ ದೀಪಕ್ ಅದ್ಧೂರಿ ಆರತಕ್ಷತೆ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್ ದಂಪತಿ, ರಾಘವೇಂದ್ರ ರಾಜ್‌ಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ ದಂಪತಿ, ಬಹುಭಾಷಾ ನಟಿ ಖುಷ್ಬೂ, ನಿರೂಪಕ, ನಟ ಮಾಸ್ಟರ್ ಆನಂದ್, ನಿರೂಪಕ ಅಕುಲ್ ಬಾಲಾಜಿ ಸಾಕಷ್ಟು ಗಣ್ಯರು ಭಾಗಿಯಾಗಿ ಜೋಡಿಗೆ ಶುಭ ಹಾರೈಸಿದ್ದಾರೆ.

  ರವಿಚಂದ್ರನ್ ಪುತ್ರ ಮನೋರಂಜನ್ ಮದುವೆ ಆಮಂತ್ರಣ ಪತ್ರಿಕೆ ನೋಡಿದ್ರಾ?ರವಿಚಂದ್ರನ್ ಪುತ್ರ ಮನೋರಂಜನ್ ಮದುವೆ ಆಮಂತ್ರಣ ಪತ್ರಿಕೆ ನೋಡಿದ್ರಾ?

  ಇಂದು ಮದುವೆಯ ಶಾಸ್ತ್ರಗಳು ನಡೆಯಲಿದೆ. ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಿನಿಮಾ ಹಾಗೂ ರಾಜಕೀಯ ಮುಖಂಡರಿಗೆ ರವಿಚಂದ್ರನ್ ತಮ್ಮ ಪುತ್ರನ ಮದುವೆಗೆ ಆಮಂತ್ರಣ ನೀಡಿದ್ದರು. ಎರಡು ವರ್ಷಗಳ ಹಿಂದೆ ಪ್ಯಾಲೇಸ್ ಗ್ರೌಂಡ್‌ನಲ್ಲಿ ಕ್ರೇಜಿಸ್ಟಾರ್ ತಮ್ಮ ಪುತ್ರಿ ಗೀತಾಂಜಲಿ ಮದುವೆಯನ್ನು ಬಹಳ ಅದ್ಧೂರಿಯಾಗಿ ನೆರವೇರಿಸಿದ್ದರು. ವಿಭಿನ್ನ ಸೆಟ್ ನಿರ್ಮಿಸಿ ಥೇಟ್ ಸಿನಿಮಾ ರೀತಿಯಲ್ಲಿ ಮದುವೆ ಮಾಡಿ ಸಂಭ್ರಮಿಸಿದ್ದರು. ಇದೀಗ ಕ್ರೇಜಿ ಕುಟುಂಬ ಮನೋರಂಜನ್ ಮದುವೆ ಸಂಭ್ರಮದಲ್ಲಿದೆ.

   ಅದ್ಧೂರಿ ಎಂಗೇಜ್‌ಮೆಂಟ್

  ಅದ್ಧೂರಿ ಎಂಗೇಜ್‌ಮೆಂಟ್

  ಮದುವೆ ಸಂಭ್ರಮದ ಜೊತೆಗೆ ಅದ್ಧೂರಿ ಎಂಗೇಜ್ಮೆಂಟ್‌ ಹಾಗೂ ಮೆಹಂದಿ ಶಾಸ್ತ್ರ ನಡೆದಿದೆ. ಎಂಗೇಜ್ಮೆಂಟ್‌ನಲ್ಲಿ ಮನೋರಂಜನ್ ನೀಲಿ ಬಣ್ಣನ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್‌ನಲ್ಲಿ ಮಿಂಚಿದ್ರೆ, ವಧು ಸಂಗೀತಾ ದೀಪಕ್ ಕ್ರೀಮ್‌ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಹಿರಿಯರ ಆಶೀರ್ವಾದ ಪಡೆದು ಜೋಡಿ ಉಂಗುರ ಬದಲಿಸಿಕೊಂಡಿದೆ.

  ಕಾಸು ತಗೊಂಡು ಸಿನಿಮಾ ಮಾಡೋ ವಂಶದಲ್ಲಂತೂ ನಾವು ಹುಟ್ಟಿಲ್ಲ: ರವಿಚಂದ್ರನ್ ಪುತ್ರ ವಿಕ್ರಮ್!ಕಾಸು ತಗೊಂಡು ಸಿನಿಮಾ ಮಾಡೋ ವಂಶದಲ್ಲಂತೂ ನಾವು ಹುಟ್ಟಿಲ್ಲ: ರವಿಚಂದ್ರನ್ ಪುತ್ರ ವಿಕ್ರಮ್!

   ಸಂಗೀತ್ ಪಾರ್ಟಿಯಲ್ಲಿ ಕ್ರೇಜಿ ಸ್ಟೆಪ್ಸ್

  ಸಂಗೀತ್ ಪಾರ್ಟಿಯಲ್ಲಿ ಕ್ರೇಜಿ ಸ್ಟೆಪ್ಸ್

  ಮನೋರಂಜನ್ ಹಾಗೂ ದೀಪಿಕಾ ಜೋಡಿಯ ಸಂಗೀತ್ ಪಾರ್ಟಿ ಕಾರ್ಯಕ್ರಮ ಸಖತ್ ಜೋರಾಗಿ ನಡೆದಿದೆ. ಬಿಂದಾಸ್‌ ಮ್ಯೂಸಿಕ್‌ಗೆ ಕ್ರೇಜಿಸ್ಟಾರ್ ದಂಪತಿ, ಮನೋರಂಜನ್ ಸಹೋದರ ವಿಕ್ರಂ ಸೇರಿದಂತೆ ರವಿಚಂದ್ರನ್ ಕುಟುಂಬ ಸದಸ್ಯರು, ಸಂಬಂಧಿಕರು ವಧುವಿನ ಮನೆ ಕಡೆ ಸಂಬಂಧಿಕರೆಲ್ಲಾ ಕುಣಿದು ಕುಪ್ಪಳಿಸಿದ್ದಾರೆ. ವಧು ವರರ ಜೊತೆಗೆ ಕ್ರೇಜಿಸ್ಟಾರ್‌ ಹಾಗೂ ವಿಕ್ರಂ ಬಿಂದಾಸ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ.

   ರಿಸೆಪ್ಷನ್‌ನಲ್ಲಿ ಧರೆಗಿಳಿದ ತಾರಾಲೋಕ

  ರಿಸೆಪ್ಷನ್‌ನಲ್ಲಿ ಧರೆಗಿಳಿದ ತಾರಾಲೋಕ

  ನಿನ್ನೆ (ಆಗಸ್ಟ್ 21) ಮನೋರಂಜನ್ ಹಾಗೂ ದೀಪಿಕಾ ಜೋಡಿಯ ರಿಸೆಪ್ಷನ್ ಬಹಳ ಅದ್ಧೂರಿಯಾಗಿ ನೆರವೇರಿದೆ. ವೇದಿಕೆಯಲ್ಲಿ ಮನೋರಂಜನ್ ಕಪ್ಪು ಬಣ್ಣದ ಸೂಟ್‌ ಧರಿಸಿದ್ರೆ, ದೀಪಿಕಾ ಪಿಂಕ್‌ ಕಲರ್ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಶಿವರಾಜ್‌ಕುಮಾರ್ ದಂಪತಿ, ರಾಘವೇಂದ್ರ ರಾಜ್‌ಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ ದಂಪತಿ, ಬಹುಭಾಷಾ ನಟಿ ಖುಷ್ಬೂ, ನಿರೂಪಕ, ನಟ ಮಾಸ್ಟರ್ ಆನಂದ್, ನಿರೂಪಕ ಅಕುಲ್ ಬಾಲಾಜಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ನಾಗಾಭರಣ, ಹಿರಿಯ ನಟ ಸುಚೇಂದ್ರ ಪ್ರಸಾದ್, ಹಿರಿಯ ನಟಿ ಉಮಾಶ್ರೀ, ನಿರ್ಮಾಪಕ ಕೆ. ಮಂಜು, ಬಿಜೆಪಿ ಹಿರಿಯ ಮುಖಂಡ ಕಟ್ಟಾ ಸುಬ್ರಮಣ್ಯ ನಾಯ್ಡು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಸೇರಿದಂತೆ ಸಾಕಷ್ಟು ಗಣ್ಯರು ರಿಸೆಪ್ಷನ್‌ನಲ್ಲಿ ಭಾಗಿಯಾಗಿದ್ದರು.

   ಲವ್ ಕಮ್ ಅರೇಂಜ್ ಮ್ಯಾರೇಜ್

  ಲವ್ ಕಮ್ ಅರೇಂಜ್ ಮ್ಯಾರೇಜ್

  ಇದೊಂದು ಅರೆಂಜ್‌ ಮ್ಯಾರೇಜ್ ಆಗಿದೆ. ಮನೋರಂಜನ್‌ಗೆ ಮದುವೆ ಮಾಡಲು ಮನೆಯಲ್ಲಿ ಹುಡುಗಿಯ ಹುಡುಕಾಟದಲ್ಲಿ ಇದ್ದಾಗ ಸಂಗೀತಾ ಅವರ ಪ್ರಪೋಸಲ್ ಬಂದಿತ್ತು. ಎಲ್ಲರೂ ಒಪ್ಪಿ ಈಗ ಮದುವೆ ನಡೆಯುತ್ತಿದೆ. ಮನು ಕೈ ಹಿಡಿಯುತ್ತಿರು ಸಂಗೀತಾ ವೈದ್ಯಕೀಯ ವೃತ್ತಿಯಲ್ಲಿ ಇದ್ದು ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ನೆಲೆಸಿದ್ದಾರೆ. ಬಹಳ ವಿಭಿನ್ನವಾಗಿ ರವಿಚಂದ್ರನ್‌ ಮಗನ ಮದುವೆ ಆಮಂತ್ರಣ ಪತ್ರಿಕೆ ಡಿಸೈನ್ ಮಾಡಿಸಿದ್ದರು. ಅದರ ಪ್ರತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಂದು ಮದುವೆ ಶಾಸ್ತ್ರಗಳು ನಡೆಯಲಿದ್ದು, ನಾಳೆ ರವಿಚಂದ್ರನ್ ಫ್ಯಾಮಿಲಿಯಿಂದ ಮತ್ತೊಂದು ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿದೆ.

  English summary
  Celebrities Congratulate Crazy Star Ravichandran Son Manoranjan and Sangeetha on Their Wedding Reception. Know More.
  Monday, August 22, 2022, 9:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X